ಗಣಿಧಣಿ ಜನಾರ್ದನ ರೆಡ್ಡಿ ಬಳ್ಳಾರಿಗೆ ರೀ ಎಂಟ್ರೀ: ಅದ್ದೂರಿಯಾಗಿ ಸ್ವಾಗತಿಸಿದ ಬಳ್ಳಾರಿಗರು

Upayuktha
0


ಬಳ್ಳಾರಿ: 
ಬಳ್ಳಾರಿ ಗಣಿಧಣಿ ಜನಾರ್ಧನರೆಡ್ಡಿಗಾರಿಗೆ ಬಳ್ಳಾರಿಯ ಜನತೆ, ಅಭಿಮಾನಿಗಳು, ಪಕ್ಷದ ಮುಖಂಡರು ಅದ್ದೂರಿಯಾಗಿ ಲೆಕ್ಕಕ್ಕೆ ಮೀರಿ ಸ್ವಾಗತಿಸಿದರು. ಗಾಲಿ ಜನಾರ್ದನರೆಡ್ಡಿ ಸ್ವಾಗತಕ್ಕೆ ಪಾಲಿಕೆ ಸದಸ್ಯರು ಅಗಿರುವ ಬಳ್ಳಾರಿಯ  ಶ್ರೀನಿವಾಸ ಮೋತ್ಕರ್, ವೇಮಣ್ಣ, ಮಲ್ಲನಗೌಡ, ಕಪ್ಪಗಲ್ಲ್ ರಸ್ತೆ ಹನುಮಂತ, ತಾಳರು ರಸ್ತೆ ಹನುಮಂತ, ಇಬ್ರಾಹಿಂ ಬಾಬು ಅಶೋಕ್, ಸುರೇಂದ್ರ, ವೀರಶೆಖರ್‌ರೆಡ್ಡಿ , ಪೊಲಕ್‌ರೆಡ್ಡಿ ಮುಂತಾದ ಬಿಜೆಪಿ ಮುಖಂಡರು ಸ್ವಾಗತಿಸಿದರು. 


ಸಾವಿರಾರು ಕಾರ್ಯಕರ್ತರು ಅಲ್ಲಿಪುರ ತಾತನ ಮಠದಲ್ಲಿ ಜಾಮಾಯಿಸಿದ್ದರು. ಪಾಲಿಕೆ ಸದಸ್ಯರು ಮಾತ್ರ ಕೆನಾಲ್ ದಾಟಿ ಬೆಸ್ಟ್ ಶಾಲೆ ಹತ್ತರದಲ್ಲಿ ನಿಂತು ಸ್ವಾಗತಿಸಿದರು. ಗಂಗಾವತಿಯಿಂದ ರೆಡ್ಡಿ ಜೊತೆಯಲ್ಲಿ ಅಲಿಖಾನ್, ದಮ್ಮೂರ್ ಶೇಖರ್ ಮತ್ತು ಗಂಗಾವತಿಯಿಂದ ರಸ್ತೆಯ ಮೂಲಕ ಸಾವಿರಾರು ಕಾರ್ಯಕರ್ತರು, ಗಾಡಿಗಳು, ಕಾರ್‌ಗಳಲ್ಲಿ ಬಂದಿದ್ದರು. 


ಬಳ್ಳಾರಿಯಲ್ಲಿ ಲೆಕ್ಕಕ್ಕೆ ಮೀರಿ ಗಾಲಿ ಜನಾರ್ದನ ರೆಡ್ಡಿ ಆಪ್ತರುಅಭಿಮಾನಿಗಳು ಆಗಮಿಸಿ ಸಂಭ್ರಮದಿಂದ ಸ್ವಾಗತಿಸಿದರು. ರೆಡ್ಡಿ ಗಾರು ಮುಖದಲ್ಲಿ ಮಂದಹಾಸ ಮತ್ತೆ ನವಯವ್ವನ ಮದುಮಗನ ರೀತಿಯಲ್ಲಿ ಸಂತೋಷದಿಂದ ಜನರಿಗೆ ವಿಷ್ ಮಾಡಿದರು.


ನೋಡಬೇಕಿದೆರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top