ಅಸ್ಪೃಶ್ಯತೆ ನಿವಾರಣೆ: ಇನ್ನಷ್ಟು ಪರಿಣಾಮಕಾರಿಯಾಗಬೇಕು

Upayuktha
0

ಪ್ರಾತಿನಿಧಿಕ ಚಿತ್ರ (ಕೃಪೆ: ಡೆಕ್ಕನ್ ಹೆರಾಲ್ಡ್)


ಸ್ಪೃಶ್ಯರು ಯಾರು? ಏಕೆ ಅವರನ್ನು ಹಾಗೆ ನಡೆಸಿಕೊಳ್ಳುತ್ತಾರೆ? ಎಂಬ ಪ್ರಶ್ನೆಗಳು ಹಲವರಲ್ಲಿ ಮೂಡುವುದು ಸಹಜ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಮಕ್ಕಳಲ್ಲಿ. ಅಸ್ಪೃಶ್ಯತೆ ಅಂದರೆ ಸ್ಪರ್ಶ ಮಾಡಲಾಗದ ವಸ್ತುಗಳು ಎಂದರ್ಥ. ಅಸ್ಪೃಶ್ಯರನ್ನು ದಲಿತರು ಎಂದು ಕರೆಯಲಾಗುತ್ತಿತ್ತು. ಇದು ಕೇವಲ ಭಾರತ ಮಾತ್ರವಲ್ಲದೆ ಜಪಾನ್ ಮತ್ತು ಕೊರಿಯಾದಲ್ಲಿಯೂ ಪ್ರಚಲಿತವಾಗಿದೆ.


ಅಸ್ಪೃಶ್ಯತೆ ಆಚರಣೆಗಳ ವಿರುದ್ಧ ಶ್ರಮಿಸಿದವರಲ್ಲಿ ನಮಗೆ ತತ್‌ಕ್ಷಣ ನೆನಪಾಗುವುದು ಡಾ. ಬಿ ಆರ್ ಅಂಬೇಡ್ಕರ್ ರವರು ಜೊತೆಗೆ ಮಹಾತ್ಮ ಗಾಂಧೀಜಿ, ಪುಲೆ ಈಶ್ವರಚಂದ್ರ  ವಿದ್ಯಾಸಾಗರ, ರಾಜಾರಾಮ್ ಮೋಹನ್ ರಾಯ್, ಸ್ವಾಮಿ ವಿವೇಕಾನಂದರು ಸೇರಿದಂತೆ ಹಲವರು ಅಸ್ಪೃಶ್ಯತೆಯ ವಿರುದ್ಧ ಶ್ರಮಿಸಿದ್ದಾರೆ. ಗಾಂಧೀಜಿ ಅಸ್ಪೃಶ್ಯರನ್ನ ‘ಹರಿಜನರು’ ಅಂದ್ರೆ ‘ದೇವರ ಮಕ್ಕಳು’ ಎಂದು ಕರೆದರು. ಈ ಸಾಮಾಜಿಕ ಅಡೆತಡೆಗಳನ್ನು ತೆಗೆದು ಹಾಕಲು ಮತ್ತು ದಮನಿತ ವರ್ಗಗಳ ಮೇಲೆ ಪ್ರಾಬಲ್ಯ ಸಾಧಿಸಲು ದಶಕಗಳ ಕಾಲ ಹೋರಾಡಿದ ನಂತರ ಅಸ್ಪೃಶ್ಯತೆ ಆಚರಣೆಯನ್ನು ಅಂತಿಮವಾಗಿ ಮತ್ತು ಕಾನೂನು ಬದ್ಧವಾಗಿ ಭಾರತ ಸರ್ಕಾರ ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು 1955ರಲ್ಲಿ ಜಾರಿಗೊಳಿಸಲಾಯಿತು.


ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದ್ದು, ಅಸ್ಪೃಶ್ಯತೆ ನಿರ್ಮೂಲನೆಯಾಗಿದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸಲಾಗಿದೆ, ಅಸ್ಪೃಶ್ಯತೆಯಿಂದ ಉಂಟಾಗುವ ಯಾವುದೇ ಅಂಗವೈಕಲ್ಯವನ್ನು ಜಾರಿಗೊಳಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಅಂದರೆ ಯಾವುದೇ ಜಾತಿ, ಬಣ್ಣ ಅಥವಾ ಪಂಥವನ್ನು ಲೆಕ್ಕಿಸದೆ ಯಾವುದೇ ರೀತಿಯಲ್ಲಿ ಅಸ್ಪೃಶ್ಯತೆಯನ್ನು ಯಾರಾದರೂ ಆಚರಣೆಗಳನ್ನು ಮಾಡಿದರೆ ಅದನ್ನ ಕಾನೂನಿನ ಮೂಲಕ ಹೊಣೆಗಾರ ಮತ್ತು ಶಿಕ್ಷೆಗೆ ಒಳಪಡಿಸಲಾಗುತ್ತದೆ.


1976ರಲ್ಲಿ ನಾಗರಿಕರ ಹಕ್ಕುಗಳ ಕಾಯ್ದೆ ಎಂದು ಮಾರ್ಪಾಡುಗೊಳಿಸಲಾಯಿತು. 1989 ರ ಶಾಸನವೂ ಅಸ್ಪೃಶ್ಯತೆ ನಿರ್ಮೂಲನೆ ಕುರಿತಾದ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ. ನಮ್ಮ ಭಾರತ ಸಂವಿಧಾನವು ಈ ಆಚರಣೆಯನ್ನು ನಿಷೇಧಿಸಿದ್ದರೂ ಈ ಪಿಡುಗು ಶಾಪವೂ ಭಾರತದ ಅನೇಕ ಭಾಗಗಳಲ್ಲಿ ಇನ್ನೂ ಪ್ರಚಲಿತದಲ್ಲಿದೆ. ಅಸ್ಪೃಶ್ಯರು ಇಂದಿಗೂ ತಮ್ಮ ಉನ್ನತಿ ಮತ್ತು ಗುರುತಿಗಾಗಿ ಹೋರಾಡುತ್ತಿದ್ದಾರೆ.


ನಾನು ಹಳ್ಳಿಯವನಾಗಿದ್ದು, ನನ್ನ ತಂದೆ ಗ್ರಾಮದ ಗೌಡ್ರ ತೋಟದ ಕೆಲಸಕ್ಕೆ ಹೋಗುತ್ತಿದ್ದಾಗ ಶಾಲಾ ರಜ ದಿನಗಳಲ್ಲಿ ನಾನು ಸಹ ಜೊತೆ ಹೋಗುತ್ತಿದ್ದೆ. ಆಗ ಹೊರಗೆ ಕೂತು ಪ್ರತ್ಯೇಕವಾಗಿ ಮೊದಲೇ ನಮ್ಮಂತವರಿಗೆ ಮೀಸಲಿಟ್ಟ ತಟ್ಟೆಯಲ್ಲಿ ಊಟವನ್ನು ಮಾಡುತ್ತಿದ್ದೆವು. ಹಾಗೆ ನನಗೆ ಒಂದಿನ ಕಿರುವಯಸ್ಸಿನಲ್ಲಿ ಜ್ವರ ಬಂದಿದ್ದರಿಂದ ನನ್ನ ತಾಯಿ ಗ್ರಾಮ ದೇವತೆ ಐಗಂಡಲಮ್ಮ ದೇವಸ್ಥಾನದ ಪೂಜಾರಿ ಬಳಿ ಮಂತ್ರ ಹಾಕಿಸಲು ಕರೆದುಕೊಂಡು ಹೋದಾಗ ದೇವಸ್ಥಾನದ ಬಾಗಿಲಿನಲ್ಲಿ ಕುಳಿತಿದ್ದೆವು. ಅಮ್ಮ ಯಾಕೆ? ಒಳಗಡೆ ಹೋಗೋಣ ಎಂದಾಗ ಒಳಗೆ ಹೋಗಬಾರದು ಸುಮ್ನಿರು ಎಂದು ಹೇಳಿದರು. ಇಂದಿಗೂ ಸಹ ಅದೇ ದುಸ್ಥಿತಿ, ದುರಂತ ಇನ್ನು ಹಲವಾರು ಕಡೆ.


ಭಾರತದ ಪ್ರಜಾಸತಾತ್ಮಕ ಗಣರಾಜ್ಯದ ನಾಗರಿಕರಾಗಿ ಪರಂಪರೆ ನಡೆಸುವುದು ನಮ್ಮೆಲ್ಲರ  ಜವಾಬ್ದಾರಿ. ನಾನು ಅಸ್ಪೃಶ್ಯತೆಯನ್ನು ಮಾನಸಿಕ ಖಿನ್ನತೆ (Mental illness) ಎಂದು ಕರೆಯುತ್ತೇನೆ. ಇದಕ್ಕೆ ಸೂಕ್ತವಾದ ಚಿಕಿತ್ಸೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ಇಂದಿನ ದಿನಗಳಲ್ಲಿ ಶಿಕ್ಷಣ ಪಡೆದವರು ಅಸ್ಪೃಶ್ಯತೆ ಆಚರಣೆ ಮಾಡುವುದನ್ನು ಕಾಣಬಹುದು. ಯಾವ ಶಿಕ್ಷಣ? ಹೇಗೆ? ಎಂಬ  ಪ್ರಶ್ನೆಯನ್ನು ಹಾಕಿಕೊಳ್ಳುವುದು ಸಹಜವೇ. ಸುಶಿಕ್ಷಣ, ಮೌಲ್ಯಯುತ ಶಿಕ್ಷಣವನ್ನು ನಾವು ವಿದ್ಯಾರ್ಥಿಗಳಲ್ಲಿ ಮಕ್ಕಳಲ್ಲಿ ಬಿತ್ತಬೇಕಾಗಿದೆ. ಇದರಿಂದ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ. ಕಾನೂನುಗಳನ್ನು ಬಲಪಡಿಸಬೇಕು. ಆರ್ಥಿಕ ಸೌಲಭ್ಯಗಳು, ವಸತಿ ಸೌಲಭ್ಯಗಳು, ಉದ್ಯೋಗ ಸೌಲಭ್ಯಗಳು, ಕೊಳಕು ಉದ್ಯೋಗಗಳಿಂದ ವಿಮೋಚನೆ, ಜಾತಿ ಪದ್ಧತಿ ನಿರ್ಮೂಲನೆ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಂತರ್ಜಾತಿ ಸ್ನೇಹಿತರ ಮನೆಯಲ್ಲಿ ಊಟ ಮಾಡುವುದು, ಅಸ್ಪೃಶ್ಯತೆ ವಿರುದ್ಧ ಪ್ರಚಾರ ಜಾಗೃತಿ, ಸತ್ಯಗಳನ್ನು ಮನದಟ್ಟು ಮಾಡುವುದರ ಮೂಲಕ ಪ್ರಬಲವಾಗಿ ಒಗ್ಗೂಡಿ ಮುನ್ನಡೆಯಬೇಕಿದೆ. ನಮ್ಮ ಸುಧಾರಕರು ಮತ್ತು ನಮ್ಮ ಸಂವಿಧಾನ ತಯಾರಕರ ಸಾಮಾಜಿಕ ಕಾರ್ಯಗಳು ಹಾಗೂ ಭಾರತವನ್ನು ಉತ್ತಮ ಮತ್ತು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಮುನ್ನುಗ್ಗಬೇಕಿದೆ. ಇಂದು ಸಣ್ಣ ಹೆಜ್ಜೆ ನಾಳೆ ದೊಡ್ಡ ಹೆಜ್ಜೆಯಾಗಿ ಬದಲಾಗುತ್ತದೆ.


- ಪ್ರಜ್ವಲ್ ಕೆ ವಿ, ಚಿಕ್ಕಬಳ್ಳಾಪುರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top