ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲಿನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 5 ರಿಂದ 12ರ ವರೆಗೆ ದಸರಾ ಪ್ರಯುಕ್ತ ಬ್ರಹ್ಮೋತ್ಸವ ಏರ್ಪಡಿಸಿದ್ದು ಬೆಳಗ್ಗೆ ಪೂಜಾ ಕೈಂಕರ್ಯಗಳು ಸಂಜೆ 6-00 ಗಂಟೆಗೆ "ಊಂಜಲ್ ಸಂಗೀತೋತ್ಸವ" ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಊಂಜಲ್ ಸಂಗೀತೋತ್ಸವ : ಅಕ್ಟೋಬರ್ 5 ರಂದು ಶ್ರೀಮತಿ ಗೀತಾ ಭತ್ತದ್ ಮತ್ತು ಸಂಗಡಿಗರು
ಅಕ್ಟೋಬರ್ 6 ರಂದು ಶ್ರೀಮತಿ ಲಕ್ಷ್ಮೀ ವರುಣ್ ಮತ್ತು ಸಂಗಡಿಗರು
ಅಕ್ಟೋಬರ್ 7 ರಂದು ಶ್ರೀ ಭಾರ್ಗವ್ ರಂಗನಾಥ್ ಮತ್ತು ಸಂಗಡಿಗರು
ಅಕ್ಟೋಬರ್ 8 ರಂದು ಶ್ರೀಮತಿ ಸುಷ್ಮಾ ಶ್ರೇಯಸ್ (ಗಾಯನ), ಶ್ರೀ ಟಿ. ಎಸ್. ರಮೇಶ್ (ಕೀ-ಬೋರ್ಡ್), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ)
ಅಕ್ಟೋಬರ್ 9 ರಂದು ಶ್ರೀಮತಿ ವಿನಯಾ ಪ್ರಮೋದ್ (ಗಾಯನ), ಶ್ರೀ ಎಸ್. ಶಶಿಧರ್ (ಪಿಟೀಲು), ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ)
ಅಕ್ಟೋಬರ್ 10 ರಂದು ಕು|| ಪ್ರಣೀತಾ ಟಿ. ಮಣೂರ್ (ಗಾಯನ), ಶ್ರೀ ಎಸ್. ಶಶಿಧರ್ (ಪಿಟೀಲು), ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ)
ಅಕ್ಟೋಬರ್ 11 ರಂದು ಕು|| ಭಾವನಾ ಉಮೇಶ್ (ಗಾಯನ), ಶ್ರೀ ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು) ಶ್ರೀ ಮುರಳಿ ನಾರಾಯಣರಾವ್ (ಮೃದಂಗ)
ಅಕ್ಟೋಬರ್ 12 ರಂದು ಕು|| ಎಸ್.ವಿ. ಚಂದನ (ಗಾಯನ), ಶ್ರೀ ಟಿ.ಎಸ್. ರಮೇಶ್ (ಕೀ-ಬೋರ್ಡ್), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಶ್ರೀನಿವಾಸನ ಕೃಪೆಗೆ ಪಾತ್ರರಾಗಬೇಕೆಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ. ಸ್ಥಳ : ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ) 16ನೇ ಅಡ್ಡರಸ್ತೆ, ಗಾಯಿತ್ರಿದೇವಿ ಪಾರ್ಕ್ ಎಕ್ಸೆಟೆನ್ಶನ್, ವಯ್ಯಾಲಿಕಾವಲ್, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ