ವಿವೇಕಾನಂದ ಕಾಲೇಜಿನಲ್ಲಿ ಶಿವರಾಮ ಕಾರಂತರ ಕುರಿತ ವಿಶೇಷ ಉಪನ್ಯಾಸ
ಪುತ್ತೂರು: ಶಿವರಾಮ ಕಾರಂತರು ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಅಂತೆಯೇ ಪರಿಸರದ ಬಗೆಗೆ ಅತೀವ ಕಾಳಜಿಯುಳ್ಳವರಾಗಿದ್ದವರು. ನಾವು ಬದುಕುವ ಪರಿಸರ, ನಾವು ಉಸಿರಾಡುವ ಗಾಳಿ, ಸೇವಿಸುವ ಆಹಾರ, ಕುಡಿಯುವ ನೀರು ಇವೆಲ್ಲದರ ಪ್ರಾಮುಖ್ಯತೆಯನ್ನು ಎಲ್ಲರಿಗೂ ತಿಳಿಸಿಕೊಟ್ಟು ಕನ್ನಡ ಸಾಹಿತ್ಯದ ಮುಖೇನ ಜಾಗೃತಿ ಮೂಡಿಸಿದವರು ಶಿವರಾಮ ಕಾರಂತರು. ಕಾರಂತರು ತಾವು ಬದುಕಿದ ಹಾಗೆ ಬರೆದವರು, ಬರೆದ ಹಾಗೆ ಬಾಳಿದವರು ಎಂದು ಸರ್ಕಾರಿ ಮಹಿಳಾ ದರ್ಜೆ ಕಾಲೇಜು ಪುತ್ತೂರು ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಇವರು ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐ.ಕ್ಯೂ.ಎ.ಸಿ, ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಶಿವರಾಮ ಕಾರಂತರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತುಗಳನ್ನಾಡಿ, ಕಾರಂತರಂತವರ ಪುಸ್ತಕಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಹಿಂದಿನ ಕಾಲದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಅನೇಕ ಸಾಧನೆಯನ್ನು ಮಾಡಿದ ಮಹಾನ್ ಸಾಧಕರಿದ್ದು, ಅಂತಹ ಸಾಧಕರಲ್ಲಿ ಶಿವರಾಮ ಕಾರಂತರು ಕೂಡ ಒಬ್ಬರು. ಕಾರಂತರು ಓರ್ವ ವಾಸ್ತವವಾದಿ ಎಂದರೆ ತಪ್ಪಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಮತ್ತು ಪರೀಕ್ಷಾಂಗ ಕುಲ ಸಚಿವ ಡಾ. ಎಚ್. ಜಿ. ಶ್ರೀಧರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಶಿವರಾಮ ಅಧ್ಯಯನ ಕೇಂದ್ರದ ಸಂಯೋಜಕ ಮತ್ತು ಉಪನ್ಯಾಸಕ ಡಾ. ಪ್ರಮೋದ್ ಎಂ.ಜಿ ವಂದಿಸಿ, ಕೃತಿ.ಪಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ