ಉಡುಪಿ: ರಾಜಾಂಗಣದಲ್ಲಿ ರಾರಾಜಿಸುತ್ತಿರುವ ಗೂಡುದೀಪಗಳ ಸರಮಾಲೆ

Upayuktha
0

ಗೂಡು ದೀಪ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ

ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಿಂದ ಆಯೋಜಿಸಲ್ಪಟ್ಟ ಗೂಡು ದೀಪ ಸ್ಪರ್ಧೆ.




ಉಡುಪಿ: ಗೂಡು ದೀಪ ಪ್ರದರ್ಶನ ಉದ್ಘಾಟನೆ ಮತ್ತು ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮಂಗಳವಾರ (ಅ.29) ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.


ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಸಾಂಪ್ರದಾಯಿಕ ಮತ್ತು ಆಧುನಿಕ ಗೂಡುದೀಪಗಳ ಸ್ಪರ್ಧೆಯಲ್ಲಿ  ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಸ್ಪರ್ಧೆಯ ಫಲಿತಾಂಶ ಹೀಗಿದೆ: ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ಬಹುಮಾನ ರಕ್ಷಿತ್ ಕುಮಾರ್ ಮಂಗಳೂರು, ದ್ವಿತೀಯ ಬಹುಮಾನ ನಾಗೇಂದ್ರ ಕೋಟ, ತೃತೀಯ ಬಹುಮಾನ ವಿದ್ಯಾ ಅದಿತಿ ಉಡುಪಿ, ಸಮಾಧಾನಕರ ಬಹುಮಾನ ಕೌಶಿಕ್ ಉಡುಪಿ ಮತ್ತು ಶೋಭಿತ್ ತೆಕ್ಕೆಟ್ಟೆ ಪಡೆದಿರುತ್ತಾರೆ.


ಆಧುನಿಕ ವಿಭಾಗದ ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜಗದೀಶ್ ಅಮೀನ್ ಬಜಪೆ, ದ್ವಿತೀಯ ಬಹುಮಾನ ಗೀತಾಮಲ್ಯ ಮಂಗಳೂರು,  ತ್ರತೀಯ ಬಹುಮಾನ ವೈಶಾಲ್ ಅಂಚನ್ ಕಟೀಲು, ಸಮಾಧಾನಕರ ಬಹುಮಾನ ಪಂಚಮಿ ಪ್ರೀತಂ ಪರ್ಕಳ, ನಾಗಶ್ರೀ ರಾವ್ ಮಾರ್ಪಳ್ಳಿ ಮತ್ತು ಸಿಂಧೂರ ಬೈಲಕೆರೆ ಗಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top