ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟ

Upayuktha
0

ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್


ಮೂಡುಬಿದಿರೆ:
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವಿಭಾಗ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜು ಜಿಲ್ಲಾ ಮಟ್ಟದ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟ ಮಂಗಳೂರು ಸ್ಟ್ರಿಂಗ್  ಇನ್‌ಸ್ಟಿಟ್ಯೂಟ್ ಪ್ರಾಯೋಜಕತ್ವದಲ್ಲಿ ನೂಜಿಬಾಳ್ತಿಲದಲ್ಲಿ ನಡೆಯಿತು. ಆಳ್ವಾಸ್ ಪ.ಪೂ. ಕಾಲೇಜು ಬಾಲಕರ ಹಾಗೂ ಬಾಲಕಿಯರ ತಂಡ ಎರಡೂ ವಿಭಾಗದಲ್ಲಿ ಚಾಂಪಿಯನ್ ಆಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ಬಾಲಕರ ವಿಭಾಗ: ರಂಗಣ್ಣ ನಾಯಕರ್– ಪ್ರಥಮ (ಸ್ವಾಮಿ ವಿವೇಕಾನಂದ ಪ.ಪೂ ಕಾಲೇಜು ಎಡಪದವು), ರಘುವೀರ್-ದ್ವಿತೀಯ (ಆಳ್ವಾಸ್ ಪ.ಪೂ ಮೂಡುಬಿದಿರೆ), ದರ್ಶನ್-ತೃತೀಯ (ಎಸ್.ಡಿ.ಎಮ್. ಪ.ಪೂ ಉಜಿರೆ) ಹನುಮಂತಯ್ಯ - ನಾಲ್ಕನೇ ಸ್ಥಾನ, ಶಿವಾನಂದ- ಐದನೇ ಸ್ಥಾನ (ಆಳ್ವಾಸ್ ಪ.ಪೂ ಮೂಡುಬಿದಿರೆ), ಆದಿತ್ಯ- ಆರನೇ ಸ್ಥಾನ (ಎಸ್.ಡಿ.ಎಂ.ಪ.ಪೂ ಉಜಿರೆ) ಪಡೆದರು.  


ಬಾಲಕಿಯರ ವಿಭಾಗ : ಚರಿಷ್ಮಾ-ಪ್ರಥಮ, ಘಾನವಿ - ದ್ವಿತೀಯ (ಆಳ್ವಾಸ್ ಪ.ಪೂ ಮೂಡುಬಿದಿರೆ), ದೀಪ್ತಿ-ತೃತೀಯ (ಅರಂತೋಡು ಎಸ್.ಎಂ. ಪಿ ಯು ಕಾಲೇಜು ಸುಳ್ಯ) ಅಂಬಿಕಾ -4ನೇ ಸ್ಥಾನ, ನವಿತಾ -5ನೇ ಸ್ಥಾನ (ಆಳ್ವಾಸ್ ಪ.ಪೂ ಮೂಡುಬಿದಿರೆ),  ಸ್ವಾತಿ – 6ನೇ ಸ್ಥಾನ (ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜು) ಪಡೆದರು.


ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top