ಗರಬಾದಲ್ಲಿ ಕೇವಲ ಹಿಂದೂಗಳಿಗೆ ಪ್ರವೇಶ ನೀಡಿ: ಹಿಂದೂ ಜನಜಾಗೃತಿ ಸಮಿತಿಯ ಕರೆ

Upayuktha
0


’ಲವ್ ಜಿಹಾದ್’ ತಡೆಗಟ್ಟಲು ಈ ಕ್ರಮ ಅಗತ್ಯ


ವರಾತ್ರಿಯು ಶ್ರೀ ಆದಿಶಕ್ತಿಯ ಉಪಾಸನೆ, ಮಾಂಗಲ್ಯ ಮತ್ತು ಪವಿತ್ರತೆಯ ಹಬ್ಬವಾಗಿದೆ; ಆದರೆ ಇಂದು ದೇಶಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರ, ಲಕ್ಷಗಟ್ಟಲೆ ಮಹಿಳೆಯರ ನಾಪತ್ತೆ, ಹಿಂದೂ ಹೆಣ್ಣುಮಕ್ಕಳನ್ನು ’ಲವ್ ಜಿಹಾದ್’ ಮೂಲಕ ಗುರಿ ಮಾಡುವುದು ಹೀಗೆ ಹಲವು ರೀತಿಯ ದೌರ್ಜನ್ಯಗಳು ದೊಡ್ಡ ಮಟ್ಟದಲ್ಲಿ ಬಯಲಾಗುತ್ತಿವೆ. ಆದ್ದರಿಂದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಲವ್ ಜಿಹಾದ್ ಗಳಿಂದ ಮಹಿಳೆಯರ ಸುರಕ್ಷತೆ, ಹಬ್ಬದ ಪಾವಿತ್ರ್ಯತೆ ಕಾಪಾಡುವುದು ಅಗತ್ಯವಾಗಿದೆ. 


ಆದ್ದರಿಂದ ಮೂರ್ತಿಪೂಜೆಯನ್ನು ಒಪ್ಪದವರಿಗೆ ನವರಾತ್ರಿಯಲ್ಲಿ ದೇವಿಯ ಮೂರ್ತಿಯ ಮುಂದೆ ಗರಬಾ ಆಡಲು ಬಿಡಬಾರದು. ಗರಬಾ ಹಿಂದೂ ಧಾರ್ಮಿಕ ಹಬ್ಬವಾಗಿದೆ. ಹಿಂದೂ ದೇವರಲ್ಲಿ ನಂಬಿಕೆ ಇರುವವರು ಮಾತ್ರ ಅಲ್ಲಿಗೆ ಬರಬೇಕು. ಮೂರ್ತಿಪೂಜೆಯಲ್ಲಿ ಶ್ರದ್ಧೆ ಇಲ್ಲದವರು ಗರಬಾ ಪ್ರವೇಶಿಸಲು ಪ್ರಯತ್ನಿಸುವವರಿಂದ ’ಲವ್ ಜಿಹಾದ್’ ಅಪಾಯವುಂಟಾಗುವ ಸಾಧ್ಯತೆಯಿದೆ. ಆದ್ದರಿಂದ ನವರಾತ್ರಿಯ ಸಂದರ್ಭದಲ್ಲಿ ಗರಬಾ ಆಯೋಜಿಸುವ ಎಲ್ಲ ಸಂಘಟಕರು ಲವ್ ಜಿಹಾದ್ ತಡೆಗಟ್ಟಿ ಹಬ್ಬದ ಪಾವಿತ್ರ್ಯತೆ ಕಾಪಾಡುವಂತೆ ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.


ಈ ನಿಟ್ಟಿನಲ್ಲಿ ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗಳ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಪ್ರತಿಯೊಬ್ಬರ ಆಧಾರ್ ಕಾರ್ಡ್ ನೋಡಿ ಪ್ರವೇಶಕ್ಕೆ ಅವಕಾಶ ನೀಡಲು ನಿರ್ಧರಿಸಿರುವುದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ; ಆದರೆ ಈ ನಿಯಮವನ್ನು ಕೆಲವು ರಾಜ್ಯಗಳು ಅಥವಾ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಜಾರಿಗೆ ತರಬೇಕು. 


ಇಂದು ದೇಶಕ್ಕೆ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ನುಸುಳುಕೋರರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ಪತ್ತೆ ಹಚ್ಚಿವೆ. ಇದು ತುಂಬಾ ಗಂಭೀರವಾಗಿದೆ ಮತ್ತು ನವರಾತ್ರಿ ಹಬ್ಬದ ಸಮಯದಲ್ಲಿ ಕೆಲವು ರೀತಿಯ ದಾಳಿಯನ್ನು ನಡೆಸಲು ಪ್ರಯತ್ನಿಸಬಹುದು. ಆದ್ದರಿಂದ ಗರಬಾ ಆಯೋಜಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.


ನವರಾತ್ರಿಯಲ್ಲಿ ಗರಬಾದಲ್ಲಿ ಭಾಗವಹಿಸಲು ಬಯಸುವ ಹಿಂದೂಯೇತರರು ಮೊದಲು ಶ್ರದ್ಧೆ ಮತ್ತು ಆಚರಣೆಯೊಂದಿಗೆ ಹಿಂದೂ ಧರ್ಮ ಸ್ವೀಕರಿಸಬೇಕು. ಹಿಂದೂ ದೇವರ ಪೂಜೆ ಮಾಡಬೇಕು. ತಿಲಕವನ್ನು ಹಚ್ಚಿದ ನಂತರ ಗರ್ಬೋತ್ಸವದಲ್ಲಿ ಪಾಲ್ಗೊಳ್ಳಬೇಕು. 


ಗಣೇಶೋತ್ಸವ, ರಾಮನವಮಿ ಇತ್ಯಾದಿ ಮೆರವಣಿಗೆಗಳು ನಡೆಯುವಾಗ ಆಕಸ್ಮಿಕವಾಗಿ ಗುಲಾಲ್ ಮೈಮೇಲೆ ಬಿತ್ತೆಂದು, ಅಥವಾ ಧ್ವನಿವರ್ಧಕಗಳನ್ನು ಹಾಕಿದ್ದರಿಂದ ಗಲಭೆ ಸೃಷ್ಟಿಸುವವರು ನವರಾತ್ರಿ ಸಂಭ್ರಮದಲ್ಲಿ ಹೇಗೆ ಸಂತೋಷದಿಂದ ಪಾಲ್ಗೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಹಿಂದೂಯೇತರರು ಯಾವ ಉದ್ದೇಶಕ್ಕಾಗಿ ಗರಬಾ ಪ್ರವೇಶಿಸಲು ಪ್ರಯತ್ನಿಸುತ್ತಾರೆ ಎಂಬುದನ್ನೂ ಗಮನಿಸಬೇಕಿದೆ.


 

ನವರಾತ್ರಿಯೆಂದರೆ ಒಂಬತ್ತು ದಿನ ದೇವಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸುವ ವ್ರತವಾಗಿದೆ. ಅದರ ಪಾವಿತ್ರ್ಯತೆ ಕಾಪಾಡಿಕೊಳ್ಳುವುದು ಅಷ್ಟೇ ಆವಶ್ಯಕ. ಪ್ರಸ್ತುತ, ನವರಾತ್ರಿಯ ಸಮಯದಲ್ಲಿ, ಚಲನಚಿತ್ರಗಳ ಅಶ್ಲೀಲ ಹಾಡುಗಳನ್ನು ನುಡಿಸುವುದು, ಅದಕ್ಕೆ ನೃತ್ಯ ಮಾಡುವುದು, ಮಹಿಳೆಯರಿಗೆ ಕಿರುಕುಳ ನೀಡುವುದು, ತುಂಡು ಬಟ್ಟೆಗಳನ್ನು ಧರಿಸಿ ಗರಬಾದಲ್ಲಿ ಭಾಗವಹಿಸುವುದು ಇತ್ಯಾದಿಗಳು ನಡೆಯುತ್ತವೆ. ಇದು ಮಹಿಳೆಯರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ, ಆದ್ದರಿಂದ ನಾವು ಅದನ್ನು ತಪ್ಪಿಸಬೇಕು. ಹಬ್ಬಗಳನ್ನು ಮಾರುಕಟ್ಟೆಯನ್ನಾಗದಂತೆ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು ಎಂದೂ ಸಮಿತಿ ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top