ಹೃದಯವಾಹಿನಿ ರಜತಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ

Upayuktha
0


ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್‌.ಜಿ ಸಿದ್ದರಾಮಯ್ಯ ಎರಡು ದಿನಗಳ‌ ಕಾಲ‌ ಅಮೇರಿಕನ್ನಡ ದಂಪತಿ ದಿ‌. ಶಿಕಾರಿಪುರ ಹರಿಹರೇಶ್ವರ, ದಿ.ನಾಗಲಕ್ಷಿ ಸಂಸ್ಮರಣಾ ವೇದಿಕೆಯಲ್ಲಿ ನಡೆಯುವ ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನಕ್ಕೆ ಚಾಲನೆ ನೀಡಿದರು.


ಬಳಿಕ‌ ಮಾತನಾಡಿದ ಅವರು ಹೃದಯವಾಹಿನಿ ಬಳಗ ಇಪ್ಪತೈದು ವರ್ಷಗಳಿಂದ ನಾಲ್ವತೈದು ರಾಷ್ಟ್ರಗಳಲ್ಲಿ ಕನ್ನಡ ಸಮ್ಮೇಳನ ಅಯೋಜಿಸಿವ ಮೂಲಕ ಕನ್ನಡದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಸಾಂಸ್ಕೃತಿಕ ವಿಕಾಸಕ್ಕೆ ಪೂರಕವಾಗುವ ರೀತಿಯಲ್ಲಿ ಸಾಗರೋತ್ತರ ಭಾಗದಲ್ಲಿ ಇರುವ ಕನ್ನಡಿಗರನ್ನು ಸಂಘಟಿಸುತ್ತಾ ನಮ್ಮ ರಾಜ್ಯದಲ್ಲಿ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ಅಯೋಜಿಸುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.


ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು‌.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಿಂಗಾಪುರ ಕನ್ನಡ ಸಂಘದ ಮಾಜಿ ಅಧ್ಯಕ್ಷ ವಿ.ಟಿ ಶ್ರೀನಿವಾಸ್, ಕತ್ತಾರ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಅರವಿಂದ್ ಪಾಟೇಲ್, ಅಬುದಾಭಿ ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ ನ ಮಿತ್ರಂಪಾಡಿ ಜಯರಾಮ ರೈ, ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಕತ್ತಾರ್ ಕನ್ನಡ ಸಂಘದ ಅಧ್ಯಕ್ಷ ರವಿ ಶೆಟ್ಟಿ, ಅಮೇರಿಕಾದ ಡಾ.ಉಷಾ ಕೋಲ್ಪೆ, ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಎಸ್‌.ಡಿ.ಟಿ ಪ್ರಸಾದ್, ಪರಿಸರ ಪ್ರೇಮಿ ಕನ್ನಡ ಸುರೇಶ್, ಅನ್ಸಾರ್ ಕಾಟಿಪಳ್ಳ ಮಸ್ಕತ್, ದಿವಾಕರ್ ಪೂಜಾರಿ ಕತ್ತಾರ್,  ಲಕ್ಷ್ಮೀ ಕೃಷ್ಣಮೂರ್ತಿ ಅಮೇರಿಕಾ, ಡಾ.ಸತ್ಯವತಿ ಕೆ.ಆರ್, ರವರಿಗೆ ನವ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಅನಿವಾಸಿ ಕನ್ನಡಿಗರ ಕೋಶ ಇದರ ಕಾರ್ಯದರ್ಶಿ ಲಕ್ಷಮ್ಮಾ, ಬೆಂಗಳೂರು ಶೇಷಾದ್ರಿಪುರಂ ಎಜ್ಯುಕೇಶನ್ ಟ್ರಸ್ಟ್ ಗೌ.ಪ್ರ‌. ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ. ಎಸ್. ರಾಮಾನುಜ, ಈಡನ್ ಗ್ಲೋಬಲ್ ಸ್ಕೂಲ್ ಅಧ್ಯಕ್ಷ ಆಶ್ರಫ್ ಷಾ. ಮಂತೂರು, ಸಲಹಾ ಸಮಿತಿ  ನಿರ್ದೇಶಕ ಮೊಹಮ್ಮದ್ ರಫಿ ಪಾಷ, ತರಬೇತುದಾರ ರಫೀಕ್ ಮಾಸ್ಟರ್ ಅತೂರು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top