ಬಿಎಂಎಸ್ ಮಹಿಳಾ ಮಹಾವಿದ್ಯಾಲಯ: ಪದವಿ ಪ್ರದಾನ ಸಮಾರಂಭ

Upayuktha
0


ಬೆಂಗಳೂರು: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ ಸ್ವಾಯತ್ತ, ಸಂಸ್ಥೆಯು ಆಯೋಜಿಸಿದ ಮೊದಲ ಘಟಿಕೋತ್ಸವನ್ನು, ನಿನ್ನೆ (ಅ.23)  2021-2024 ನೇ ಸಾಲಿನ ವಿದ್ಯಾರ್ಥಿನಿಯರಿಗೆ 'ಅಭಿನಂದನಾ' ಎಂಬ ಶೀರ್ಷಿಕೆ ಅಡಿಯಲ್ಲಿ ಏರ್ಪಡಿಸಲಾಗಿತ್ತು.


ಬಿ.ಎಂ.ಎಸ್. ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ದಾನಿಗಳಾದ ಡಾ. ಬಿ.ಎಸ್. ರಾಗಿಣಿ ನಾರಾಯಣ್ ಅವರು ಶೈಕ್ಷಣಿಕ ಮೆರವಣಿಗೆಯ ಮೂಲಕ ಅತಿಥಿಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದರು.


ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರೀಟಾ ಭಟ್ಟಾಚಾರ್ಜಿ ಅವರು ಗಣ್ಯರನ್ನು, ಪೋಷಕರನ್ನು ಮತ್ತು  ವಿದ್ಯಾರ್ಥಿನಿಯರನ್ನು ಸ್ವಾಗತಿಸಿ ಶುಭ ಕೋರಿ, ಪದವಿ ಪಡೆದ ವಿದ್ಯಾರ್ಥಿನಿಯರಿಗೆ ಮುಂದಿನ ಜೀವನದ ಬಗ್ಗೆ ಹಿತವಚನ ನೀಡಿದರು.


ಡಾ. ಗೀತಶ್ರೀ. ಎಂ ಅವರು 60 ವರ್ಷಗಳನ್ನು ಪೂರ್ಣಗೊಳಿಸಿದ ಬಿ.ಎಂ.ಎಸ್ ಮಹಿಳಾ ಮಹಾವಿದ್ಯಾಲಯದ ಮೈಲುಗಲ್ಲುಗಳನ್ನು ವಿವರಿಸಿದರು.


ಇದೇ ಸಂದರ್ಭದಲ್ಲಿ 60ವರ್ಷ ಪೂರೈಸಿದ ಸಂತೋಷದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದಂತಹ ಡಾ. ಬಿ.ಎಸ್. ರಾಗಿಣಿ ನಾರಾಯಣ್ ಅವರನ್ನು ಸನ್ಮಾನಿಸಿ ಸಂಭ್ರಮಿಸಲಾಯಿತು.


ಡಾ. ಬಿ.ಎಸ್.ರಾಗಿಣಿ ನಾರಾಯಣ್ ಅವರು ರ್ಯಾಂಕ್ ಪಡೆದ ವಿದ್ಯಾರ್ಥಿನಿಯರಿಗೆ ಪದವಿ ಪತ್ರ ಹಾಗೂ ನಗದು ಬಹುಮಾನವನ್ನು ನೀಡಿ ಅಭಿನಂದಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರೊ. ಸಿ.ಎಂ. ತ್ಯಾಗರಾಜ ವೈಸ್ ಚಾನ್ಸಲರ್ ಅವರು  ವಿದ್ಯಾರ್ಥಿನಿಯರನ್ನು  ಇನ್ನೂರು ವರ್ಷದ ಹಿಂದೆ ರಾಣಿ ಚೆನ್ನಮ್ಮ, ಬ್ರಿಟಿಷರ ವಿರುದ್ಧ ಹೋರಾಡಿ ದಿಗ್ವಿಜಯ ಸಾಧಿಸಿದ ವೃತ್ತಾಂತವನ್ನು ತಿಳಿಸಿ, ಆ ದಿನದಂದೇ ವಿದ್ಯಾರ್ಥಿನಿಯರು ಜೀವನದಲ್ಲಿ ದಿಗ್ವಿಜಯ ಸಾಧಿಸಲು ಪದವಿ ಪಡೆಯುತ್ತಿದ್ದಾರೆ ಎಂದು ಹರ್ಷಿಸಿ, ಶುಭ ಹಾರೈಸುತ್ತಾ , ಪ್ರಸಿದ್ಧ ವ್ಯಕ್ತಿಗಳ ಮಾತುಗಳನ್ನು ವಿದ್ಯಾರ್ಥಿನಿಯರಿಗೆ ಹೇಳಿ ಅಭಿನಂದಿಸಿದರು. 


ಎ.ಡಿ.ಎ ಸಂಘದ ನಿರ್ದೇಶಕರು ಹಾಗೂ ವಿಜ್ಞಾನದಲ್ಲಿ 'ಜಿ ' ಪದವಿ ಪಡೆದ ವಿಜ್ಞಾನಿ ಆದ ಶ್ರೀ ದೇಬದತ್ತ ಮಹಾರಾಣ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ "ನಿಮ್ಮ ಜೀವನದುದ್ದಕ್ಕೂ ವಿದ್ಯೆ ನೀಡಿದ ಶಿಕ್ಷಕರಿಗೆ ಕೃತಜ್ಞರಾಗಿ ಹಾಗೂ ಸಮಾಜದ ಒಳಿತಿಗಾಗಿ ನೀವು ಪಡೆದ ವಿದ್ಯೆಯನ್ನು ಉಪಯೋಗಿಸಿ" ಎಂದು ತಿಳಿಸಿ ಶುಭ ಹಾರೈಸಿದರು.


ಶೈಕ್ಷಣಿಕ ಡೀನ್ ಗೀತಶ್ರೀ ಅವರು ಬೋಧಿಸಿದ ಪದವಿ ಪ್ರಮಾಣ ಪತ್ರದ ಪ್ರತಿಜ್ಞಾವಿಧಿಯನ್ನು ಪದವೀಧರರು ಪುನರುಚ್ಚರಿಸಿದರು. ಗಣ್ಯರಿಂದ ವಿದ್ಯಾರ್ಥಿನಿಯರಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಉಪಪ್ರಾಂಶಪಾಲರಾದ ಶ್ರೀಮತಿ ಎ.ಗಾಯತ್ರಿ ಅವರು ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು. ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಎಲ್ಲಾ ಪದವೀಧರರು ಮತ್ತು ಪೋಷಕರಿಗೆ ಊಟದ ವ್ಯವಸ್ಥೆ ಮಾಡುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top