ಮಂಗಳೂರು: ಗ್ರಾಹಕರು ಮತ್ತು ವಿತರಕರು ಹೀಗೆ ಎರಡೂ ವರ್ಗವನ್ನು ರಕ್ಷಿಸುವ ಬದ್ಧತೆಯ ಕ್ರಮವಾಗಿ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ಮಂಚೂಣಿ ಸಂಸ್ಥೆಗಳಲ್ಲಿ ಒಂದಾದ ಆಮ್ವೇ ಇಂಡಿಯಾ ತನ್ನ ಉತ್ಪನ್ನಗಳ ಅನಧಿಕೃತ ಮಾರಾಟ ಬಗ್ಗೆ ಜಾಗೃತಿಯನ್ನು ಮೂಡಿಸಲು ಒಂದು ಸದೃಢ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.
ಸಮಗ್ರ ಕಾರ್ಯತಂತ್ರವು ಅಪಾಯಗಳ ಕುರಿತು ಮಧ್ಯಸ್ಥಿಕೆಗಾರರಿಗೆ ಅರಿವು ಮೂಡಿಸುವ ಪ್ರಯತ್ನ, ಪೂರೈಕೆ ಸರಪಳಿ ನಿಗಾ ವ್ಯವಸ್ಥೆ ವೃದ್ಧಿಸುವುದು, ತಪಿತಸ್ಥರ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅಧಿಕೃತ ವಿತರಕಾರಿಗಾಗಿ ಮಾಹಿತಿ ಶಿಬಿರಗಳು ಮತ್ತು ಸಂಪನ್ಮೂಲಗಳನ್ನು ಒಳಗೊಂಡಿವೆ.
ಆಮ್ವೇ ವಿತರಕರು ಅಥವಾ ಅಧಿಕೃತ ಆಮ್ವೇ ವೆಬ್ಸೈಟ್ ಮೂಲಕ ಖರೀದಿಸಿದಾಗ ಮಾತ್ರ ಗ್ರಾಹಕರು ಅಧಿಕೃತ ಆಮ್ವೇ ಉತ್ಪನ್ನಗಳು ಮತ್ತು ಅದಕ್ಕೆ ಸಂಬಂಧಿಸಿದ ಲಾಭಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಈ ಕ್ರಮವು ಗ್ರಾಹಕರ ರಕ್ಷಣೆಗೆ ಆಮ್ವೇಯ ಬದ್ಧತೆಯನ್ನು ಎತ್ತಿಹಿಡಿಯುತ್ತದೆ ಎಂದು ವಿವರಿಸಿದೆ.
ಭಾರತದಲ್ಲಿ ಎಲ್ಲ ಆಮ್ವೇ ಉತ್ಪನ್ನಗಳ ಗುಣಮಟ್ಟ ಮತ್ತು ಸತ್ಯಾಸತ್ಯತೆಯನ್ನು ಖಾತ್ರಿಪಡಿಸಲು "ಆಮ್ವೇ ನೇರ ಮಾರಾಟಗಾರ ಪಾಲುದಾರರ ಮೂಲಕ ಮಾತ್ರ ಮಾರಾಟ" ಲೇಬಲ್ ನಲ್ಲಿರುತ್ತದೆ. ಅಧಿಕೃತ ಮೂಲಗಳಿಂದ ಖರೀದಿಸುವ ಮೂಲಕ ಗ್ರಾಹಕರು ಯಾವುದೇ ಸಮಸ್ಯೆಗಳಿಗಾಗಿ ಮನಿ-ಬ್ಯಾಕ್ ಗ್ಯಾರಂಟಿ ಬೆಂಬಲಿತ ವಿಶ್ವ-ದರ್ಜೆಯ ಗುಣಮಟ್ಟ ಮತ್ತು ಅಧಿಕೃತ ವಿತರಕರು ಒದಗಿಸಿದ ಅಗತ್ಯ-ಆಧಾರಿತ ಶಿಫಾರಸ್ಸುಗಳ ಲಾಭದ ಖಾತರಿ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ