ಟ್ರೈಕೋಫೇಜಿಯಾ ಎಂಬ ಮಾನಸಿಕ ಖಾಯಿಲೆ

Upayuktha
0


ದೊಂದು ಮಾನಸಿಕ ಖಾಯಿಲೆಯಾಗಿದ್ದು ಹೆಚ್ಚಾಗಿ 12 ವರ್ಷದ ಮೇಲಿನ ಹುಡುಗಿಯರಲ್ಲಿ ಕಂಡು ಬರುತ್ತದೆ. ಈ ಮಾನಸಿಕ ರೋಗದಲ್ಲಿ ವ್ಯಕ್ತಿಗಳು ತಮ್ಮದೇ ತಲೆಯ ಕೂದಲನ್ನು ಕಾರಣವಿಲ್ಲದೆ ಕಿತ್ತು ತಿನ್ನುವ ರೂಡಿ ಮಾಡಿಕೊಳ್ಳುತ್ತಾರೆ. ರಪುಂಜಿಲ್ ಸಿಂಡ್ರೋಮ್ ಎಂದೂ ಈ ರೋಗವನ್ನು ಕರೆಯಲಾಗುತ್ತದೆ. ನಿರಂತರವಾಗಿ ಕೂದಲು ಕಿತ್ತು ತಿನ್ನುವುದರಿಂದ ಹೊಟ್ಟೆಯೊಳಗಿನ ಕರುಳಿನಲ್ಲಿ ಜೀರ್ಣವಾಗಿದೆ ಕೂದಲಯ ಚೆಂಡಿನ ರೂಪದಲ್ಲಿ ಶೇಖರಣೆಯಾಗುತ್ತದೆ. ಕ್ರಮೇಣ ಅಲ್ಲಿ ಸೋಂಕು ತಗುಲಿ, ಕರುಳು ಹುಣ್ಣಾಗಿ, ಕರುಳು ತೂತಾಗಿ ಮಾರಣಾಂತಿಕವಾಗುವ ಸಾಧ್ಯತೆಯೂ ಇರುತ್ತದೆ. ಕಾರಣವಿಲ್ಲದೆ ತಲೆಯಲ್ಲಿನ ಕೂದಲನ್ನು ಕೀಳುವ ಮನೋ ರೋಗಕ್ಕೆ ಟೈಕೋಟಿಲೋ ಮೇನಿಯಾ ಎಂದು ಕರೆಯುಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ರೀತಿ ತಿಂದ ಕೂದಲು ಕರುಳಿನಲ್ಲಿ ಶೇಖರಣೆಯಾಗುತ್ತದೆ. ತಲೆಕೂದಲು ಹೊಟ್ಟೆಯೊಳಗೆ ಜೀರ್ಣವಾಗದೆ ಚೆಂಡಿನ ಆಕಾರದಲ್ಲಿ ಶೇಖರಣೆಯಾಗಿ ಆಹಾರದ ಸರಾಗ ಚಲನೆಗೆ ಅಡ್ಡಿ ಮಾಡುತ್ತದೆ. ಕಾಲಕ್ರಮೇಣ ಈ ಅಡಚಣೆ ಹೆಚ್ಚಾಗುತ್ತಾ ಹೋಗಿ ರೋಗಿಯ ಆರೋಗ್ಯವನ್ನು ಬಿಗಡಾಯಿಸುತ್ತದೆ. 


ಈ ರೋಗಕ್ಕೆ ನಿರ್ದಿಷ್ಟವಾದ ಕಾರಣಗಳು ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳಿಗೆ ತಾವು ಕೂದಲು ತಿನ್ನುತಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಇಂತಹ ರೋಗಿಗಳು ಏಕಾಂತದಲ್ಲಿ ಇರುವಾಗ ತಮಗರಿವಿಲ್ಲದೆ ಕೂದಲು ಕಿತ್ತು ತಿನ್ನುವ ಕೆಟ್ಟ ಚಟ ಬೆಳೆಸಿಕೊಳ್ಳುತ್ತಾರೆ. ಓಸಿಡಿ ಅಥsÀವಾ ಗೀಳು ರೋಗ ಅಥವಾ ಒಬ್ಸೆಸಿವ್ ಕಂಪಲ್‌ಸಿವ್ ಡಿಸ್ ಆರ್ಡರ್ ಎಂಬ ಮನೋರೋಗದ ಭಾಗವಾಗಿರುವ ಈ ವiನೋರೋಗ ಬೇಗನೆ ಗುರುತಿಸಲು ಸಾಧ್ಯವಾಗುವುದಿಲ್ಲ. ಸಾಕಷ್ಟು ಕೂದಲು ತಿಂದ  ವರ್ಷಗಳ ಬಳಿಕ ಕರುಳ ಬೇನೆ ಹೊಟ್ಟೆ ನೋವು ಸಮಸ್ಯೆ ಬಂದಾಗಲೇ ಹೆತ್ತವರಿಗೆ ಅರಿವಾಗುತ್ತದೆ. ಸೂಕ್ಷö್ಮವಾಗಿ ಮಕ್ಕಳನ್ನು ಗಮನಿಸದಲ್ಲಿ ಮಕ್ಕಳ ತಲೆಯಲ್ಲಿನ ಕೂದಲು ವಿರಳವಾಗುವುದನ್ನು ಗಮನಿಸಲು ಸಾಧÀ್ಯವಿದೆ. ಈ ಕಾರಣದಿಂದÀ ಹೆತ್ತವರು ತಮ್ಮ ಮಕ್ಕಳ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯದ ಬಗ್ಗೆಯೂ ಒಂದಷ್ಟು ಗಮನ ಹರಿಸುವುದು ಅತೀ ಅಗತ್ಯವಾಗಿರುತ್ತದೆ. ಯಾಕಾಗಿ ಇವರು ನಮ್ಮದೇ ಕೂದಲನ್ನು ಕಿತ್ತು ತಿನ್ನುತ್ತಾರೆ ಎನ್ನುವುದು ಇನ್ನೂ ಒಡೆಯದ ರಹಸ್ಯವಾಗಿಯೇ ಉಳಿದಿದೆ. ಈ ರೀತಿ ಕೂದಲು ತಿಂದು ಸಮಸ್ಯೆಗೆ ಸಿಲುಕಿದ ಬಾಲಕಿಯೊಬ್ಬಳಲ್ಲಿ ಕೇಳಿದಾಗ ಆಕೆ ನನಗೆ ಈ ರೀತಿ ಕೂದಲು ಕಿತ್ತು ತಿನ್ನುವುದರಿಂದ ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿ ಸಿಗುತ್ತದೆ ಎಂದು ತಿಳಿಸಿರುತ್ತಾಳೆ ಮತ್ತು ಅವರು ಈ ವಿಚಾರವನ್ನು ಯಾರೊಂದಿಗೂ ಹೇಳಲು ಇಚ್ಛಿಸುವುದಿಲ್ಲ ಮತ್ತು ಯಾರು ಇಲ್ಲದ ವೇಳೆಯಲ್ಲಿ ಅವರು ಈ ಕೃತ್ಯವನ್ನುಯ ಮಾಡುತ್ತಾರೆ. ಜಗತ್ತಿನಲ್ಲಿ ಯಾರು ಮಾಡದಿದ್ದ ಕೆಲಸ ತಾವು ಮಾಡುತ್ತಿದ್ದೇವೆ ಎಂಬ ಭಾವನೆ ಅವರ ಮನಸ್ಸಿನಲ್ಲಿ ಇರುತ್ತದೆ ಎಂದು ಮಾನಸಿಕ ತಜ್ಞರು ಅಂದಾಜಿಸಿದ್ದಾರೆ.


ರೋಗದ ಚಿಹ್ನೆಗಳು :-

1. ಮಾನಸಿಕವಾಗಿ ಏಕಾಂತವಾಗಿ ಇರಲು ಈ ರೋಗಿಗಳು ಇಷ್ಟಪಡುತ್ತಾರೆ.

2. ನಿರಂತರವಾಗಿ ಕೂದಲು ತಿಂದಾಗ ಹೊಟ್ಟೆ ಸೋಂಕು ಸಮಸ್ಯೆ ಉಲ್ಬಣವಾಗುತ್ತದೆ.

3. ಕೆಲವೋಂದು ರೋಗಿಗಳಲ್ಲಿ ವಾಂತಿ, ವಾಕರಿಕೆ ಮತ್ತು ನಿಶ್ಯಾಕ್ತಿ ಕಂಡು ಬರುತ್ತದೆ. 

4. ಇದರ ಜೊತೆನೆ ನಿರಾಸಕ್ತಿ, ನಿದ್ರಾಹೀನತೆ, ಊಟ ತಿಂಡಿಗಳ ಮೇಲೆ ಗಮನವಿಲ್ಲದಿರುವುದು ಮತ್ತು ದೇಹ ತೂಕ ಕಡಮೆಯಾಗುವ ಸಾಧ್ಯತೆ ಇರುತ್ತದೆ.

5. ಮುಂದುವರಿದ ಹಂತದಲ್ಲಿ ಕರುಳಿನ ಸೋಂಕು ತಗುಲಿದ ಹೊಟ್ಟೆ ನೋವು, ಜ್ವರ ನಡುಕ ಮತ್ತು ರಕ್ತ ಹೀನತೆ ಕಂಡು ಬರುತ್ತದೆ. 


ಚಿಕಿತ್ಸೆ 

ಟ್ರೈಕೋ ಪೇಜಿಯಾ ಎನ್ನುವುದು ಮಾನಸಿಕ ಖಾಯಿಲೆಯಾದ ಕಾರಣ ಅಂತಹಾ ರೋಗಿಗಳಿಗೆ ಮಾನಿಸಕ ತಜ್ಞರ ಬಳಿ ಆಪ್ತ ಸಮಾಲೋಚನೆ ಅತೀ ಅಗತ್ಯ. ಯಾವ ಕಾರಣದಿಮದ ಈ ರೀತಿ ಸಮಸ್ಯೆ ಉಲ್ಬಣವಾಗಿದೆ ಎಂಬುದನ್ನು ಅರಿತು ಚಿಕಿತ್ಸೆ ನೀಡಬೇಕಾಗುತ್ತದೆ. ಮುಂದುವರಿದೆ ಹಂತದಲ್ಲಿ ಸರ್ಜರಿ ಮುಖಾಂತರ ಹೊಟ್ಟೆಯೊಳಗಿನ ಕೂದಲನ್ನು ತೆಗೆಯ ಬೇಕಾದ ಅನಿವರ‍್ಯತೆ ಇರುತ್ತದೆ. 


ತಡೆಗಟ್ಟುವುದು ಹೇಗೆ? 

ಬೆಳೆಯುತ್ತಿರುವ ಮಕ್ಕಳ ಬಗ್ಗೆ ಹೆತ್ತವರೂ ಯಾವತ್ತೂ ಒಂದು ಕಣ್ಣು ಇಡಲೇ ಬೇಕು. ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ತೀವ್ರ ನಿಗಾ ಇಡಬೇಕಾಗುತ್ತದೆ. ಇಬ್ಬರು ಮಕ್ಕಳು ಇದ್ದಲ್ಲಿ ಅವರ ನಡುವೆ ಪದೇ ಪದೇ ಜಗಳ ಮತ್ತು ಮತ್ಸರ ಭಾವನೆ ಇದ್ದಾಗ ಇಬ್ಬರ ಬಗ್ಗೆಯೂ ಸಮಾನ ಕಾಳಜಿ ನೀಡಬೇಕು ಇಬ್ಬರಿಗೂ ಸಮವಾದ ಪ್ರೀತಿ ಮಮತೆ ಮತ್ತು ವಾತ್ಸಲ್ಯ ನೀಡಬೇಕು ಗಂಡು ಹೆಣ್ಣು ಎಂಬ ಭೇದ ಭಾವ ಮಾಡಲೇಬಾರದು. ಹೆತ್ತವರ ನಡೆ ಮಕ್ಕಳಿಗೆ ಮಾದರಿಯಾಗಿ ಇರಬೇಕು ಮಕ್ಕಳ ಸಣ್ಣ ಪುಟ್ಟ ಬೇಕು ಬೇಡಗಳನ್ನು ನಿರ್ಲಕ್ಷಿಸಬಾರದು ಮಕ್ಕಳಲ್ಲಿ ಯಾವತ್ತು ಅಪರಾಧಿ ಭಾವ ಮತ್ತು ಅನಾಥ ಪ್ರಜ್ಞೆ ಬರದಂತೆ ಎಚ್ಚರ ವಹಿಸಬೇಕು. ಮಕ್ಕಳನ್ನು ಹೆದರಿಸಿ, ಬೆದರಿದಸಿ, ಗದರಿಸಿ ಸರಿ ದಾರಿಗೆ ತರುವುದರ ಬದಲು ಅವರ ಮನಸ್ಸನ್ನು ಅರಿತು ಅವರ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿ ಆತ್ಮ ವಿಶ್ವಾಸಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು.

   

ಕೊನೆಮಾತು 

ಕೂದಲು ತಿನ್ನುವ ಖಾಯಿಲೆ ಉಗುರು ಕಚ್ಚುವ ತುಟಿ ಕಚ್ಚಿಕೊಳ್ಳುವ ಗೀಳಿಗಿಂತಲೂ ಹೆಚ್ಚಿನ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇರುವ ಗೀಳು ರೋಗದ ಒಂದು ಭಾಗವಾಗಿರುತ್ತದೆ. ತಕ್ಷಣವೇ ಗುರುತಿಸಿ ಆಪ್ತ ಸಮಾಲೋಚನೆ ನಡೆಸಿ ನೈತಿಕ ಬೆಂಬಲ ಪ್ರೀತಿ, ಮತ್ತು ಮಮತೆ ನೀಡಿ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ರೋಗವನ್ನು ಸಮನ ಮಾಡಲು ಖಂಡಿತಾ ಸಾಧ್ಯವಿದೆ. 


-ಡಾ|| ಮುರಳಿ ಮೋಹನ್ ಚೂಂತಾರು

BDS,MDS,DNB,MBA,MOSRCSEd

ಬಾಯಿ ಮುಖ ಮತ್ತು ದವಡೆ ಶತ್ರಚಿಕಿತ್ಸಕರು

Mob:9845135787


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top