ಸತತ 18ನೇ ಬಾರಿ ಆಳ್ವಾಸ್ ಶಾಲೆಗೆ ಸಮಗ್ರ ಪ್ರಶಸ್ತಿ

Upayuktha
0

ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ

ಮೂರು ವಿಭಾಗದಲ್ಲಿ ಆಳ್ವಾಸ್‌ಗೆ  ಬೃಹತ್ 143 ಪದಕಗಳ ಗರಿ



ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ, ದ.ಕ. ಹಾಗೂ ಸರಕಾರಿ ಪ್ರೌಢಶಾಲೆ ನೆಲ್ಲಿಕಾರು, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 62 ಚಿನ್ನ, 53 ಬೆಳ್ಳಿ ಮತ್ತು 29 ಕಂಚಿನ ಪದಕಗಳೊಂದಿಗೆ 143 ಪದಕಗಳನ್ನು ಪಡೆದು ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ, ಪ್ರೌಢಶಾಲಾ 14ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಪ್ರೌಢಶಾಲಾ 17ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯೊಂದಿಗೆ ಕ್ರೀಡಾಕೂಟದ ಸತತವಾಗಿ 18ನೇ ಬಾರಿ ಆಳ್ವಾಸ್ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಮೂಡುಬಿದಿರೆ  ತಾಲೂಕು ಗಳಿಸಿದ  ಒಟ್ಟು 143 ಪದಕಗಳು ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ಪಡೆದ ಪದಕಗಳಾಗಿವೆ ಎಂಬುದು ಉಲ್ಲೇಖನಿಯ. 


ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ: 

ಬಾಲಕರ ವಿಭಾಗ: ಸುಭಾಷ್ ಎ ಆರ್ – 13 ಅಂಕ

ಬಾಲಕಿಯರ ವಿಭಾಗ: ರಕ್ಷಿತಾ ಮತ್ತಪ್ಪ – 13 ಅಂಕ, ದೀಪಾ ನಿಂಗಪ್ಪ – 13 ಅಂಕ

ಪ್ರೌಢ ಶಾಲಾ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ: 

ಬಾಲಕರ ವಿಭಾಗ: ಕೌಶಿಕ್ ಪಿ ಶೆಟ್ಟಿಗಾರ್ – 15 ಅಂಕ

ಬಾಲಕಿಯರ ವಿಭಾಗ: ಮೇಘಾ ಅಶೋಕ್ ಪೂಜಾರಿ – 11 ಅಂಕ, ಅಮೂಲ್ಯ ಬಿ – 11 ಅಂಕ

ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ: 

ಬಾಲಕರ ವಿಭಾಗ: ಸಮರ್ಥ್ ಸಂಜೀವ ಕುಮಾರ್ – 15 ಅಂಕ

ಬಾಲಕಿಯರ ವಿಭಾಗ: ಪೂಜಾ – 11 ಅಂಕ

ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top