ಶಿವಮೊಗ್ಗ: ಶಿವಮೊಗ್ಗದ ಮನಸ್ಫೂರ್ತಿ ಕಲಿಕಾ ತರಬೇತಿ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್ ಬಾಗ್, ಡಾ.ವಿದ್ಯಾ ಹಾಗೂ ಮನೋಚಿಕಿತ್ಸಕ ಗಣೇಶ್ ಅವರ ಉಪಸ್ಥಿತಿಯಲ್ಲಿ ಪೋಷಕರ-ಶಿಕ್ಷಕರ ಸಭೆಯನ್ನು ಮನಸ್ಫೂರ್ತಿ ಕಲಿಕಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಪ್ರೀತಿ.ವಿ.ಶಾನ್ ಬಾಗ್ ರವರು "ಮಗುವಿನ ಜೀವನದಲ್ಲಿ ಶಿಕ್ಷಣದಂತೆ ಅವಕಾಶಗಳೂ ಸಹ ಪ್ರಮುಖ ಪಾತ್ರ ವಹಿಸುತ್ತವೆ" ಎಂದು ತಿಳಿಸಿದರು.
ಡಾ.ವಿದ್ಯಾರವರು ಕಲಿಕಾ ನ್ಯೂನ್ಯತೆಯನ್ನು ಗುರುತಿಸುವ ವಿಚಾರಗಳ ಬಗ್ಗೆ ಬೆಳಕನ್ನು ಚೆಲ್ಲಿವ ಕುರಿತು ಮಾತನಾಡುತ್ತಾ "ಪೋಷಕರು ಇದನ್ನು ಗುರುತಿಸಿ ಮಕ್ಕಳ ಎಲ್ಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ಅವರಿಗೆ ಬೆಂಬಲ ನೀಡಬೇಕೆಂದು" ಸಲಹೆ ನೀಡಿದರು.
ಮನೋಚಿಕಿತ್ಸಕರಾದ ಗಣೇಶ್ ರವರು ಮಾತನಾಡುತ್ತಾ "ಮಕ್ಕಳಲ್ಲಿನ ನ್ಯೂನತೆಗಳನ್ನು ಗುರುತಿಸಿ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವಲ್ಲಿ ಹಾಗೂ ಮಕ್ಕಳನ್ನು ಈ ಸಮಸ್ಯೆಗಳಿಂದ ಹೊರತರುವಲ್ಲಿ ಪೋಷಕರ ಪಾತ್ರ ಅತ್ಯಂತ ನಿರ್ಣಾಯಕವಾದದ್ದು" ಎಂದು ಅಭಿಪ್ರಾಯಪಟ್ಟರು.
ಈ ಸಭೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪೋಷಕರ ಸಭೆಯ ಉದ್ದೇಶವನ್ನು ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದ ಸಂಯೋಜಕಿ ಶ್ರೀಮತಿ ರಂಗನಾಯಕಿಯವರು ತಿಳಿಸಿದರು. ಈ ಸಭೆಯಲ್ಲಿ ಸುಮಾರು 40 ಕ್ಕಿಂತಲೂ ಹೆಚ್ಚು ಪೋಷಕರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು. ಮನಸ್ಪೂರ್ತಿ ಕಲಿಕಾ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ