ಸುರತ್ಕಲ್: ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ ದ್ವಿತೀಯ ಬಿ.ಎ ವಿದ್ಯಾರ್ಥಿನಿ ಮಂಜುಳಾರವರು ಮಹೇಶ್ ಆರ್. ನಾಯಕ್ ಬ ರೆದಿರುವ ಜಪಾನೀ ಪ್ಲೇಟ್ ಎಂಬ ಕಥಾ ಸಂಕಲನವನ್ನು ಪರಿಚಯಿಸಿದರು.
ಮಂಜುಳಾ ಅವರು “ಜಪಾನೀ ಪ್ಲೇಟ್” ಕಥಾ ಸಂಕಲನವನ್ನು ಪರಿಚಯಿಸಿ ಮಾನವೀಯ ಸಂಬಂಧಗಳ ಕುರಿತು ವಿವಿಧ ನೆಲೆಗಳಲ್ಲಿ ಕಥೆಗಳು ವ್ಯಾಖ್ಯಾನ ಮಾಡುತ್ತಿವೆ ಆಧುನಿಕ ಬದುಕಿನ ವಿವಿಧ ಸ್ತರಗಳನ್ನು ಕಥೆಗಳು ನಿರೂಪಿಸುತ್ತವೆ ಎಂದರು. ಮಂಜುಳಾ ಅವರಿಗೆ ಮಹೇಶ್ ಆರ್. ನಾಯಕ್ ಸ್ಮರಣಿಕೆ ನೀಡಿ ಗೌರವಿಸಿದರು. ಮಹೇಶ್ ಆರ್. ನಾಯಕ್ ಪುಸ್ತಕ ಪ್ರೀತಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಅಭಿರುಚಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ ಪಿ.ಕೃಷ್ಣಮೂರ್ತಿಯವರು ಮಹೇಶ್ ಆರ್.ನಾಯಕ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ. ಹರೀಶ್ ಆಚಾರ್ಯ, ಪ್ರಾಧ್ಯಾಪಕರುಗಳಾದ ಡಾ.ಕಾರ್ತಿಕ್, ಡಾ. ಆಶಾಲತಾ ಪಿ, ಡಾ. ಸಂತೋಷ ಆಳ್ವ, ಡಾ. ಭಾಗ್ಯ ಲಕ್ಷ್ಮೀ ಅಕ್ಷತಾ, ಡಾ. ವಿಜಯಲಕ್ಷ್ಮೀ ಕಿಟ್ಟುರಾಜು, ದಯಾ ಸುವರ್ಣ, ಡಾ.ಸುಧಾ ಯು, ಗ್ರಂಥಪಾಲಕಿ ಡಾ.ಸುಜಾತಾ ಬಿ, ಉಪಸ್ಥಿತರಿದ್ದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಸಿಂಚನಾ ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ