ಬಳ್ಳಾರಿ ಮಾರ್ಗದಲ್ಲಿ ಬೆಂಗಳೂರಿಗೆ ವಂದೇ ಭಾರತ್ ರೈಲು ಆರಂಭಿಸಲು ಮನವಿ

Upayuktha
0




ಬಳ್ಳಾರಿ: 
ಹೊಸಪೇಟೆ ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಬರಲು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಆರಂಭಿಸುವಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾಕ್ಟರ್ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ಸಂಡೂರಿನಲ್ಲಿ ಭೇಟಿಯಾಗಿ ರೈಲ್ವೆ ಮಂತ್ರಿಗಳಿಗೆ ಒತ್ತಾಯ ತರುವಂತೆ ಕೋರಲಾಯಿತು.

ಒಂದೇ ಭಾರತ್ ರೈಲಿನ ಬಗ್ಗೆ ನಿಯೋಗದೊಂದಿಗೆ ವಿವರ ಪಡೆದ ಸಂಸದರಿಗೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮೈಸೂರು ನಿಂದ ಚೆನ್ನೈಗೆ, ಧಾರವಾಡದಿಂದ ಬೆಂಗಳೂರಿಗೆ, ಕಲ್ಬುರ್ಗಿಯಿಂದ ಬೆಂಗಳೂರಿಗೆ, ಸಿಕಂದರಾಬಾದ್ ದಿಂದ ಬೆಂಗಳೂರಿಗೆ ವಂದೇ ಭಾರತ್ ರೈಲನ್ನು ರೈಲ್ವೆ ಬೋರ್ಡ್ ಓಡಿಸುತ್ತಿದೆ. 

ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಾಗಿರುವ ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಯ ಹಂಪಿ ಪ್ರದೇಶಗಳಿಗೆ ದೇಶ ವಿದೇಶಗಳ ಪ್ರವಾಸಿಗರು ಭೇಟಿ ನೀಡಲು ಹಾಗೂ ಬಳ್ಳಾರಿ ಹೊಸಪೇಟೆಯ ಜನತೆ ಬೆಂಗಳೂರಿಗೆ ಹೋಗಿ ಬರಲು ವಂದೇ ಭಾರತ್  ರೈಲಿನ ಅವಶ್ಯಕತೆ ಇದೆ ಎಂದು ಸಂಸದರಿಗೆ ಮನವರಿಕೆ ಮಾಡಿಕೊಡಲಾಯಿತು ಒಂದು ದಿನಕ್ಕೆ 15 ಕೋಟಿಗೂ ಅಧಿಕ ಆದಾಯ ನೀಡುವ ಬಳ್ಳಾರಿ ರೈಲ್ವೆ ಪ್ರದೇಶಗಳಿಗೆ ಹೆಚ್ಚಿನ ರೈಲ್ವೆ ಸೌಲಭ್ಯಗಳ ಅವಶ್ಯಕತೆ ಇದೆ ಎಂದು ತಿಳಿಸಲಾಯಿತು ದೆಹಲಿಗೆ ಹೋದ ನಂತರ ರೈಲ್ವೆ ಮಂತ್ರಿಗಳೊಡನೆ ಮಾತನಾಡುವುದಾಗಿ ನಿಯೋಗಕ್ಕೆ ಅಗರವಾಲ್ ರವರು ಭರವಸೆ ನೀಡಿದರು. 

ನಿಯೋಗದಲ್ಲಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ ಎಂ ಮಹೇಶ್ವರ ಸ್ವಾಮಿ ಮಾಜಿ ಲೋಕಸಭಾ ಸದಸ್ಯರುಗಳಾದ ಬಿ ಶ್ರೀರಾಮುಲು, ವೈ ದೇವೇಂದ್ರಪ್ಪ , ಶಾಸಕರಾದ ಎಚರೆಡ್ಡಿ ಸತೀಶ್, ಭಾಜಪದ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕ ಡಾಕ್ಟರ್ ಮಹಿಪಾಲ್ ದಿವಾಕರ್ ಮಾಜಿ ಡಿಆರ್‌ಯುಸಿಸಿ ಸದಸ್ಯರಾದ ಗಾಳಿ ಶಂಕ್ರಪ್ಪ, ಕ್ರಿಯಾ ಸಮಿತಿಯ ಜಿ ರಾಮಚಂದ್ರಯ್ಯ, ಕೋಳೂರು ಚಂದ್ರಶೇಖರ ಗೌಡ, ಜಿ ನೀಲಕಂಠಪ್ಪ, ರಾಮ್ ಪ್ರಸಾದ್, ಪಟೇಲ್ ಇವರು ಉಪಸ್ಥಿತರಿದ್ದರು.

                                                                                                                                                                      ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top