ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಅಂತಾರಾಷ್ಟ್ರೀಯ ದಾಸ ಸಾಹಿತ್ಯ ಸಮಾವೇಶದ ಕರಪತ್ರ ಉದ್ಘಾಟನೆ

Chandrashekhara Kulamarva
0


ಉಡುಪಿ:ಉಡುಪಿಯ ಪರ್ಯಾಯ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ಮತ್ತು ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದ ಸಂಯುಕ್ತ ಆಶ್ರಯದಲ್ಲಿ ಅಪರೋಕ್ಷ ಜ್ಞಾನಿಗಳಾದ ಶ್ರೀ ವಿಜಯದಾಸರ ಆರಾಧನಾ ಅಂಗವಾಗಿ ಉಡುಪಿಯ ಕೃಷ್ಣನ ಸನ್ನಿದಿಯಲ್ಲಿ ನವೆಂಬರ್ 9-11 ರವರೆಗೆ ಮೂರು ದಿನಗಳ ಅಂತಾರಾಷ್ಟ್ರೀಯ ದಾಸ ಸಾಹಿತ್ಯ ಸಮ್ಮೇಳನದ ಕರಪತ್ರವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಕಿರಿಯ ಶ್ರೀಗಳು ಶ್ರೀ ಸುಶೀoದ್ರ ತೀರ್ಥರು ಲೋಕಾರ್ಪಣೆಗೊಳಿಸಿ ಸಮ್ಮೇಳನ ಯಶಸ್ವೀ ಯಾಗಲಿ ಎಂದು ಆಶೀರ್ವದಿಸಿದರು.


ಶ್ರೀಮಠದ ಪ್ರಸನ್ನಚಾರ್ಯ, ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ. ಗೋಪಾಲಚಾರ್ಯ, ಶ್ರೀನಿವಾಸ ಉತ್ಸವ ಬಳಗದ ಟಿ. ವಾದಿರಾಜ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಡಾ. ಗುರುರಾಜ ಪೋಶೆಟ್ಟಿ ಹಳ್ಳಿ ಉಪಸ್ಥಿತರಿದ್ದರು.


ದೇಶ - ವಿದೇಶಗಳಿಂದ ದಾಸಸಾಹಿತ್ಯ ಅಭಿಮಾನಿಗಳು ಆಗಮಿಸಿ ವಿಜಯದಾಸರು ವರ್ಣಿಸಿದ ಉಡುಪಿ -ಕೃಷ್ಣನ ಬಗ್ಗೆ ವಿದ್ವತ್ಪೂರ್ಣ  ಪ್ರಬಂಧ ಮಂಡಿಸಲು ಅವಕಾಶವಿದೆ, ಇದೇ ಸಂದರ್ಭದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ವನ್ನು ಹಮ್ಮಿಕೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top