ಬಳ್ಳಾರಿ:ಉಪ ಚುನಾವಣೆ ಸಮೀಸುತ್ತಿರುವುದರಿಂದ ಜಿಲ್ಲೆಯ ಸಂಡೂರಿನಲ್ಲಿ ಬಿಜೆಪಿ ಒಂದಲ್ಲ ಒಂದು ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿದ್ದು ಇಂದು ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಮತ್ತು ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿ ಈ ತುಕರಾಂ ಸಂಸದರಾಗಿರುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪಟ್ಟಣದ ವಿಜಯ ಸರ್ಕಲ್ ನಲ್ಲಿ ಕ್ಯೂ ಆರ್ ಕೋಡ್ ಸಹಿತ ಕರ ಪತ್ರ ಬಿಡುಗಡೆ ಮಾಡಿ ಕಾಂಗ್ರೆಸ್ ನ ಭ್ರಷ್ಟಾಚಾರದ ಬಗ್ಗೆ ತಿಳಿಸುವ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣದಿಂದ ತುಕಾರಾಂ ಆಯ್ಕೆಯಾಗಿದ್ದಾರೆ ಎಂದ ಆರೋಪಿಸಿ ಕೂಡಲೇ ಈ ತುಕಾರಾಂ ರಾಜೀನಾಮೆ ನೀಡಬೇಕು ಎಂದರು. ನಗರದ ಎಪಿಎಂಸಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ವಿಜಯ ಸರ್ಕಲ್ ವರೆಗೂ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಂಸದ ಗೋವಿಂದ ಕಾರಜೋಳ, ಎಂ ಎಲ್ ಸಿ ರವಿಕುಮಾರ್, ಮಾಜಿ ಸಚಿವ ಬಿ ಶ್ರೀರಾಮುಲು ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾದ್ದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ನಾಲ್ಕು ತಿಂಗಳು ಆಗಿದೆ ಮೋಸದ ಪ್ರಣಾಳಿಕೆಗೆ ಮೋಸ ಹೋಗಿ ಅಧಿಕಾರಕ್ಕೆ ತಂದಿದ್ದಾರೆ ಅಧಿಕಾರಕ್ಕೆ ಬರುವ ಮುಂಚೆ ಸಿದ್ದರಾಮಯ್ಯ ಸರ್ವರಿಗೂ ಸಮಪಾಲು,ಸಮಬಾಳು ಎಂದಿದ್ದರು ಇವರಿಗೆ ನಾಚಿಕೆ ಆಗಲ್ವಾ ಎಂದರು. ವಾಲ್ಮೀಕಿ ನಿಗಮದ ಹಣವನ್ನು ಹಗಲು ದರೋಡೆ ಮಾಡಿದರು.ಈ ಹಣವನ್ನು ಲೋಕಸಭೆ ಚುನಾವಣೆಗೆ ಹಂಚಿದ್ದಾರೆ ಒಂದು ಕ್ಷಣನೂ ಅಧಿಕಾರದಲ್ಲಿ ಮುಂದಿವರೆಯವ ನೈತಿಕತೆ ತುಕರಾಂ ಅವರಿಗೆ ಇಲ್ಲ ಗೌರವದಿಂದ ಸ್ಥಾನ ತ್ಯಜಿಸಬೇಕಿತ್ತು ಲಜ್ಜೆಗೆಟ್ಟು ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದರು.
ರಾಹುಲ್ ಗಾಂಧಿ ಹೊರದೇಶದಲ್ಲಿ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳಿದ್ದಾರೆ ಅವರ ಡಿ ಎನ್ ಎ ದಲ್ಲಿಯೇ ದಲಿತರ ವಿರೋಧ ನೀತಿ ಇದೆ ಇವರಿಂದ ನ್ಯಾಯ ಸಿಗುತ್ತಾ ಅವರನ್ನು ಬೆಂಬಲಿಸದಿದ್ದರೆ ಅವರು ಗ್ರಾಮ ಪಂಚಾಯತಿ ಮೆಂಬರ್ ಆಗಲ್ಲ. ಅಂಬೇಡ್ಕರ್ ಅವರಿಗೆ ಮೋಸ ಮಾಡಿ ಸೋಲಿಸಿದವರು ಜವಾಹರಲಾಲ್ ನೆಹರು ರಾಹುಲ್ ಗಾಂಧಿ ಅವರಿಗೆ ಪಾಕಿಸ್ತಾನ,ಬಾಂಗ್ಲಾದೇಶ ದಲ್ಲಿ ಆಗುವ ಗಲಭೆಗಳ ರೀತಿ ಭಾರತದಲ್ಲಿ ಗಲಭೆ ಹುಟ್ಟು ಹಾಕಬೇಕೆಂದಿದ್ದಾರೆ. ಕಾಂಗ್ರೆಸ್ ಬೇರೆ ಬೇರೆ ನಾಟಕ ಮಾಡುತ್ತಾರೆ ಮೋಸಕ್ಕೆ ಯಾರೂ ಬಲಿಯಾಗಬಾರದು, ಈ ಬಾರಿ ಸಂಡೂರು ನಲ್ಲಿ ಬಿಜೆಪಿ ಧ್ವಜ ಹಾರಬೇಕು ಎಂದರು.
ಪ್ರತಿಭಟನೆಗೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿ ಮಹೇಶಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರಜೋಳ ಖಾಕಿ ಬಟ್ಟೆ ಸಂಡೂರು ನಲ್ಲಿಯೇ ಕಳೆಯಬೇಕಾಯಿತು ಎಂದು ಎಚ್ಚರಿಸಿದರು.ಬಿ ಶ್ರೀರಾಮುಲು ಭಾಷಣದ ವೇಳೆ ಹೈಡ್ರಾಮಾ ನಡೆಯಿತು. ರಾಹುಲ್ ಗಾಂಧಿ ಅವರ ಪ್ರತಿಕೃತಿ ದಹಿಸಲು ಬಿಜೆಪಿ ಕಾರ್ಯಕರ್ತರು ತಂದರು ಆಗ ಪ್ರತಿಕೃತಿ ಕಿತ್ತುಕೊಳ್ಳಲು ಪೊಲೀಸರು ಮುಂದಾದರು. ಪೊಲೀಸರು, ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ, ಕೆಲಕಾಲ ಗೊಂದಲ ಉಂಟಾಯ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ