ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ "ನವರಾತ್ರಿ ಉತ್ಸವ"

Upayuktha
0


ಬೆಂಗಳೂರು : ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ 3-10-2024 ರಿಂದ 12-10-2024ರವರೆಗೆ "ನವರಾತ್ರಿ ಉತ್ಸವ" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿದಿನ ದೇವಿಗೆ ವಿವಿಧ ಅಲಂಕಾರಗಳು ಮಾಡಲಾಗುತ್ತದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು  (ಪ್ರತಿದಿನ ಸಂಜೆ 6-30ಕ್ಕೆ) : ಅಕ್ಟೋಬರ್ 3-ಶ್ರೀಮತಿ ಪ್ರಸನ್ನಲಕ್ಷ್ಮಿ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", ಅಕ್ಟೋಬರ್ 4-ಕೆನರಾ ಬ್ಯಾಂಕ್ ಕಾಲೋನಿಯ ಮಹಿಳಾ ಸಮಾಜದ ಸದಸ್ಯರುಗಳಿಂದ "ವೈವಿಧ್ಯ ಕಾರ್ಯಕ್ರಮಗಳು", ಅಕ್ಟೋಬರ್ 5-ಶ್ರೀಮತಿ ಮಿನಾಲ್ ಪ್ರಭುರವರ ಶಿಷ್ಯೆಯರಾದ ಶ್ರೀಮತಿ ಸುಗನ್ಯ ರಾಘವ್ ಮತ್ತು ಶ್ರೀಮತಿ ಸುಪ್ರಿಯ ಅಶ್ವಿನ್ ರವರಿಂದ "ಶ್ರೀರಾಮಾಮೃತಮ್" ವಿಷಯಾಧಾರಿತ "ನೃತ್ಯ ಪ್ರಸ್ತುತಿ",


ಅಕ್ಟೋಬರ್ 6-ಶ್ರೀಮತಿ ಮಂಗಳಾ ಬಾಲಚಂದ್ರ ರವರಿಂದ "ಹರಿಕಥೆ", ಅಕ್ಟೋಬರ್ 7-ಶ್ರೀಹರಿ ಭಟ್ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", ಅಕ್ಟೋಬರ್ 8-ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ", ಅಕ್ಟೋಬರ್ 9-'ಸಂಗೀತ ಕಲಾನಿಧಿ' ಡಾ|| ವಿದ್ಯಾಭೂಷಣ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ ", ಅಕ್ಟೋಬರ್ 10-ಶ್ರೀ ಅನಂತರಾಮಚಂದ್ರ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ ", ಅಕ್ಟೋಬರ್ 11-"ಶ್ರೀ ದುರ್ಗಾ ನಮಸ್ಕಾರ ಪೂಜೆ", ಅಕ್ಟೋಬರ್ 12-ದೇವಾಲಯದ ಭಜನಾ ಮಂಡಳಿಯ ಸದಸ್ಯರಿಂದ "ಭಜನಾಮೃತ" ನಂತರ ಸಮಾರೋಪ ಸಮಾರಂಭ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top