ಅಮೆಜಾನ್ ಉತ್ಸವದಲ್ಲಿ 9500 ಹೊಸ ಉತ್ಪನ್ನ

Upayuktha
0


ಮಂಗಳೂರು:
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಂದರ್ಭದಲ್ಲಿ ಅಮೆಜಾನ್‍ನ ಮಾರಾಟ ಯೋಜನೆಗಳಾದ ಕರಿಗರ್, ಸಹೇಲಿ, ಸ್ಥಳೀಯ ಮಳಿಗೆಗಳು ಮತ್ತು ಲಾಂಚ್‍ಪ್ಯಾಡ್‍ನ ಭಾಗವಾಗಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಸಂಸ್ಥೆಗಳು 9,500 ಕ್ಕೂ ಅಧಿಕ ಹೊಸ ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲಿವೆ.


ಅಲ್ಪಿನೊ, ಫೂಲ್, ಆಝಾಲ್, ಟಾಶ್ ಕ್ರಾಫ್ಟ್ ಮತ್ತು ಇತರೆ ಬ್ರ್ಯಾಂಡ್‍ಗಳು ಅಮೆಜಾನ್.ಇನ್‍ನಲ್ಲಿ ತಮ್ಮ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸುವ ಜತೆಗೆ, ಭಾರತದ ಉದ್ದಗಲಕ್ಕೂ ಈ ಉತ್ಪನ್ನಗಳನ್ನು ತಲುಪಿಸಲಿವೆ. ಅಮೆಜಾನ್.ಇನ್ 16 ಲಕ್ಷಕ್ಕೂ ಹೆಚ್ಚು ಮಾರಾಟಗಾರರ ಮನೆ, ಅಡುಗೆ ಮನೆ, ದಿನಸಿ, ಉಡುಪು ಸೇರಿದಂತೆ ವೈವಿಧ್ಯಮಯ ಕೋಟಿಗಟ್ಟಲೆ ಉತ್ಪನ್ನಗಳ ಮಾರಾಟ ಕೊಡುಗೆ ನೀಡುತ್ತದೆ ಎಂದು ಮಾರಾಟ ಪಾಲುದಾರ ಸೇವೆಗಳ ನಿರ್ದೇಶಕ ಅಮಿತ್ ನಂದಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಹಬ್ಬದ ಸೀಸನ್‍ನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಈ ಉಪಕ್ರಮ ಜಾರಿಗೊಳಿಸಿದೆ. ಇತ್ತೀಚೆಗೆ, ಹಬ್ಬದ ಸೀಸನ್‍ಗಾಗಿ ತಯಾರಿ ನಡೆಸುತ್ತಿರುವ ಮಾರಾಟಗಾರರಿಗೆ ಸಮಯೋಚಿತ ಉತ್ತೇಜನ ನೀಡಲು, ಸೆಪ್ಟೆಂಬರ್ 9ರಿಂದ ಜಾರಿಗೆ ಬರುವಂತೆ ಮಾರುಕಟ್ಟೆಯಲ್ಲಿ ಬಹು-ಉತ್ಪನ್ನ ವರ್ಗಗಳಾದ್ಯಂತ ಮಾರಾಟ ಶುಲ್ಕದಲ್ಲಿ ಗಮನಾರ್ಹವಾದ ಕಡಿತ ಘೋಷಿಸಲಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top