ವಿವೇಕಾನಂದ ಕಾಲೇಜಿನಲ್ಲಿ ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ

Upayuktha
0




ಪುತ್ತೂರು: 
ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಸುಮಾರು ಮಹಿಳೆಯರನ್ನು ಕಾಡುತ್ತಿರುವ ಅನಿಷ್ಟ ಪದ್ಧತಿ ದೇವದಾಸಿ. ಈ ಸಾಕ್ಷ್ಯಚಿತ್ರದಲ್ಲಿ ಅನೇಕ ಮಹಿಳೆಯರ ನೋವನ್ನು ಸಮಾಜದ ಮುಂದೆ ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಸರಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅವರ ಬದುಕಿಗೆ ನೆರವಾಗುವುದೇ ಇದರ ಮೂಲ ಉದ್ದೇಶ. 


ಹಿಂದೆ 10 ವರ್ಷದ ಒಳಗಿನ ಮಕ್ಕಳನ್ನು ದೇವರ ಸೇವೆಗಾಗಿ ಸಮರ್ಪಿಸುತ್ತಿದ್ದರು. ಹಿಂದೆ ಇದಕ್ಕೆ ಒಂದು ಗೌರವದ ಸ್ಥಾನ ಇದ್ದದ್ದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಆದರೆ ವರ್ಷ ಕಳೆದಂತೆ ಈ ಆಚರಣೆಯು ಅಮಾನವೀಯ ಸ್ವರೂಪವನ್ನು ಪಡೆದುಕೊಂಡು ಬಂದಿತು. 1987ರಲ್ಲಿ ಕರ್ನಾಟಕ ಸರಕಾರ ದೇವದಾಸಿ ಪದ್ಧತಿಯನ್ನು ನಿಷೇಧ ಮಾಡಿದ್ದರೂ ಕೂಡ, ಇಂದು ಹಲವು ಕಡೆಗಳಲ್ಲಿ ಮರೆಯಲ್ಲಿ ಈ ಪದ್ಧತಿ ನಡೆಯುತ್ತಿದೆ ಎಂದು ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಸಾಕ್ಷ್ಯಚಿತ್ರದ ನಿರ್ಮಾಪಕಿ ಡಾ. ಪೂರ್ಣಿಮಾ ರವಿ ಹೇಳಿದರು. 


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಮಾನವಿಕ ವಿಭಾಗ, ಕನ್ನಡ ಸಂಘ, ಲಿಟರರಿ ಕ್ಲಬ್, ಹಿಂದಿ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ದೇವದಾಸಿಯರ ಬದುಕಿನ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ (ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್) ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್ ಮಾತನಾಡಿ, ಶಿಕ್ಷಣ ಸಂಸ್ಥೆ ಮತ್ತು ವಿಭಾಗಗಳು ಮಾಡಬೇಕಾದ ಮುಖ್ಯವಾದ ಕೆಲಸವನ್ನು ಈ ಸಾಕ್ಷ್ಯಚಿತ್ರ ಮಾಡಿದೆ. 


ಸಾಮಾಜಿಕ ವ್ಯವಸ್ಥೆ ಸಮಸ್ಯೆಯಾಗಿ ಬದಲಾದದ್ದು ಹಾಗೂ ಮುಂದೆ ಏನು ಮಾಡಬೇಕು ಎಂಬ ಅರಿವನ್ನು ತಿಳಿಸಿಕೊಟ್ಟಿದೆ. ದೇವದಾಸಿ ಎಂಬುದು ನಿಷ್ಕಲ್ಮಷ ಮನಸ್ಸಿನಿಂದ ದೇವರಿಗೆ ಅರ್ಪಿಸುವುದು. ಆದರೆ ಕಾಲ ಬದಲಾದಂತೆ ಅದನ್ನು ವಕ್ರದೃಷ್ಟಿಯಿಂದ ನೋಡುವುದನ್ನು ಕಾಣಬಹುದು. ನಾವು ಇಂತಹ ಹಲವಾರು ಸಮಸ್ಯೆಗಳನ್ನು ಕಣ್ಣು ತೆರೆಯುವಂತೆ ಮಾಡಿದರೆ, ಒಳ್ಳೆಯ ಸಮಾಜ ಕಟ್ಟಲು ಸಾಧ್ಯ. ಸಮಾಜ, ಸಂಘಟನೆ, ಶಿಕ್ಷಣ ಸಂಸ್ಥೆ ಇದರ ಕುರಿತಾಗಿ ಯಾವ ರೀತಿ ಕೆಲಸ ಮಾಡಬಹುದು ಎಂಬ ವಿಚಾರವನ್ನು ಮೇಲಿನವರಿಗೆ ತಿಳಿಸಿ ಕೊಡುವಂತೆ ಮಾಡಬೇಕು. 


ವಿದ್ಯಾರ್ಥಿಗಳು ಇದರ ಬಗ್ಗೆ ಆಳವಾಗಿ ಯೋಚಿಸಿ ಸರ್ಕಾರಕ್ಕೆ ನಮ್ಮ ಕಡೆಯಿಂದ ಮಾಹಿತಿಯನ್ನು ತಿಳಿಸುವಂತೆ ಮಾಡಬೇಕು ಎಂದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್  ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ವರ್ಷದ ವಿದ್ಯಾರ್ಥಿನಿ ಸಂಶೀನ ಸ್ವಾಗತಿಸಿ, ಮೋಕ್ಷ ವಂದಿಸಿ, ವೈಷ್ಣವಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top