ಏತಡ್ಕ: ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಂಡ ದ್ವಿತೀಯ ಹಂತದ ಅಕ್ಷತಾ ಅಭಿಯಾನದಲ್ಲಿ ದೀಪ ಜ್ವಾಲನೆ ಹಾಗೂ ಕಿಟ್ ವಿತರಣೆ ಮೂಲಕ ಶ್ರೀ ಶಾಸ್ತಾರ ಭಜನಾ ಮಂದಿರ ಗಿರಿಪುರದ ಅಧ್ಯಕ್ಷ ಬಿ.ವಿ. ಕುಂಜತ್ತಾಯರು ಚಾಲನೆ ನೀಡಿದರು. "ಮಹಾ ಅಭಿಯಾನ ಈ ಊರಿನ ಬಾಗಿಲಿನಂತಿರುವ ಶ್ರೀ ಶಾಸ್ತಾರ ಭಜನಾ ಮಂದಿರದಿಂದ ಆರಂಭವಾಗಿರುವುದು ಸೂಕ್ತವಾಗಿದೆ. ನಾಡಿನ ಎಲ್ಲರ ಸಹಕಾರ ದೊರೆಯಲಿ" ಎಂದು ಹಾರೈಸಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ 2025 ಇದರ ಸಂಚಾಲಕ ಡಾ. ವೈ.ವಿ. ಕೃಷ್ಣಮೂರ್ತಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಏಕ ಕಾಲದಲ್ಲಿ ಹಲವು ಕೇಂದ್ರಗಳಲ್ಲಿ ವಿತರಣೆಯಾಗುವ ಮನವಿ ಪತ್ರ ಮತ್ತು ಶಿವಾರ್ಪಣೆ ಯೋಜನೆಯ ವಿವರ ನೀಡಿ ತಂಡಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಬಾಲಕೃಷ್ಣ ಕೆ.ಕೆ, ಗಣರಾಜ ಕಡೇಕಲ್ಲು, ವೈ.ವಿ ಸದಾಶಿವ ಮೈಸೂರು, ಡಾ.ಪ್ರಕಾಶ್ ವೈಎಚ್, ಗೌರಿ ಕೆ ಎಸ್, ಡಾ. ಅನ್ನಪೂರ್ಣೇಶ್ವರಿ, ಊರ ಪ್ರಮುಖರಾದ ಮಹಾಲಿಂಗೇಶ್ವರ ಕುಳೂರು , ಅಪ್ಪಕುಞ ಮಣಿಯಾಣಿ, ಮಾಸ್ಟರ್ ಕುಂಞಿರಾಮ ಮಣಿಯಾಣಿ, ವೈ.ಬಿ .ರವಿ, ರಾಮಣ್ಣ ಬಾಳೆ ಗದ್ದೆ, ಪ್ರಭಾಕರ ಬೀಜದ ಕಟ್ಟೆ, ಹೆಚ್.ಶ್ರ್ರೀಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು.
ಸಂಚಾಲಕ ಚಂದ್ರಶೇಖರ ಏತಡ್ಕ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ವಿವಿಧ ತಂಡಗಳು ಏಕ ಕಾಲದಲ್ಲಿ ಪೆರ್ವತ್ತೋಡಿ, ಕುಳೂರು, ಬೆಳೆರಿ, ಪನೆಯಾಲ ಭಾಗದ ಎಲ್ಲಾ ಭಕ್ತಾದಿಗಳ ಮನೆಗಳ ಸಂಪರ್ಕಕ್ಕೆ ತೆರಳಿದರು. ಒಂದೇ ದಿನದಲ್ಲಿ ನೂರಕ್ಕಿಂತ ಮನೆಗಳ ಸಂಪರ್ಕ ಮಾಡಿದವು. ವಿವಿಧ ಸಂಘ ಸಂಸ್ಥೆಗಳು, ಊರ ಪ್ರಮುಖರು ಅಭಿಯಾನವನ್ನು ಸ್ವಾಗತಿಸಿ ಸಹಕಾರ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ