ಕೇೂಟೆ ಕಟ್ಟಿ ಮೆರೆದವರೆಲ್ಲ ಏನಾಗುತ್ತಿದ್ದಾರೆ? ಒಂದು ನಿ"ದರ್ಶನ" ಕಥೆ

Upayuktha
0


ಷ್ಟೊಂದು ಪ್ರತಿಭೆ, ಎಷ್ಟೊಂದು ಶ್ರೀಮಂತಿಕೆ, ಎಷ್ಟೊಂದು ಹೆಸರು, ಎಷ್ಟೊಂದು ಅಭಿಮಾನಿಗಳು, ಎಷ್ಟೊಂದು ಪ್ರಭಾವ. ಆದರೂ ಕೊನೆಗೂ ಬದುಕು ದುರಂತಮಯ! ಇಷ್ಟೆಲ್ಲಾ ಸಿರಿ ಸಂಪತ್ತು ತುಂಬಿ ತುಳುಕುತ್ತಿದ್ದರೂ ಕೊನೆಗೂ ಬದುಕು ಅಸಹ್ಯವಾದ ಮಟ್ಟಿಗೆ ಬಂದು ನಿಲ್ಲುತ್ತದೆ ಅಂದರೆ ಇದಕ್ಕೆಲ್ಲ ಕಾರಣವೇನಿರಬಹುದು ಅನ್ನುವ ಪ್ರಶ್ನೆ ಕಾಡುವುದು ಸಹಜ ತಾನೆ?


ನಾವೆಷ್ಟೇ ಶ್ರೀಮಂತರಾಗಲಿ ಪ್ರತಿಭಾವಂತರಾಗಲಿ ಪ್ರಭಾವ ಶಾಲಿಗಳಾಗಲಿ ನಮ್ಮ ಬದುಕಿನಲ್ಲಿ ಸಂಸ್ಕಾರ ಮಾನವೀಯತೆ ಮನುಷ್ಯ ಗುಣ ರೂಪಿಸಿಕೊಳ್ಳದೇ ಹೇೂದಲ್ಲಿ ಈ ಎಲ್ಲಾ ಶಕ್ತಿಗಳು ನಮ್ಮನ್ನು ಈ ಪ್ರಪಂಚದಿಂದಲೇ ಮರೆಸಿ ಬಿಡುತ್ತವೆ. "ಅಹಂಕಾರ" ನಮ್ಮನ್ನು ಕೂಪಕ್ಕೆ ತಳ್ಳಿ ಬಿಡುತ್ತದೆ ಅನ್ನುವುದಕ್ಕೆ ಇತ್ತೀಚಿನ ಕೆಲವೊಂದು ಘಟನೆಗಳೆ ನಿ"ದರ್ಶನ".


ಕೂಪಕ್ಕೆ ಬಿದ್ದು ವಿಲವಿಲನೆ ಒದ್ದಾಡುವ ಪರಿಸ್ಥಿತಿ ನೇೂಡಿದರೆ ನಿಜಕ್ಕೂ ಬೇಸರವೆನ್ನಿಸುತ್ತದೆ. ಪ್ರಪಂಚದಲ್ಲಿ ಸ್ವಚ್ಛಂದವಾಗಿ ಹಾರಿ ತೇಲಿಕೊಂಡಿರ ಬೇಕಾದ ಜೀವ ಇಂದು "ನಾನು ಪಂಜರ ಪಕ್ಷಿ ಇನ್ನಾರು ನನಗೆ ಗತಿ" ಅನ್ನುವ ವೇದನೆಯಲ್ಲಿ ಕಂಬಿ ಎಣಿಸಿ ಕುಬ್ಜರಾಗಿ ಜಗತ್ತನ್ನು ಕಾಣಬೇಕಾದ ಪರಿಸ್ಥಿತಿ. ತಿಂದು ತೆಗ್ಗಿಕೊಂಡು ಕೊಬ್ಬಿದ ಜೀವ ಇಂದು ಏಕಾಂಗಿಯಾಗಿ ದಿನದಿಂದ ದಿನಕ್ಕೆ ಸೊರಗಿ ಹೇೂಗುವ ದುಃಸ್ಥಿತಿ. ಇದನ್ನೇ ಕರೆಯುವುದು ಜೀವಂತ ಸಾವು..!


ಕೊಲೆ ಹಿಂಸೆ ಭ್ರಷ್ಟಾಚಾರ ಮಾಡುವಾಗ ಈ ಪರಿಸ್ಥಿತಿಯ ಅರಿವು ಬರುವುದೇ ಇಲ್ಲವಾ? ಖಂಡಿತವಾಗಿಯೂ ಬರುತ್ತದೆ. ಆದರೆ ಈ ಎಲ್ಲಾ ತನ್ನ ಪಾಪಕೃತ್ಯಗಳನ್ನು ತನ್ನ ಧನಬಲ, ಜನ ಬಲ, ತೇೂಳ ಬಲ, ರಾಜಕೀಯ ಶಕ್ತಿಯಿಂದ ಮಿಂದು ಎದ್ದು ಜಯಶಾಲಿಯಾಗುತ್ತೇನೆ ಅನ್ನುವ ಒಂದೇ ಅಹಂಕಾರದ ಮನಸ್ಥಿತಿಯೇ ಈ ಎಲ್ಲಾ ಕೃತ್ಯಗಳನ್ನು ಮಾಡಿಸಿರುತ್ತದೆ. ಆದರೆ ತಪ್ಪು ಮಾಡಿ ಬೇೂನಿಗೆ ಬಿದ್ದ ಮೇಲೆ ತಿಳಿಯುತ್ತದೆ. ನನ್ನ ಜೊತೆ ವೇದಿಕೆಯಲ್ಲಿ ಕುಣಿದವರು ಯಾರೂ ಇಲ್ಲ. ಹಗಲು ರಾತ್ರಿ ಒಟ್ಟಿಗೆ ತಿಂದು ತೇಗಿದವರು ಪಕ್ಕಕ್ಕೆ  ಸುಳಿಯೊಲ್ಲ. ನಿಮಿಷ ನಿಮಿಷಕ್ಕೂ ಹೀರೊ ರೀತಿಯಲ್ಲಿ ಪ್ರಚಾರ ನೀಡಿದ್ದ ಮಾಧ್ಯಮಗಳೇ ಇಂದು ಕಳ್ಳ ಕಾಕನ ತರದಲ್ಲಿ ನೀನು ತಾನು ಅನ್ನುವ ರೀತಿಯಲ್ಲಿ ಹೆಸರಿಸಿ ಅವಮಾನ ಮಾಡುವ ದುಃಸ್ಥಿತಿ ನಿಜಕ್ಕೂ ಕರುಣಾಜನಕ.


ಇದನ್ನೆಲ್ಲಾ ನೇೂಡುವಾಗ ಸಹಜವಾಗಿ ಅನ್ನಿಸಬೇಕು. ಧನ ಜನ ಪ್ರತಿಭೆಗಳ ಸಾಮರ್ಥ್ಯವಿರುವಾಗ ಸ್ವಲ್ಪ ತಗ್ಗಿಬಗ್ಗಿ ನಡೆಯಬೇಕು. ಜನ ಮೆಚ್ಚುವ ಕೆಲಸ ಮಾಡ ಬೇಕು, ಹೆಣ್ಣು ಹೊನ್ನು ಮಣ್ಣಿಗೆ ದಾಸನಾಗಬಾರದು ಅನ್ನುವ ಬದುಕಿನ ನಿಜವಾದ ದರ್ಶನವಾಗಬೇಕು. ಅಂದರೆ ಈ ಎಲ್ಲಾ ಶಕ್ತಿಗೂ ಮೀರಿದ ಇನ್ನೊಂದು ದೈವಶಕ್ತಿ ನ್ಯಾಯದೇವತೆ ಇದೆ ಇವೆಲ್ಲವನ್ನೂ ನೇೂಡುತ್ತಿರುತ್ತದೆ ಅನ್ನುವುದನ್ನು ನಾವೆಂದೂ ಮರೆಯಬಾರದು. ಈ ಜಗತ್ತು ಇಂದು ಉಳಿದಿರುವುದೇ ಇದೇ ದಿವ್ಯ ಪ್ರಭಾವಳಿಯ ಸಂಸ್ಕಾರಯುಕ್ತ ಬದುಕಿನಿಂದ ಅನ್ನುವುದು ನಮ್ಮೆಲ್ಲರಿಗೂ ಮೊದಲಪಾಠವಾಗ ಬೇಕು. ಇದುವೆ ನಮ್ಮೆಲ್ಲರ ಬದುಕಿನ ಸತ್ಯ ನಿದರ್ಶನದ ಮೊದಲ ಪಾಠ.


- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top