ವೇಗ ಟ್ರಾನ್ಸ್‌ಪೋರ್ಟ್- ತರಸ್ವಿನ್‌ ಕಾರ್ಗೋ ವಿಲೀನ: ರಾಷ್ಟ್ರವ್ಯಾಪಿ ಸೇವೆಗಳ ವಿಸ್ತರಣೆಗೆ ನೂತನ ಸಂಸ್ಥೆ ಸಜ್ಜು

Upayuktha
0


ಉಡುಪಿ: ಕಳೆದ 30 ವರ್ಷಗಳಿಂದ ಸಾರಿಗೆ ಹಾಗೂ ಪಾರ್ಸೆಲ್‌ ಉದ್ಯಮದಲ್ಲಿ ಹೆಸರು ಮಾಡಿರುವ ಜನಪ್ರಿಯ ಸಂಸ್ಥೆಗಳಾದ ವೇಗ ಟ್ರಾನ್ಸ್‌ಪೋರ್ಟ್ ಮತ್ತು ತರಸ್ವಿನ್‌ ಕಾರ್ಗೋ ಇದೀಗ ವಿಲೀನಗೊಂಡು M/S ವೇಗ ಟ್ರಾನ್ಸ್‌ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಹೆಸರಿನಲ್ಲಿ ಏಕೀಕೃತ ಸಂಸ್ಥೆಯಾಗಿ ಕಾರ್ಯನಿರ್ವಹಿಲಿದೆ.


ಈ ವಿಲೀನವು ಸೆ.4ರಿಂದ ಜಾರಿಗೆ ಬರಲಿದ್ದು, ನೂತನ ಸಂಸ್ಥೆಯ ಕಾರ್ಯವ್ಯಾಪ್ತಿ ದೇಶಾದ್ಯಂತ ವಿಸ್ತರಣೆಯಾಗಲಿದೆ. ಶ್ರೀ ಸತೀಶ್ ಪಾಟೀಲ್ ಅವರ ಮಾಲೀಕತ್ವದಲ್ಲಿ 1994ರಲ್ಲಿ ಬ್ರಹ್ಮಾವರದಲ್ಲಿ ಲಾರಿ ಪಾರ್ಸೆಲ್ ಬುಕಿಂಗ್‌ ಕಚೇರಿ ತೆರೆದು ಕಾರ್ಯಾರಂಭಿಸಿದ ವೇಗ ಟ್ರಾನ್ಸ್‌ಪೋರ್ಟ್ ಸಂಸ್ಥೆ ಬಳಿಕ 1996ರಲ್ಲಿ ಮಣಿಪಾಲದಲ್ಲಿ ಸ್ವಂತ ಕಚೇರಿ ತೆರೆದು ಪಾರ್ಸೆಲ್ ಸೇವೆಗಳನ್ನು ಆರಂಭಿಸಿತು.


2001ರಲ್ಲಿ ಸೇವೆಗಳನ್ನು ದೇಶವ್ಯಾಪಿ ವಿಸ್ತರಿಸುವ ಉದ್ದೇಶದಿಂದ ವಿವಿಧ ಏಜೆನ್ಸಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಕಾರ್ಯಕ್ಷೇತ್ರವನ್ನು ಮತ್ತಷ್ಟು ಹಿಗ್ಗಿಸಿಕೊಂಡಿತು. ಉತ್ತಮ ಸೇವೆ ಮತ್ತು ಹೆಚ್ಚಿನ ಭದ್ರತೆಯುಳ್ಳ ಸಾರಿಗೆಗಾಗಿ 2004ರಲ್ಲಿ ಸ್ವಂತ ಫ್ಲೀಟ್‌ ಕಂಟೈನರ್‌ ಟ್ರಕ್‌ಗಳನ್ನು ಅಳವಡಿಸಿಕೊಂಡಿತು.


ವೇಗ ಟ್ರಾನ್ಸ್‌ಪೋರ್ಟ್ ನ ಸಹೋದರ ಸಂಸ್ಥೆ ತರಸ್ವಿನ್ ಕಾರ್ಗೋ 2010ರಲ್ಲಿ ಕಾರ್ಯಾರಂಭ ಮಾಡಿತು. ಗ್ರಾಹಕರಿಗೆ ವಿಶ್ವಾಸಾರ್ಹ ಹಾಗೂ ಅತ್ಯುತ್ತಮ ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಸಂಸ್ಥೆಯ ಮಾಲೀಕರಾದ ಸಂಗೀತಾ ಎಸ್‌ ಪಾಟೀಲ್‌ ಅವರು ರಾಜ್ಯದ ವಿವಿಧ ಭಾಗಗಳಿಗೆ ಪಾರ್ಸೆಲ್‌ ಸರ್ವಿಸ್ ಒದಗಿಸುವುದಕ್ಕಾಗಿ ತರಸ್ವಿನ್ ಕಾರ್ಗೋ ಆರಂಭಿಸಿದರು.


ಮಣಿಪಾಲದಲ್ಲಿ ಸ್ವಂತ ಕಟ್ಟಡ: ವೇಗ ಟ್ರಾನ್ಸ್‌ಪೋರ್ಟ್ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಮಣಿಪಾಲ-ಅಲೆವೂರು ಕೈಗಾರಿಕಾ ಪ್ರದೇಶದಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ತರಸ್ವಿನ್ ಕಾರ್ಗೋದ ಅಡಿಯಲ್ಲಿ ಸ್ಥಳೀಯ ಪಾರ್ಸೆಲ್ ಸಾಗಣೆ ಸೇವೆಯೊಂದಿಗೆ ರಾಜ್ಯಾದ್ಯಂತ ಡೋರ್‍‌ ಪಿಕಪ್ ಮತ್ತು ಡೋರ್‍‌ ಡೆಲಿವರಿ (ಮನೆ ಬಾಗಿಲಿನಿಂದ ಸಂಗ್ರಹಣೆ ಮತ್ತು ವಿತರಣೆ) ಸೇವೆಗಳನ್ನು ಒದಗಿಸುತ್ತಿದೆ.


ಇದೀಗ ಎರಡೂ ಸಂಸ್ಥೆಗಳು ವಿಲೀನಗೊಂಡು ತಮ್ಮ ಸೇವೆಗಳ ವ್ಯಾಪ್ತಿಯನ್ನು ದಕ್ಷಿಣ ಭಾರತಕ್ಕಷ್ಟೇ ಅಲ್ಲದೆ ಉತ್ತರ ಭಾರತದ ಹಲವು ಪ್ರಮುಖ ಸ್ಥಳಗಳಿಗೂ ವಿಸ್ತರಿಸಲು ಸನ್ನದ್ಧವಾಗಿವೆ.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top