ಅಂಕೋಲಾ: ವಿನೋದ್ ಕವಿಮನೆಯವರು ಕೋಡಿಬಾಗ ಪಿ.ಜಿ. ಸೆಂಟರ್ ನಿಂದ ಸೆಪ್ಟೆಂಬರ್ 2023 ರಲ್ಲಿ ಜರುಗಿದ ಎಂ.ಎಸ್.ಸಿ ಕಡಲು ಜೀವಶಾಸ್ತ್ರ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿ ಕರ್ನಾಟಕ ವಿವಿಯಿಂದ ದಿವಂಗತ ಶ್ರೀ ಗುರುಲಿಂಗಪ್ಪ ನಿಜಗುಣಪ್ಪ ಹಕ್ಕಾಪಕ್ಕಿ ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ.
ಧಾರವಾಡದ ಗಾಂಧಿಭವನದಲ್ಲಿ ಸೆ. 24 ರಂದು ನಡೆದ 74ನೇ ಘಟಿಕೋತ್ಸವದಲ್ಲಿ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ವೀಕ್ಷಿತ್ ಕವಿಮನೆಗೆ ಬಂಗಾರದ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ವೀಕ್ಷಿತ್ ಮೂಲತಃ ಸಗಡಗೇರಿ ಗ್ರಾಮದ ಮೂಲ ನಿವಾಸಿಗಳಾದ ದಿ. ನಾರಾಯಣ ಸುಬ್ಬಯ್ಯ ನಾಯಕ ಹಾಗೂ ದಿ. ಹೇಮಲತಾ ನಾರಾಯಣ ನಾಯಕ ಇವರ ಮೊಮ್ಮಗ. ಸಗಡಗೇರಿ ಗ್ರಾಮದ ನಿವಾಸಿಯಾದ ಪ್ರತಿಮಾ ಮತ್ತು ವಿನೋದ್ ನಾಯಕ ದಂಪತಿಗಳ ಸುಪುತ್ರರಾಗಿರುತ್ತಾರೆ.
ಸ್ವರ್ಣ ಪದಕಕ್ಕೆ ಭಾಜನರಾದ ಅವರನ್ನು ಲಕ್ಷ್ಮಿ ರಾಮಚಂದ್ರ ನಾಯಕ ಅಡ್ಲೂರ, ಅಂಕೋಲಾದ ನವ ಕರ್ನಾಟಕ ಸಂಘದ ಅಧ್ಯಕ್ಷ ಮಂಜುನಾಥ್ ಗಾಂವಕರ್ ಬರ್ಗಿ, ಶ್ರೀಮತಿ ಹೊನ್ನಮ್ಮ ನಾಯಕ ಸಾಹಿತಿ ಕಣಗೀಲ ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಯೋಗ ಗುರು ಉದಯ ಬಾಸಗೋಡ ಹಾಗೂ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಖಜಾಂಚಿ ಶಿವಚಂದ್ರ ಬಿ.ಎಸ್.ನಾಯಕ. ಅಧ್ಯಕ್ಷರು ಸುಪ್ರಭಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಅಂಕೋಲಾ, ಎಸ್.ಬಿ. ಪ್ರತಾಪ ಕುಮಾರ ಉಪಾಧ್ಯಕ್ಷರು ಸುಪ್ರಭಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ. ಅಂಕೋಲಾ ಹಾಗೂ ಪ್ರೊ. ಮೋಹನ ಹಬ್ಬು ವಂದಿಗೆ ಮೊದಲಾದವರು ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ