ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ.) ದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಇವರು ವಹಿಸಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಅವರುಗಳ ಕೊಡುಗೆಯನ್ನು ಸ್ಮರಿಸುತ್ತಾ, ಶಿಕ್ಷಕರು ಸಮಯ ಬದ್ಧತೆ, ವಿಷಯ ಬದ್ಧತೆ, ಭಾಷಾ ಬದ್ಧತೆ ಹಾಗೂ ಶಾಲಾ ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.


ಉಪನ್ಯಾಸಕಿ ಶ್ರೀಮತಿ ಅನುಷಾ ಡಿ. ಜೆ ಹಾಗೂ ಪ್ರಶಿಕ್ಷಣಾರ್ಥಿ ದೀಕ್ಷಿತ್ ಶಿಕ್ಷಕರ ದಿನದ ವಿಶೇಷದ ಕುರಿತು ಮಾತನಾಡಿದರು.  ಶಿಕ್ಷಕರ ಕುರಿತಾಗಿ ಪ್ರಶಿಕ್ಷಣಾರ್ಥಿಗಳು ಸಮೂಹ ಗಾಯನವನ್ನು ಹಾಡಿದರು ಹಾಗೂ ಪ್ರಶಿಕ್ಷಣಾರ್ಥಿ ಜಾಸ್ಮಿನ್ ರೇಶ್ಮಾ ಕ್ರಾಸ್ತ ಸ್ವರಚಿತ ಕವನವನ್ನು ವಾಚಿಸಿದರು. ಕಾಲೇಜಿನ ಉಪನ್ಯಾಸಕ ವೃಂದದವರಿಗೆ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಉಪನ್ಯಾಸಕಿ ವಿದ್ಯಾಶ್ರೀ ಪಿ, ಅನುಷಾ ಡಿ ಜೆ, ಚೈತ್ರ ಹಾಗೂ ಬೋಧಕೇತರ ಸಿಬ್ಬಂದಿ ವಂದನಾ ಮತ್ತು ಪ್ರಥಮ ಹಾಗೂ ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


ಪ್ರಶಿಕ್ಷಣಾರ್ಥಿಗಳಾದ ತೇಜಸ್ವಿನಿ ಸ್ವಾಗತಿಸಿ, ಕಿರಣ್ ಧನ್ಯವಾದವಿತ್ತರು.  ಕೀರ್ತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top