ಉಡುಪಿಯಲ್ಲಿ ಸೆ.13ರಂದು ಶ್ರೀವಿದ್ಯೇಶನಾದನೀರಾಜನಮ್

Upayuktha
0


ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಮತ್ತು ಶ್ರೀಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ಹಾಗೂ ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ  ದಿವ್ಯೋಪಸ್ಥಿತಿಯಲ್ಲಿ ಶ್ರೀಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ರಚಿಸಿರುವ ಶ್ರಿವಿದ್ಯೇಶವಿಠ್ಠಲಾಂಕಿತ ಕೃತಿಗಳ ಸಾಮೂಹಿಕ ಗಾಯನದ *ಶ್ರೀವಿದ್ಯೇಶ ನಾದ ನೀರಾಜನಮ್ ಎಂಬ ವಿನೂತನ ಕಾರ್ಯಕ್ರಮವನ್ನು ಸೆ.13 ರಂದು ಸಂಜೆ 4:30ಕ್ಕೆ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.  


ಯತಿತ್ರಯರ ವ್ಯಾಖ್ಯಾನದೊಂದಿಗೆ ಸಾಮೂಹಿಕ ಗಾಯನದ ಕಾರ್ಯಕ್ರಮ ನಡೆಯಲಿದೆ.


ಸಮಕಾಲೀನ ಕರ್ನಾಟಕದಲ್ಲಿ ಅತ್ಯಂತ ಅಪರೂಪದ ಕೀರ್ತನಕಾರ ಮಠಾಧಿಪತಿಗಳು ಶ್ರೀ ಭಂಡಾರಕೇರಿ ಶ್ರೀಗಳು. ಒಟ್ಟಾರೆಯಾಗಿ ಸಾಧು ಸಂತರನ್ನು ನೋಡಿದಾಗಲೂ ಕವಿಹೃದಯದ ಅಪರೂಪದ ಸಂತರು ಇವರು. ವಿದ್ಯೇಶ ವಿಠಲ ಅಂಕಿತನಾಮದಲ್ಲಿ ಮುನ್ನೂರರಷ್ಟು ಹರಿಕೀರ್ತನೆಗಳನ್ನು ರಚಿಸಿರುವ ಹೆಗ್ಗಳಿಕೆ ಇವರದ್ದು. ಆ ಮುಖೇನ ತಮ್ಮನ್ನು ಹರಿದಾಸ ಸಾಹಿತ್ಯದ ವರ್ತಮಾನದ ಕೊಂಡಿಯಾಗಿ ರೂಪಿಸಿಕೊಂಡಿದ್ದಾರೆ. ತಮ್ಮ ಕವಿತಾ ರಚನಾ ಕೌಶಲ್ಯದಿಂದ ಸಂಸ್ಕೃತ ಮತ್ತು ಕನ್ಮಡದಲ್ಪಿ ಅನೇಕ ದೇಶ ಭಕ್ತಿಗೀತೆಗಳನ್ನೂ ರಚಿಸಿದ್ದಾರೆ.


ಆ ಕೀರ್ತನೆಗಳ ಮುದ್ರಣ, ನೂರಾರು ಕಲಾವಿದರ ಮೂಲಕ ರಾಗ ತಾಳ ಬದ್ಧವಾಗಿ ಹಾಡಿಸುವುದು ಮತ್ತು ಅನೇಕ ಪ್ರಸಿದ್ಧ ನೃತ್ಯ ಕಲಾವಿದರ ಮೂಲಕ ನೃತ್ಯಕ್ಕೂ ಆ ಕೀರ್ತನೆಗಳನ್ನು ಸಂಯೋಜಿಸಿ ನೃತ್ಯ ಪ್ರಸ್ತುತಿಗಳನ್ನೂ ಮಾಡಿಸುವ ಮೂಲಕ ಉತ್ತಮ ಕಲಾಪೋಷಣೆ ಮಾತ್ರವಲ್ಲದೇ ತಮ್ಮ ಕೀರ್ತನೆಗಳನ್ನು ಕೇವಲ ಕೃತಿಗೆ ಸೀಮಿತವಾಗಿರಿಸದೇ ಜನಸಾಮಾನ್ಯರ ನಡುವೆ ಪ್ರಚಲಿತದಲ್ಲಿರುವಂತೆಯೂ ಮಾಡುತ್ತಿರುವುದು ಉಲ್ಲೇಖನೀಯ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top