ಉಡುಪಿ: ಶ್ರೀ ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥರು ಮತ್ತು ಶ್ರೀ ಚಿತ್ರಾಪುರ ಶ್ರೀ ವಿದ್ಯೇಂದ್ರ ತೀರ್ಥರು ತಂತಮ್ಮ ಚಾತುರ್ಮಾಸ್ಯ ವ್ರತಗಳನ್ನು ಸಂಪನ್ನಗೊಳಿಸಿ ಬುಧವಾರ ಸಂಜೆ ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಅಚಾನಕ್ಕಾಗಿ ಮಧ್ವರ ಸನ್ನಿಧಾನದಲ್ಲಿ ಭೇಟಿಯಾದರು.
ನಾಳೆ ಗುರುವಾರ ಶ್ರೀ ಚಿತ್ರಾಪುರ ಶ್ರೀಗಳ 25 ನೇ ಜನ್ಮನಕ್ಷತ್ರ ಎಂಬ ವಿಷಯ ತಿಳಿದ ಭಂಡಾರಕೇರಿ ಶ್ರೀಗಳು ತಮ್ಮಲ್ಲಿದ್ದ ಶ್ರೀ ಮದ್ಭಾಗವತ ಗ್ರಂಥವನ್ನು ರಜತವರ್ಷದ ಜನ್ಮೋತ್ಸವಕ್ಕೆ ಉಡುಗೊರೆಯಾಗಿ ನೀಡಿ ನಾಳೆಯಿಂದಲೇ ಪ್ರತಿನಿತ್ಯ ಸ್ವಲ್ಪ ಹೊತ್ತು ಭಾಗವತ ಚಿಂತನೆಯನ್ನು ನಡೆಸುವಂತೆ ಸೂಚಿಸಿ ಮಾಲಾರ್ಪಣೆಗೈದು ಸಂತೋಷದಿಂದ ಹರಸಿದರು. ಮಧ್ವಗುರುಗಳ ಸನ್ನಿಧಿಯ ಮುಂಭಾಗ ಆಕಸ್ಮಿಕವಾಗಿ ನಡೆದ ಈ ಆತ್ಮೀಯ ದೃಶ್ಯವನ್ನು ಅಲ್ಲಿದ್ದ ನೂರಾರು ಭಕ್ತರು ಚಕಿತರಾಗಿ ಕಣ್ತುಂಬಿಕೊಂಡರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ