ನಿಸರ್ಗರಂತಹ ತುಳು ಹೋರಾಟಗಾರರು ಮತ್ತೆ ಮತ್ತೆ ಹುಟ್ಟಿಬರಲಿ: ದಯಾನಂದ ಕತ್ತಲ್ಸಾರ್

Upayuktha
0


ಮಂಗಳೂರು: ತುಳು ಭಾಷೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ದಾಮೋದರ ನಿಸರ್ಗರು ಅಹರ್ನಿಶಿ ದುಡಿದಿದ್ದಾರೆ. ತಾನು ಬೆಳೆಯುವುದರ ಜೊತೆ ಜೊತೆಗೆ ತೌಳವರಿಗೆ  ತುಳು ಬದುಕನ್ನು ಕಟ್ಟಿಕೊಟ್ಟಿದ್ದಾರೆ. ತುಳುಕೂಟದ ಬೆಳವಣಿಗಾಗಿ ಅವರು ಗಂಧದಂತೆ ತಮ್ಮನ್ನು ತೀಡಿಕೊಳ್ಳುತ್ತಾ ಇಂದು ಚಿರಸ್ಮರಣೀಯ ರಾಗಿ ಉಳಿದಿದ್ದಾರೆ. ಈ ರೀತಿ ಸಾವಿನ ನಂತರವೂ ನೆನಪುಳಿಯುವ ತುಳುವರು ಮತ್ತೆ ಮರಳಿ ಮರಳಿ ತುಳು ಮಣ್ಣಲ್ಲಿ ಹುಟ್ಟಿಬರಲಿ" ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದರು.


ಅವರು ತುಳುಕೂಟ (ರಿ) ಕುಡ್ಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮರೋಳಿ ಬಿ. ದಾಮೋದರ ನಿಸರ್ಗರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.


ಕಾನೂನು ಕಾಲೇಜಿನ ಪ್ರಾಂಶುಪಾಲ ತಾರಾನಾಥ, ಜೆ.ವಿ. ಶೆಟ್ಟಿ, ವರ್ಕಾಡಿ ರವಿ ಅಲೆವೂರಾಯ, ಚಂದ್ರಶೇಖರ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ 'ನಾಗೇಶ ದೇವಾಡಿಗ ಕದ್ರಿ, ಶ್ರೀಮತಿ ಕೆ.ಎ ರೋಹಿಣಿ, ಶೋಭಾ ಕೇಶವ್ 'ಮಮತಾ ಪ್ರವೀಣ್, ಸುಜಾತಾ ಸುವರ್ಣ ಕೊಡ್ಮಾಣ್, ಕಾಮಾಕ್ಷಿ,  ರಮೇಶ್ ಕುಲಾಲ್, ಪಿ.ಎ ಪೂಜಾರಿ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಎಡ್ವರ್ಡ್, ಸಾರಂಗ್, ದಿನೇಶ್, ಕುಂಪಲ, ಡಾ ವಿನ್ಯಾಸ್ ಜತ್ತನ್ನ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top