ಮನಸ್ಸು ಮತ್ತು ಭವಿಷ್ಯವನ್ನು ರೂಪಿಸುವವರು ಶಿಕ್ಷಕರು: ಸದಾಶಿವ ಐತಾಳ್

Upayuktha
0


ಮಂಗಳೂರು: ಮನಸ್ಸು ಮತ್ತು ಭವಿಷ್ಯವನ್ನು ರೂಪಿಸುವವರು ಶಿಕ್ಷಕರು ಎಂದು ಶ್ರೀ ಸಾಲಿಗ್ರಾಮ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರೂ ನ್ಯಾಯವಾದಿಗಳು ಅದ ಸದಾಶಿವ ಐತಾಳ್ ಮುಖ್ಯ ಅತಿಥಿ ಸ್ಥಾನದಿಂದ ನುಡಿದರು.


ಅವರು ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯು ಆಯೋಜಿಸಿದ್ದ ಸಂಸ್ಥೆಯ ಸಭಾಭವನ ಪಾಂಡೇಶ್ವರ ಇಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೂಟ ಸಮಾಜದ ಹಿರಿಯ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು. ಅಲ್ಲದೆ ಇಂತಹ ಒಂದು ಸುಂದರ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.


ಸಭಾ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಮತ್ತು ಜ್ಞಾನ ಮತ್ತು ಬುದ್ಧಿವಂತಿಕೆಯ ಹಾದಿಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರ ಪ್ರಯತ್ನಗಳು ಶ್ಲಾಘನೀಯ ಮಕ್ಕಳ ಕಲಿಕೆಯ ಪ್ರಯಾಣದಲ್ಲಿ ಮಾರ್ಗದರ್ಶನ ನೀಡುವ ನಕ್ಷತ್ರಗಳಿದ್ದಂತೆ,, ಶಿಕ್ಷಕರು ಸಮಾಜದ ಆಧಾರ ಸ್ಥಂಭಗಳು ಎಂದರು. ಕೂಟ ಬ್ರಾಹ್ಮಣ ಸಮಾಜದಲ್ಲಿ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ್ಯವನ್ನು ಕಂಡ ಹಿರಿಯ ಶಿಕ್ಷಕರಾದ ಡಾ. ಲೀಲಾ ಉಪಾಧ್ಯಾಯ, ಡಾ.ಚ.ನಾ ಶಂಕರ್ ರಾವ್, ಡಾ. ಸರಸ್ವತಿ ಎಸ್ ರಾವ್, ಕೆ ಅನುರಾಧ ಎಸ್ ರಾವ್ ಮೊದಲಾದವರನ್ನು ಗೌರವಿಸಲಾಯಿತು.


ಸನ್ಮಾನಿತರು ಸಂದರ್ಭೋಚಿತವಾಗಿ ಮಾತನಾಡಿದರು. ವಿದುಷಿ ಮಾನಸ ಕಾರಂತ್ ಪ್ರಾರ್ಥಿಸಿದರು. ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ ವಿದುಷಿ ಪ್ರತಿಮಾ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕೋಶಾಧಿಕಾರಿ ಪದ್ಮನಾಭ ಮಯ್ಯ, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ಮೈಯ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮಯ್ಯ, ಕಾರ್ಯಕಾರಿಣಿ ಸದಸ್ಯರಾದ ಸಿಎ ಚಂದ್ರಮೋಹನ್, ಶಿವರಾಮ, ಪ್ರಸನ್ನ ಕುಮಾರ್ ಇರುವೈಲ್, ಇಂಜಿನಿಯರ್ ರಂಗನಾಥ ಐತಾಳ್ ಮಹಿಳಾ ವಿಭಾಗದ ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ನಿಕಟ ಪೂರ್ವ ಅಧ್ಯಕ್ಷೆ ಸುಮತಿ ಕೊರ್ಯ, ಅನುಪಮ, ಹಿರಿಯರಾದ ಶಿವರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಧನ್ಯವಾದ ನೀಡಿದರು. ಇತ್ತೀಚೆಗೆ ನಿಧನರಾದ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಭಾಸ್ಕರ ನಾವಡರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top