ಸುರತ್ಕಲ್: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುರತ್ಕಲ್ ಲೈಟ್ ಹೌಸ್ ಮತ್ತು ಎನ್‌ಐಟಿಕೆ ಸಂಪರ್ಕಿಸುವ ರಸ್ತೆ ಕುಸಿದಿದ್ದು ಶಾಸಕ ಡಾ.ಭರತ್ ಶೆಟ್ಟಿ ವೈ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆ.29ರಂದು ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು. ಶನಿವಾರ ರಸ್ತೆಯ ಅಡಿಭಾಗ ಕುಸಿದು ಡಾಮರು ರಸ್ತೆಯೂ ಅಪಾಯದಲ್ಲಿದೆ. ವಾಹನ ಸಂಚಾರ ನಿಷೇಧಿಸಲಾಗಿದ್ದು, ಹೆಚ್ಚಿನ ಹಾನಿಯಾಗದಂತೆ ಮರಳು ಚೀಲವಿಟ್ಟು ಸುರಕ್ಷತೆ ಒದಗಿಸಲು ಶಾಸಕ ಡಾ.ಭರತ್ ಶೆಟ್ಟಿ ವೈ ಸೂಚಿಸಿದರಲ್ಲದೆ, ರಸ್ತೆಯ ನಿರ್ಮಾಣಕ್ಕೂ ಪೂರಕ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮನಪಾ ಸದಸ್ಯರಾದ ಶ್ವೇತ ಪೂಜಾರಿ, ಶೋಭಾ ರಾಜೇಶ್, ಬಿಜೆಪಿ ಪ್ರಮುಖರಾದ ದಿನಕರ್ ಇಡ್ಯಾ, ರಾಜೇಶ್ ಮುಕ್ಕ, ರಾಘವೇಂದ್ರ ಶೆಣೈ, ಪುಷ್ಪರಾಜ್ ಮುಕ್ಕ ಮತ್ತಿತರರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ