ಸುಳ್ಯ ತಾಲೂಕು ಮಟ್ಟದ ಭಜನಾ ಶಿಬಿರದ ಪೂರ್ವಭಾವಿ ಸಭೆ

Upayuktha
0


ಸುಳ್ಯ: ಸುಳ್ಯ ತಾಲೂಕು ಮಟ್ಟದ ಭಜನಾ ಶಿಬಿರ ಸಮಿತಿ- 2024 ಇದರ ಪೂರ್ವಭಾವಿ ಸಭೆಯನ್ನು ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ನಡೆಸಿ ನೂತನ ಸಮಿತಿಯನ್ನು ರಚಿಸಲಾಯಿತು.


ಸಂಚಾಲಕರಾಗಿ ಅವಿನ್ ಬೆಟ್ಟಂಪಾಡಿ, ಸಹ ಸಂಚಾಲಕರಾಗಿ ರಾಜ್ ಮುಖೇಶ್ ಬೆಟ್ಟಂಪಾಡಿ, ನಾರಾಯಣ ಬೆಟ್ಟಂಪಾಡಿ, ಉದಯಭಾಸ್ಕರ್ ಸುಳ್ಯ, ಸುರೇಶ್ ವಿ ಆರ್, ವಿಶ್ವನಾಥ ಪಡ್ಡಂಬೈಲ್ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. 


ಉಪಸ್ಥಿತರಿದ್ದ ಸದಸ್ಯರಿಂದ ಭಜನಾ ಶಿಬಿರದ ಬಗ್ಗೆ ಅಭಿಪ್ರಾಯಗಳನ್ನು ಪಡೆಯಲಾಯಿತು. ಜಿಲ್ಲೆ ಹಾಗೂ ತಾಲೂಕಿನ ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅಕ್ಟೋಬರ್ ತಿಂಗಳ ದಸರಾ ರಜೆಯಲ್ಲಿ ತಾಲೂಕು ಮಟ್ಟದ ಭಜನಾ ಶಿಬಿರವನ್ನು ನಡೆಸುವುದು ಹಾಗೂ ಕುಳಿತು ಹಾಡುವ ಮತ್ತು ಕುಣಿದು ಹಾಡುವ ಎರಡು ರೀತಿಯ ಭಜನೆಗಳನ್ನು ಶಿಬಿರದಲ್ಲಿ ಕಲಿಸುವುದರ ಜೊತೆಗೆ ದೇಶೀ ಕ್ರೀಡೆಗಳು, ಉಪನ್ಯಾಸ ಮುಂತಾದ ಮೌಲ್ಯಯುತವಾದ ವಿಚಾರಗಳನ್ನು ಶಿಬಿರದಲ್ಲಿ ಜೋಡಿಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.


ಶಿಬಿರದ ಕೊನೆಯ ದಿನ ಭಜನಾ ಮಂಗಳೋತ್ಸವ ಹಾಗೂ ಉದಯೋನ್ಮುಖ ಗಾಯಕರಿಂದ ಗಾನ ವೈಭವ ಕಾರ್ಯಕ್ರಮ ನಡೆಸುವುದಾಗಿಯೂ ತೀರ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top