ಶ್ರೀ ಕೃಷ್ಣ ಪರಮಾತ್ಮ ಗೋಪಾಲಕರಿಗೆ ಗೋವುಗಳಿಗೆ ಸಜ್ಜನರಿಗೆ ಬಂಧ ಆಪತ್ತುಗಳನ್ನು ಪರಿಹಾರ ಮಾಡುತ್ತಾನೆ. ಈ ಪರಿಸರದಲ್ಲಿ ಮತ್ತೆ ಅಪಾಯ ಆಗಬಾರದು ಎಂದು ಅಪಮೃತ್ಯು ಬರಬಾರದು ಎಂದು ಪರಮಾತ್ಮ ಅಲ್ಲಿರುವ ಕಾಲಿಯ ನಾಗನನ್ನು ಪರೀಕ್ಷಿತರಾಜರಿಗೆ ಸಾಕಷ್ಟು ಜ್ಞಾನ ಇದೆ. ಅದಕ್ಕೆ ಕೇಳಿದರು ಎಷ್ಟೋ ಯುಗಗಳಿಂದ ಯಮುನಾ ನದಿಯಲ್ಲಿ ವಾಸ ಮಾಡಿದ್ದಾನೆ ಅದು ಹೇಗೆ ಸಾಧ್ಯವಾಯಿತು ಎಂದು ಕೇಳುತ್ತಾರೆ. ಮಹಾ ಸಾಮರ್ಥ್ಯ ಪಡೆದವ ಕಾಲಿಯ ನಾಗ. ಕಾಲಿಯ ನಾಗನಿಗೆ ಬಹಳ ದೊಡ್ಡ ಆಯುಷ್ಯವಿದೆ. ಬಲಿಷ್ಠವಾದ ನಾಗ. ನೀರು ಕುದಿಯುವಷ್ಟು ವಿಷಪೂರಿತವಾಗಿತ್ತು. ನದೀ ಮೇಲೆ ಹಾರಿ ಹೋದ ಪಕ್ಷಿ ಸಾಯಬೇಕು ಪಶುಗಳು ಗಾಳಿಯಿಂದ ಸಾಯಬೇಕು ಅಂತಹ ಸಾಮರ್ಥ್ಯವುಳ್ಳವ ಆಗಿದ್ದ. ಅವನನ್ನು ಆ ಸ್ಥಳದಿಂದ ಓಡಿಸಬೇಕು ಎಂದು ಪರಮಾತ್ಮ ನಿರ್ಧಾರ ಮಾಡಿದ್ದ. ಇಂದಿನ ದಿನಗಳಲ್ಲಿ ವಿಷಯ ಆಸಕ್ತಿಗಳು ವಿಷದಂತೆ ಹಾನಿ ಮಾಡುವಂತೆ ಇರುತ್ತವೆ. ಬಾಹ್ಯ ಪ್ರಪಂಚದಲ್ಲಿ ಎಚ್ಚರ ಇದ್ದು ಧಾರ್ಮಿಕ ಪ್ರಪಂಚದಲ್ಲಿ ಮೂರ್ಛಿತನಾಗಿ ಬೀಳುತ್ತಾನೆ. ಹೀಗಾಗಿ ವಿಷ ಮತ್ತು ವಿಷಯಗಳಲ್ಲಿ ಸಾಮ್ಯವಿದೆ. ಎರಡರಿಂದ ಪಾರು ಮಾಡಲು ಪರಮಾತ್ಮ ತಾನೇ ಬಂದು ಕಾಪಾಡಬೇಕು ಕಾಪಾಡುತ್ತಾನೆ. ಅದಕ್ಕಾಗಿ ಈ ಕತೆಯನ್ನು ನಾವು ಕೇಳಬೇಕು.
ಶ್ರೀಕೃಷ್ಣ ಪರಮಾತ್ಮ ಯಮುನಾ ನದೀಯಿಂದ ಆ ನಾಗನನ್ನು ಓಡಿಸಬೇಕು ದೂರ ಕಳಿಸಬೇಕೆಂದು ಮೇಲಿನಿಂದ ಹಾರಿದ್ದಾನೆ. ಯಮುನಾ ನದಿಯಲ್ಲಿ ಹಾರಿದರೆ ನೀರು ಬಹಳ ಎತ್ತರಕ್ಕೆ ಹಾರಿದೆ. ಇದರಿಂದ ಕೃಷ್ಣ ಎಂದರೆ ಭಗವಂತನ ಪಾದದ ಸ್ಪರ್ಶವಾದಾಗ ನೀರು ಮೇಲೆ ಹಾರಿದ. ದೇವರ ಪಾದದ ಸ್ಪರ್ಶದಿಂದ ನಾನು ಪ್ರಪಂಚದಲ್ಲಿ ಅತೀ ಉನ್ನತ ಸ್ತಾನವನ್ನು ಪಡೆಯುತ್ತೇವೆ ಎಂದು ತೋರಿಸುತ್ತದೆ. ಶ್ರೀಮದಾಚಾರ್ಯರು ಭಾಗವತದ ಶ್ಲೋಕಗಳನ್ನು ಯಥಾವತ್ತಾಗಿ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಹೇಳುತ್ತಾರೆ. ಹಾಗೆ ಮೇಲಿಂದ ಹಾರಿದ್ದು ಅವನ ಕಲೆ ಸಾಮರ್ಥ್ಯ ಶಕ್ತಿ ಇದು ಲೀಲಾಜಾಲವಾಗಿರುತ್ತದೆ ಅದು ನಮ್ಮ ದೃಷ್ಟಿಯಲ್ಲಿ ದೊಡ್ಡದು. ಪರಮಾತ್ಮ ಅನಂತ ಬಲ. ಅಪರಿಮಿತ ಸಾಮರ್ಥ್ಯವಿದೆ., ಇಂತಹ ದೊಡ್ಡ ವಿಷದ ಮಡುವಿನಲ್ಲಿ ಹಾರಿದ್ದಾನೋ ಅವನು ಸತ್ತರೇ ಎಂದು ತಿಳಿಯಬಾರದು, ಪರಮಾತ್ಮನಿಗೆ ಅಂತ ಸಾವಿಲ್ಲ, ಅವನು ಅನಂತ ಅವನಿಗೆ ಯಾವ ವಿಷದಿಂದ ಪರಿಣಾಮ ಆಗುವುದಿಲ್ಲ, ಅದಕ್ಕೆ ಅವನು ಅನಂತ. ಶೇಷದೇವರ ಮೇಲೆ ಮಲಗಿದ ಭಗವಂತನಿಗೆ ಆ ನಾಗದಿಂದ ಏನೂ ಆಗುವುದಿಲ್ಲ ಹೀಗಾಗಿ ಸಾಮಾನ್ಯನಾಗದಿಂದ ಏನೂ ಆಗುವುದಿಲ್ಲ ಎಂದು ತಿಳಿಯಬೇಕು.
ಗರುಡ ಮಂತ್ರ ಹಾಕಬೇಕು ಎನ್ನುತ್ತಾರೆ. ಆದರೆ ಆ ಗರುಡ ದೇವರಿಗೆ ಶಕ್ತಿ ಬರುವುದೇ ಪರಮಾತ್ಮನ ಅನುಗ್ರಹದಿಂದಲೇ ಆ ಶಕ್ತಿ ಬಂದಿದೆ ಗರುಡ ಮಂತ್ರ ಹಾಕ ಬೇಕಿತ್ತು ಎಂದವರಿಗೆ ಹೇಳುತ್ತಾರೆ, ಗರುಡವಾಹನ ಮಂತ್ರ ಹಾಕಬೇಕಿಲ್ಲ. ಅದಕ್ಕೆ ಅವನೇ ಅನಂತ, ನಿತ್ಯನಾದ, ಮಹಾಸಾಮರ್ಥ್ಯ ಸಂಪನ್ನನಾದ ಪರಮಾತ್ಮ ವಿಷದ ಮಡುವಿನಲ್ಲಿ ಹಾರಿದ್ದು ವಿಶೇಷವಲ್ಲ ಎಂದು ತೋರಿಸುತ್ತಾನೆ. ಪರಮಾತ್ಮನನ್ನು ನಂಬಿದವರಿಗೆ ಉನ್ನತಿ ಇದೆ ಎಂದು ತೋರಿಸುತ್ತಾನೆ. ಪರಮಾತ್ಮ ಒಳಗೆ ಹಾರಿದ ನಂತರ ಕಾಲಿಯನಿಗೆ ಯಾರೋ ಬಂದಿದ್ದಾರೆ ಎಂಬ ಸೂಚನೆ ದೊರೆತು ಯಾರು ಎಂದು ಇದ್ದಕಿದ್ದಂತೆ ಶ್ರೀಕೃಷ್ಣ ಪರಮಾತ್ಮನಿಗೆ ಸುತ್ತಿಕೊಂಡಿದ್ದಾನೆ. ಲೋಕ ದೃಷ್ಟಿಯಿಂದ ನೋಡಿದರೆ ಶೇಷಶಾಯಿಗೆ ಆನಂದವಾಯಿತು ಎಂದು ಹೇಳುತ್ತಾರೆ. ಗೋಪಾಲಕರಿಗೆ ದುಃಖವಾಗುತ್ತಿತ್ತು. ಬಲರಾಮ ಶೇಷಾವತಾರ ಅದಕ್ಕೆ ಅವನಿಗೆ ಬೇಸರವಾಗಬಾರದೆಂದು ಬಲರಾಮನನ್ನು ಕರೆದುಕೊಂಡು ಬಂದಿಲ್ಲ. ಗೋಪಾಲಕರಿಗೆ ದುಃಖ ಶೋಕ ಭಯ ಎಲ್ಲವೂ ಆಗಿದೆ. ಕೃಷ್ಣನಿಗೆ ಏನಾಗಿದೆ ಎಂದು ತಿಳಿದ್ದಕ್ಕೆ ಇವರೆಲ್ಲಾ ಬಿದ್ದಿದ್ದಾರೆ.
ನಾವು ಪರಮಾತ್ಮನಿಗೆ ದುಃಖ ಎಂದು ತಿಳಿದರೆ ನಮಗೆ ದುಃಖ ಶೋಕ ನರಕ ಆಗುತ್ತದೆ ಎಂದು ಭಾಗವತ ನಮಗೆ ತೋರಿಸುತ್ತದೆ. ಕೃಷ್ಣನ ಮೇಲೆ ಗೋಪಾಲಕರಿಗೆ ಭಕ್ತಿ ಇದೆ ಆದರೆ ಗೋವುಗಳು ಕರುಗಳು ಕೂಡ ಅಳುತ್ತಿವೆ. ಶ್ರೀಕೃಷ್ಣನಲ್ಲಿ ಆ ರೀತಿ ಭಕ್ತಿ ಮಾಡಬೇಕು ಆದರೆ ದೋಷ ಚಿಂತನೆ ಮಾಡಬಾರದು ಎಂದು ತಿಳಿಯಬೇಕು. ಗೋಕುಲದಲ್ಲಿ ಅಪಶಕುನದ ಸೂಚನೆಗಳು ನಂದ ಯಶೋದೆಯರಿಗೆ ಆಗುತ್ತದೆ. ಬಲರಾಮನಿಗೆ ಶೇಷದೇವರ ಅಂಶ ಆಗಿರುವುದರಿಂದ ಕೃಷ್ಣನಿಗೆ ಏನು ಆಗಿರುವುದಿಲ್ಲ ಚಿಂತೆ ಮಾಡಬೇಡಿ ಎಂದು ಹೇಳುತ್ತಾರೆ. ಚಿಂತಾಮಣಿಯಂತಿರುವ ಶ್ರೀಕೃಷ್ಣನ ಬಗೆಗೆ ಚಿಂತನೆಯನ್ನು ಮಾಡಿ ಅವನ ಬಗ್ಗೆ ಚಿಂತ ಮಾಡಬೇಡಿ ಎನ್ನುತ್ತಾನೆ, ಯಶೋದೆ ನಂದನಿಗೆ ಆದ ಅಪಶಕುನಗಳಿಗೆ ಕೃಷ್ಣನಿಗೆ ತೊಂದರೆಯಾದ ಸೂಚನೆಯಲ್ಲ ಗೋವುಗಳ ಗೋಪಾಲಕರ ಆದ ವಿಷದ ಗಾಳಿ ಬಡಿದ ಅನರ್ಥದ ಸೂಚನೆ. ಪರಮಾತ್ಮನ ಹೆಜ್ಜೆಯ ಗುರುತನ್ನು ಅನುಸರಿಸಿ ಹೋಗುತ್ತಾರೆ. ಶ್ರೀಕೃಷ್ಣ ಪರಮಾತ್ಮ ಹೆಜ್ಜೆಯ ಗುರುತು ಎಷ್ಟು ಪವಿತ್ರವಾದುದು ಎಂದು ತೋರಿಸಲು ಅಕ್ರೂರನು ಆ ಪಾದ ಚಿಹ್ನೆಗಳ ಮೇಲೆ ಹೊರಳಾಡಿ ಧನ್ಯನಾದನು ಎಂದು ಮಹಾಭಾರತದಲ್ಲಿ, ಭಾಗವತದಲ್ಲಿ ಬರುತ್ತದೆ. ಪರಮಾತ್ಮನ ಭಕ್ತರ ಪಾದ ಧೂಳಿ ಪಡೆದರೆ ಧನ್ಯ ಆ ಪರಮಾತ್ಮ ಪಾದಧೂಳಿ ಸ್ವೀಕರಿಸಿದವರೇ ಧನ್ಯರು.
ಕೃಷ್ಣ ಹಾವಿನ ಮಧ್ಯದಲ್ಲಿದ್ದದ್ದು ನೋಡಿ ಗಾಬರಿಯಾಗಿದ್ದಾರೆ. ಬಾಕಿ ಗೋಪಿಕಾ ಸ್ತ್ರೀಯರು ಯಶೋದೆಗೆ ಸಮಾಧಾನ ಹೇಳುತ್ತಿದ್ದಾರೆ. ಹಿಂದೆ ನಡೆದ ಎಲ್ಲ ತೃಣಾವರ್ತ, ಪೂತನಾ ಮೊದಲಾದ ಘಟನೆಗಳನ್ನು ನೆನಪಿಸಿ ಧೈರ್ಯ ತುಂಬಿದರು. ಇನ್ನು ಸುಮ್ಮನೆ ಕುಳಿತರೆ ಉಪಯೋಗವಿಲ್ಲವೆಂದು, ತಮ್ಮ ಪ್ರಿಯ ಜನರು ಗಾಬರಿಯಿಂದ ಸಾಯಬಹುದೆಂದು ಯೋಚಿಸಿ ಪರಮಾತ್ಮ ನರ್ತನ ಮಾಡಲು ಆರಂಭಿಸುತ್ತಾನೆ. ಹೆಡೆ ಬಹಳ ಸೂಕ್ಷ್ಮ ಮೆತ್ತಗೆ ಇರುತ್ತದೆ ಆದರೆ ಭಗವಂತ ಅದಕ್ಕೆ ಎಷ್ಟು ಶಕ್ತಿ ಇರುತ್ತದೆ ಹೇಗೆ ಎಂದರೆ ಶೇಷದೇವರು ಬ್ರಹ್ಮಾಂಡವನ್ನು ಹೊತ್ತಿದ್ದಾರೆ ಅದರಂತೆ ಸಾಮಾನ್ಯನಾಗನಿಗೆ ಪರಮಾತ್ಮ ನರ್ತನ ಮಾಡಿದರೆ ಸುಮ್ಮನೆ ಇರಲು ಆಗಲು ಕಾರಣ ಪರಮಾತ್ಮ ಶಕ್ತಿ ಕೊಟ್ಟಿದ್ದಾನೆ ಶೇಷದೇವರಿಗೆ ಶಕ್ತಿ ಕೊಟ್ಟಂತೆ ಕಾಲಿಯನಾಗನಲ್ಲಿ ನಿಂತು ತನ್ನ ಭಾರ ತಾನೇ ಹೊತ್ತಿದ್ದಾನೆ ಎಂಬ ಸಂದೇಶವನ್ನು ಕೊಟ್ಟಿದ್ದಾನೆ. ನಾಗ ತಲೆ ಎತ್ತಿದರೆ ಮತ್ತೆ ಬಗ್ಗಿಸುತ್ತಿದ್ದ ಇಲ್ಲಿ ನಾವು ತಿಳಿಯಬೇಕಾದ್ದು ಅಹಂಕಾರ ಎಂಬ ನಾಗ ನಮ್ಮ ತಲೆಯ ಮೇಲೆ ಏರಿದಾಗ ಮತ್ತೆ ಮತ್ತೆ ಬಗ್ಗಿಸಿ ನಮ್ಮ ಅಹಂಕಾರವನ್ನು ದಮನ ಮಾಡುತ್ತಾನೆ. ನಾವು ವಿಷ್ಣುಭಕ್ತರೇ ಆದರೂ ಅಹಂಕಾರ ಬಂದಾಗ ಅದನ್ನು ಪರಿಹಾರ ಮಾಡಲು ಬಗ್ಗಿಸುತ್ತಾನೆ ಪೆಟ್ಟುಕೊಟ್ಟು ತೋರಿಸುತ್ತಾನೆ, ಈ ಕಥೆಯನ್ನು ಕೇಳಿ ನಾವು ಪರಮಾತ್ಮನಲ್ಲಿ ನಮ್ಮ ಅಹಂಕಾರ ನಾಶ ಮಾಡೆಂದು ಕೇಳಿಕೊಳ್ಳಬೇಕು. ದೇವರು ನರ್ತನ ಮಾಡುವಾಗ ಕಾಲಿಯ ನಾಗನ ಬಾಯಿಯಿಂದ ರಕ್ತ ಬರುತ್ತದೆ. ದಶಮ ಸ್ಕಂಧ ಭಾಗವತದ ಪ್ರೇರಣೆಯಿಂದ ವಾದಿರಾಜ ಸ್ವಾಮಿಗಳು ರುಕ್ಷಿಣೀಶ ವಿಜಯ ಬರೆಯಲು ಪ್ರೇರೇಪಿಸಿದೆ ಎಂದು ಸತ್ಯಧರ್ಮತೀರ್ಥರು ಹೇಳುತ್ತಾರೆ.
ಬ್ರಹ್ಮದೇವರು ಮೃದಂಗ ವಾದನ ಮಾಡಿದರೆ, ಹನುಮಂತ ದೇವರು ಹಾಡುತ್ತಾರೆ. ರುದ್ರದೇವರು ತಾಳ ತಟ್ಟುತ್ತಾರೆ ಎಂದು ಹೇಳುವ ವರ್ಣನೆಯನ್ನು ರುಕ್ಷ್ಮೀಶ ವಿಜಯದಲ್ಲಿ ಹೇಳಿದ್ದಾರೆ. ಶ್ರೀಮದಾಚಾರ್ಯರು ಹೇಳುತ್ತಾರೆ, ನಾಗನಿಗೆ ಎಷ್ಟು ತಾಪ ಆಗಿರಬೇಕು. ಇಡೀ ಜಗತ್ತನ್ನೇ ತನ್ನ ಉದರದಲ್ಲಿಟ್ಟುಕೊಂಡ ಪರಮಾತ್ಮನೇ ನರ್ತನ ಮಾಡುವಾಗ ಎನ್ನುತ್ತಾರೆ. ನಾಗ ಪತ್ನಿಯರು ಪರಮಾತ್ಮನ ದಯವಿದ್ದರೆ ಮಾತ್ರ ತಮ್ಮ ಪತಿ ಬದುಕಲು ಸಾಧ್ಯ ಎಂದು ಶ್ರೀಕೃಷ್ಣ ಪರಮಾತ್ಮನಿಗೆ ಮೊರೆ ಹೋಗುತ್ತಾರೆ. ಶರಣಾಗತರಾಗಿದ್ದಾರೆ, ಗಂಡ ತಪ್ಪು ಮಾಡಿದಾಗ ಹೆಂಡತಿ ಪರಮಾತ್ಮನಿಗೆ ಶರಣಾಗಿ ಕ್ಷಮೆ ಕೇಳಬೇಕು. ಅದೇ ರೀತಿ ಹೆಂಡತಿ ತಪ್ಪು ಮಾಡಿದಾಗ ಗಂಡ ಸುಧಾರಿಸಿಕೊಳ್ಳಬೇಕು ಇಬ್ಬರೂ ಧರ್ಮದ ಮಾರ್ಗದಲ್ಲಿ ಇರಬೇಕು ಒಬ್ಬರು ಅಕಸ್ಮಾತ್ ತಪ್ಪು ಮಾಡಿದರೆ ಇನ್ನೊಬ್ಬರು ಪ್ರೋತ್ಸಾಹ ಕೊಡದೆ ಅದನ್ನು ತಿದ್ದಿಕೊಳ್ಳಲು ಸಹಾಯ ಮಾಡಬೇಕೆಂದು ಪತಿವ್ರತಾ ಧರ್ಮ ತೋರಿಸುತ್ತಾರೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ