ಶ್ರೀ ಸತ್ಯಾತ್ಮವಾಣಿ -43: ಗೋವತ್ಸ ಗೋಪಾಲ ಶ್ರೀಕೃಷ್ಣ ಪರಮಾತ್ಮ

Upayuktha
0


ಶ್ರೀಕೃಷ್ಣ ಪರಮಾತ್ಮ ಗೋಕುಲದಿಂದ ವೃಂದಾವನಕ್ಕೆ ಎಲ್ಲರನ್ನು ಕರೆದುಕೊಂಡು ಬಂದಿದ್ದಾನೆ. ಕೃಷ್ಣನ ಆಜ್ಞೆಯನ್ನು ಪರಿಪಾಲನೆ ಮಾಡಬೇಕು. ಕೃಷ್ಣ ತನ್ನ ಮಹಿಮೆಯನ್ನು ತೋರಿಸಿದ್ದಾನೆ. ಗೋಕುಲದ ಎಲ್ಲ ಪ್ರಜೆಗಳ ರಕ್ಷಣೆ ಮಾಡಿ ತಾನು ಪರಮಾತ್ಮ ಎಂದು ತೋರಿಸಿದ್ದಾನೆ. ಎಲ್ಲರೂ ನಂಬದೇ ಇದ್ದಾಗ. ತನ್ನ ಒಂದೊಂದು ರೋಮ ಕೂಪದಿಂದ ತೋಳಗಳನ್ನು ಸೃಷ್ಟಿಸಿದ್ದಾನೆ. ವಿಶ್ವಾಮಿತ್ರರು ಗಾದಿರಾಜನಾಗಿದ್ದಾಗ ನಂದಿನಿಯನ್ನು ಬಲವಂತವಾಗಿ ಕರೆದುಕೊಂಡು ಹೋಗುವಾಗ ವಸಿಷ್ಠರಿಗೆ ನಂದಿನಿ ಹೇಳುತ್ತಾಳೆ.


ಭಗವಂತನ ಸೇವೆಯನ್ನು ಮಾಡುವುದಕ್ಕೆ ನಾನು ಇಲ್ಲಿರುವುದು ನಿಮಗೆ ಬೇಡ ಅನಿಸಿದರೆ ಮಾತ್ರನಾನು ಹೋಗುವ ವಿಚಾರ ಎಂದು ಹೇಳುತ್ತಾಳೆ. ಆಕಳು ಭಗವಂತನಿಗೆ ಕೃತಜ್ಞತೆ ತೋರಿಸಲು ಅವನ ಸೇವೆಯನ್ನು ಮಾಡುತ್ತದೆ. ನಂದಿನಿಗೆ ವಸಿಷ್ಠರು ಇಲ್ಲಿಯೇ ಇರಬೇಕೆಂದು ಹೇಳಿದಾಗ ನಂದಿನಿಯ ರೋಮಕೂಪದಿಂಧ ಸೈನಿಕರು ಬಂದು ಸೋಲಿಸುವಾಗ ಸ್ವಯಂ ಗೋಪಾಲಕೃಷ್ಣನ ರೋಮಕೂಪದಿಂದ ತೋಳಗಳನ್ನು ಸೃಷ್ಟಿ ಮಾಡುವುದು ವಿಶೇಷವಿಲ್ಲ. ಪುಟ್ಟ ಬಾಲಕರಾದ್ದರಿಂದ ಪುಟ್ಟ ಪುಟ್ಟ ಕರುಗಳನ್ನು ಕಳುಹಿಸಿಕೊಟ್ಟಿದ್ದಾರೆ.


ತಿನ್ನುವುದು ಅನ್ನ ಒಂದೇ ಆಗಿದ್ದರೂ ಅರವರ ಮನಸ್ಸಿಗೆ ಬೇಕಾದಂತೆ ಅನ್ನದ ಪರಿಣಾಮದಿಂದ ಪ್ರೇರಣೆಯನ್ನು ನೀಡುತ್ತಾನೆ. ಎಲ್ಲರನ್ನು ಮೇಯಿಸುವವ ಕಾಪಾಡುವವ ಗೋಪಾಲ, ಸರ್ವಪಾಲಕ ಶ್ರೀಕೃಷ್ಣ ಪರಮಾತ್ಮ ಒಬ್ಬ ದೈತ್ಯ ಕರುವಿನ ವೇಷದಲ್ಲಿ ಬರುತ್ತಾನೆ. ರುದ್ರದೇವರನ್ನು ಕುರಿತು ತಪಸ್ಸು ಮಾಡಿ ಸಾಯಲೇ ಬಾರದು ಎಂದು ವರವನ್ನು ಪಡೆದು ಕರುವಿನ ವೇಷದಲ್ಲಿ ಬಂದಿರುತ್ತಾನೆ. ಶ್ರೀಕೃಷ್ಣ ಪರಮಾತ್ಮ ಆ ಕರುವನ್ನು ಗರ ಗರ ತಿರುಗಿಸಿ ಮೇಲೆ ಎಸೆದು ವತ್ಸಾಸುರನ ಸಂಹಾರವನ್ನು ಮಾಡಿದ ಜೊತೆಗೆ ಹಣ್ಣುಗಳನ್ನು ಉದುರಿಸಿದ್ದಾನೆ. ಗಂಗಾ ಸ್ಪರ್ಶದಿಂದ ಎಲ್ಲ ಪಾಪ ನಾಶವಾಗುತ್ತದೆ ಎಅಂತಹ ಪರಮಾತ್ಮನ ಹಸ್ತ ಸ್ಪರ್ಶದಿಂಧ ಪವಿತ್ರವಾದ ಹಣ್ಣುಗಳನ್ನು ಎಲ್ಲರೂ ಸ್ವೀಕರಿಸಿದರು. ಶ್ರೀ ಕೃಷ್ಣ ಪರಮಾತ್ಮನ ಸರ್ವೋತ್ತಮತ್ವವನ್ನು ತಿಳಿಯಬಹುದು. ಶ್ರೀಕೃಷ್ಣ ಪರಮಾತ್ಮ ಅನುಗ್ರಹ ಮಾಡಬೇಕಾದರೆ ಧರ್ಮದ ವೇಷ ಹಾಕಿ ಮೋಸ ಮಾಡಬಾರದು. ನಾವು ಮನುಷ್ಯರಿಗೆ ಮೋಸ ಮಾಡಬಹುದು ಪರಮಾತ್ಮನಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂಬ ನೀತಿ ತಿಳಿಸಿಕೊಡುತ್ತಾನೆ. ಪರಮಾತ್ಮ ಎಲ್ಲ ಕರುಗಳನ್ನು ಪ್ರೀತಿಯಿಂದ  ಕಾಪಾಡುತ್ತಾನೆ ವೇಷದಲ್ಲಿ ಬಂದ ದೈತ್ಯನ ಸಂಹಾರ ಮಾಡಿದ. ಶ್ರದ್ಧೆಯಿಂದ ಭಕ್ತಿ ಮಾಡುವವರನ್ನು ರಕ್ಷಿಸುತ್ತಾನೆ. ಜನರಿಗೆ ಮೋಸ ಮಾಡಿ ಹಣವನ್ನು ಪಡೆಯಬಹುದು ವೇಷ ಹಾಕುವವರಿಗೆ ಮೋಸ ಮಾಡುವವರಿಗೆ ಭಗವಂತ ಶಿಕ್ಷೆಯನ್ನು ಕೊಡತ್ತಾನೆ. ವತ್ಸನೇ ಆದರೆ ರಕ್ಷಿಸುತ್ತಾನೆ. ಕರುವಿನಂತೆ ತೋರುವವನ್ನು ವೇಷ ಹಾಕುವವನ್ನು ರಕ್ಷಿಸುವುದಿಲ್ಲ. ಶೃದ್ದೆಯಿಂದ ನಿಜವಾದ ಧರ್ಮ ಮತ್ತು ಅದರ ಮಹತ್ವ ತಿಳಿದು ಭಕ್ತಿ ಶ್ರದ್ದೆಯಿಂದ ಭಗವಂತನ ಸೇವೆಯನ್ನು ಮಾಡಿದರೆ ರಕ್ಷಿಸುತ್ತಾನೆ. ಮುಂದೆ ಅರಿಷ್ಟಾಸುರನನ್ನು ಎತ್ತಿನ ವೇಷದಲ್ಲಿ ಬಂದಾಗ ಸಂಹಾರ ಮಾಡುತ್ತಾನೆ ವೇಷ ಧರಿಸಿ ಬಂದವರನ್ನು ಪರಮಾತ್ಮ ರಕ್ಷಿಸುವುದಿಲ್ಲ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top