ಶ್ರೀ ಸತ್ಯಾತ್ಮವಾಣಿ- 40: ಸಿಟ್ಟು ಮಾಡದೆ ಭಕ್ತಿ ಮಾಡಿದವರಿಗೆ ಮೋಕ್ಷ ಕೊಡುವ ಕೃಷ್ಣ

Upayuktha
0



ಶ್ರೀಕೃಷ್ಣ ಪರಮಾತ್ಮ ಯಶೋದೆಗೆ ಆನಂದವನ್ನು ಕೊಡುವುದಕ್ಕಾಗಿ ಅವಳು ಮಾಡಿದ ತಪಸ್ಸು, ಸೇವೆಗಳಿಗೆ ಫಲವನ್ನು ಕೊಡುವುದಕ್ಕಾಗಿ ಪರಮಾತ್ಮ ಬಾಲ ಲೀಲೆಯಗಳನ್ನು ತೋರಿಸುತ್ತಿದ್ದಾನೆ. ಜನರು ಚೋರ ಎನ್ನಲಿ ಅಪವಾದ ಕೊಡಲಿ ಆದರೂ ಅವನ್ನೆಲ್ಲ ನಂದ ಯಶೋದೆ, ಗೋಪಾಲಕರು ಎಲ್ಲರಿಗೂ ಬಾಲಲೀಲೆಗಳನ್ನು ತೋರಿಸುತ್ತಿದ್ದಾನೆ. ನಿಜವಾದ ಜ್ಞಾನಿಗಳಿಗೆ ಇದು ಲೀಲೆ ಎಂದು ತಿಳಿದಿದೆ ಕೃಷ್ಣ ಚೋರ ಎಂದು  ಬಂದು ಚಾಡಿ ಹೇಳುತ್ತಿದ್ದವರಿಗ್ಯಾರಿಗೂ ಅವನ ಮೇಲೆ ಸಿಟ್ಟು ಬೇಸರ ಇರಲಿಲ್ಲ ಅವನು ಮನೆಗೆ ಬಂದು ಚೋರತನ ಮಾಡಿ ಓಡಿ ಹೋಗುತ್ತಿದ್ದ ನಿಲ್ಲುತ್ತಿದ್ದಿಲ್ಲ. ಚಾಡಿ ಹೇಳುವ ನೆವದಿಂದ ಕೃಷ್ಣನ ಮುಖವನ್ನು ನೋಡಿ ಹಫಗಲು ಬರುತ್ತಿದ್ರು. ಅಂತಹವರಿಗೆ ಪರಮಾತ್ಮ ಮೋಕ್ಷವನ್ನೇ ಕೊಟ್ಟಿದ್ದಾನೆ. ಸಿಟ್ಟು ಮಾಡದೇ ಭಕ್ತಿ ಮಾಡಿದವರಿಗೆ ಮೋಕ್ಷವನ್ನೇ ಕೊಟ್ಟಿದ್ದಾನೆ. ಸಿಟ್ಟು ಮಾಡಿದವರಿಗೆ ತಕ್ಕ ತಕ್ಕ ಸ್ಥಿತಿಯನ್ನು ಅವರಿಗೆ ಕೊಟ್ಟಿದ್ದಾನೆ. 


ಭಗವಂತ ತಾವು ಭಕ್ತಿಯನ್ನು ಮಾಡಿ ಇನ್ನೊಬ್ಬರ ಭಕ್ತಿಯನ್ನು ನೋಡಿ ಸಂತಸ ಪಡುವವರಿಗೆ ಉತ್ತಮ ಫಲವನ್ನು ಕೊಟ್ಟಿದ್ದಾನೆ. ಯಾರು ಬೇಸರದಿಂದ ಪೂಜೆಯನ್ನು ಮಾಡುವವರಿಗೆ ಪೂಜೆ ಮಾಡುವವರಿಗೆ ವಿಘ್ನವನ್ನು ಮಾಡುವವಿಗೆ ದೇವರು ಶಿಕ್ಷೆಯನ್ನು ಕೊಡುತ್ತಾನೆ. ನವವೀತ ಕೊಟ್ಟ ಗೋಪಿಕಾ ಸ್ತ್ರೀಯರಿಗೆ ಮಾತ್ರ ಸಂಬಂಧವಿಲ್ಲ ಇಂದಿಗೂ ನಿಮ್ಮ ಮನೆಯಲ್ಲಿ ನೈವೇದ್ಯ ಮಾಡುವವರಿಗೆ ಅತಿಥಿ ಆಭ್ಯಾಗತರಿಗೆ ಸತ್ಕಾರ ಮಾಡುವವರಿಗೆ ಉತ್ತಮ ಗತಿಯನ್ನು ಕೊಡುತ್ತಾನೆ. ಇದಕ್ಕೆ ವಿಪರೀತವಾಗಿ ಯಾರು ತಾವು ನೈವೇದ್ಯ ಮಾಡುವುದಿಲ್ಲ ಯಾರು ನೈವೇದ್ಯ ಮಾಡುವವರಿಗೆ ಬೈಯ್ಯುತ್ತಾರೆ ಎಂದರೆ ಅವರಿಗೆ ಶಿಕ್ಷೆಯನ್ನು ಕೊಡುತ್ತಾನೆ ಎಂದು ಶ್ರೀಮದಾಚಾರ್ಯರು ತಿಳಿಸಿಕೊಟ್ಟಿದ್ದಾರೆ. ಮೊದಲೆಲ್ಲಾ ಕೃಷ್ಣನ ಮೇಲೆ ದೂರು ಬಂದಿದ್ದವು ಅವಳು ನಂಬಿರಲಿಲ್ಲ ತಾನು ಒಬ್ಬನೇ ತಿನ್ನುವುದಿಲ್ಲ ಬೆಕ್ಕು ಮಂಗ ಇವುಗಳಿಗೆ ತನ್ನ ಸಹಚರ ಗೋಪಾಲಕರಿಗೂ ಕೊಟ್ಟು ತಿನ್ನುತ್ತಾನೆ ಎಂದು ಈಗ ಎದುರಿಗೆ ನೋಡಿದ ನಂತರ ಅವನಿಗೆ ಶಿಕ್ಷೆ ಕೊಡಬೇಕು ಎಂದುಕೊಂಡಿದ್ದಾಳೆ. ಅವಳು ಮಗನ ಆಟ ನೋಡಿ ನಗುತ್ತಿದ್ದಾಳೆ, ತಪ್ಪು ಮಾಡಿದಾಗ ಸಿಟ್ಟು ಬಂದಂತೆ ತೋರಿಸಲು ಸಿಟ್ಟಾಗಿದ್ದಾಳೆ. ಭಕ್ತಿಗೆ ಮಾತ್ರ ಒಲಿಯುವವ ಆದ್ದರಿಂದ ನಿಜವಾದ ಪ್ರೀತಿಯಿಂದ ಪರಮಾತ್ಮನನ್ನು ಭಕ್ತಿ ಮಾಡಿದ ಕಾರಣ ಯಶೋದೆಗೆ ಒಲಿದ. ಅವನನ್ನು ಶಿಕ್ಷಿಸಲು ಅವನನ್ನು ಕಟ್ಟಬೇಕು ಎಂದು ಪ್ರಯತ್ನ ಪಟ್ಟಳು.


ಮಾವಿನ ಚಿಗುರಿನ ಸಮಯವಾದ ಹೊಟ್ಟೆ ಅಷ್ಟು ತೆಳ್ಳಗಿನ ಹೊಟ್ಟೆ mಯಲ್ಲಿ ಇಡೀ ಜಗತ್ತೇ ಇದೆ ಎಂದು ಶ್ರೀಮದಾಚಾರ್ಯರು ದ್ವಾದಶ ಸ್ತೋತ್ರದಲ್ಲಿ ಹೇಳಿದ್ದಾರೆ. 32 ಲಕ್ಷಣದಲ್ಲಿ ಹೃದಯ ವಿಶಾಲವಾಗಿರಬೇಕು (ಮನಸ್ಸು ಔದಾರ್ಯ ಎದೆ ಕೂಡ ವಿಶಾಲವಾಗಿದೆ) ಹೊಟ್ಟಗೆ ಕಟ್ಟಿದರೆ ಸಾಕಾಗಲಿಲ್ಲ ಆದರೆ 2 ಅಂಗುಲ ಕಡಿಮೆ ಆಯಿತು. ಭಕ್ತಿ ಪ್ರೀತಿ ಇದೆ ಆದರೆ ಜ್ಞಾನ ಇಲ್ಲದೇ ಹೋದಾಗ ಪರಮಾತ್ಮ ಸಿಗುತ್ತಿಲ್ಲ ಪರಮಾತ್ಮ ಅಣುರ್ ಅಣಿಯಾನ್ ಮಹತೋ ಮಹಿಯಾನ್ ಕೂಡ ಇದ್ದಾನೆ ಎಂಬ ಜ್ಞಾನವು ಯಶೋದೆಗೆ ಅನುಸಂಧಾನ ಬಂದಾಗ  ಮಾಹಾತ್ಮ್ಯ ಜ್ಞಾನ ಬಂದು ವೈರಾಗ್ಯ ಬಂದಾಗ ಯಶೋದೆಗೆ ಪರಮಾತ್ಮ ದೊರೆತಿದ್ದಾನೆ. ಪರಮಾತ್ಮನ ವಿರುದ್ಧ ನಾವು ಹೋಗಬಾರದು ಎಂಬ ಜ್ಞಾನ ವೈರಾಗ್ಯ ಬಂದಾಗ ಪರಮಾತ್ಮ ದೊರೆಯುತ್ತಾನೆ. ಇದು ಪರಮಾತ್ಮನ ಅದ್ಭುತವಾದ ಅಚಿಂತ್ಯವಾದ ಶಕ್ತಿ.  ಶಾಸ್ತ್ರದಲ್ಲಿ ಬರುವ ಪರಮಾತ್ಮನ ಮಾಹಾತ್ಮ್ಯ ಜ್ಞಾನದ ಕಥೆಯನ್ನು ಕೇಳಿ ಆನಂದ ಪಡಬೇಕು ಏಕೆಂದರೆ ಯಶೋದಾ ದೇವಿಗೆ ಆ ಭಾಗ್ಯವನ್ನು ಎದುರಿಗೆ ನೋಡಲು ಅವಕಾಶವನ್ನು ಕರುಣಿಸಿದ್ದಾನೆ ಎಂಬ ಕತೆಯನ್ನು ಕೇಳಬೇಕು.


ಶ್ರೀಮದಾಚಾರ್ಯರು ಸಿಗದ ದೇವರು ಸಿಕ್ಕಿದ್ದು ದೇವರು ಭಕ್ತರ ವಶನಾಗುತ್ತಾನೆ ಎಂಬ ಕಾರಣದಿಂದ ಕಟ್ಟಿಸಿಕೊಳ್ಳದ ದೇವರು ಕಟ್ಟಿಸಿ ಕೊಂಡಿದ್ದು ಯಾಕೆ ಎಂದರೆ ಮಕ್ಕಳು ತಾಯಿಗೆ ವಶರಾಗಿರಬೇಕು ಎಂಬುದನ್ನು ಶ್ರೀಮದಾಚಾರ್ಯರು ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡಿ ಹೇಳುತ್ತಾರೆ. ಮೂಲ ಭಾಗವತದಲ್ಲಿ ಈ ವಿಚಾರ ಸಿಗುತ್ತದೆ. ಭಾಗವತದಲ್ಲಿ ತಾಯಿಯ ಶ್ರಮವನ್ನು ನೋಡಿ ಅವಳ ಮೇಲೆ ಕರುಣೆ ಬಂದು ತಾಯಿಗೆ ಮಕ್ಕಳು ವಶದಲ್ಲಿರಬೇಕೆಂದು ತೋರಿಸಲು ಕಟ್ಟಿಸಿಕೊಂಡ ಬ್ರಹ್ಮಾದಿ ದೇವತೆಗಳಿಗೂ ಸ್ವಾಮಿಯಾದ ಭಗವಂತ ಭಕ್ತರ ಭಕ್ತಿಗೆ ವಶನಾಗಿ ಅವರು ಕರೆದಲ್ಲಿಗೆ ಬರುತ್ತಾನೆ. ನಾವು ಕರೆದರೆ ಬಂದಿಲ್ಲ ಎಂದರೆ ಯಶೋದೆಯಷ್ಟು ಭಕ್ತಿಯಿಂದ ನಾವು ಕರೆದಿಲ್ಲ ಅದಕ್ಕೆ ಅವನು ಬಂದಿಲ್ಲ ದ್ರೌಪದಿಯಷ್ಟು ಭಕ್ತಿಯಿಂದ ಕರೆದಿಲ್ಲ. ಅದಕ್ಕೆ ಬಂದಿಲ್ಲ. ನಮ್ಮಲ್ಲಿ ಅವ್ಯಕ್ತವಾದ ಭಕ್ತಿಯಿದೆ, ಅದಕ್ಕೆ ಅವನು ಅವ್ಯಕ್ತವಾಗಿ ಬಂದಿರುತ್ತಾನೆ. ಮುಖ್ಯಾವಾಗಿ ಭಕ್ತಿಯಿಂದ ಪರಮಾತ್ಮ ಒಲಿಯುತ್ತಾನೆ. ಅವನು ಒಬ್ಬನೇ ಬರುವುದಿಲ್ಲ ತಮ್ಮ ಸಂಸಾರ ಸಮೇತ ಎಲ್ಲರೂ ಕರೆದಲ್ಲಿಗೆ ಬರಲು ಆಜ್ಞೆಯನ್ನು ಮಾಡಿದ್ದಾನೆ ಎಲ್ಲ ದೇವತೆಗಳು ಭಕ್ತಿಯಿಂದ ಕರೆದವರಿಗೆ ಒಲಿಯಲು ಹೇಳಿದ್ದಾನೆ. ಪವಿತ್ರವಾದ ಶುದ್ಧವಾದ ಸ್ಥಳದಲ್ಲಿ ಹೋಗಿ ಪೂಜೆ ಸ್ವೀಕಾರ ಮಾಡಬೇಕೆಂದು ತಾನು ಹೋಗುತ್ತಾನೆ ಮತ್ತು ದೇವತೆಗಳಿಗೂ ಹೋಗಲು ಹೇಳಿದ್ದಾನೆ.  


ತಾಯಿ ತನ್ನ ಮಕ್ಕಳನ್ನು ತನ್ನ ವಶದಲ್ಲಿಟ್ಟು ಕೊಳ್ಳುತ್ತಾಳೆ. ತಾಯಿ ಮಕ್ಕಳನ್ನು ಸರಿಯಾದ ಉತ್ತಮ ಬುದ್ದಿಯನ್ನು ಕಲಿಸಬೇಕು. ಮಕ್ಕಳು ತಪ್ಪು ಮಾಡಿದಾಗ ತಾಯಿ ಅವರನ್ನು ತಿದ್ದುವ ಪ್ರಯತ್ನ ಮಾಡಬೇಕುಯ. ಮಕ್ಕಳು ಗುರು ಹಿರಿಯರು ತಂದೆ ತಾಯಿಯ ಮಾತನ್ನು ಕೇಳಿ ನಡೆಯಬೇಕೆಂದು ಜಗತ್ತಿಗೆ ತೋರಿಸಲು ಹೀಗೆ ಪರಮಾತ್ಮ ಕಟ್ಟಿಸಿ ಕೊಂಡಿದ್ದಾನೆ.. ಜಗತ್ತಿನಲ್ಲಿರುವುದೆಲ್ಲವೂ ಪರಮಾತ್ಮನ ವಶ ಅವನ ವಸ್ತುಗಳೇ ಅವನ ಅಧೀನವಾಗಿದೆ. ತನ್ನದ್ದನ್ನು ತಾನು ತಗೆದುಕೊಳ್ಳಲು ಯಾರ ಅನುಮತಿಯು ಬೇಕುಕ್ಕ. ನಾವು ದೇವರು, ದೇವತೆಗಳಿಗೆ ಒಪ್ಪಿಸದೇ ಅದು ಚೌರ್ಯ. ಹೀಗಾಗಿ ಗೋಪಾಲಕರು ದೇವತೆಗಳು ನನಗೆ ಕೊಡದೇ ತಿಂದ ಕಳ್ಳರಾಗುವುದು ಬೇಡ ಎಂದು ತನ್ನನ್ನು ಕಳ್ಳ ಎಂದರೂ ಚಿಂತೆಯಿಲ್ಲ ಎಂದು ತಾನೆ ಬೆಣ್ಣೆಯನ್ನು ಕಳ್ಳತನ ಮಾಡಿದ ಎಂದು ನಾವು  ತಿಳಿದುಕೊಳ್ಳಬೇಕು. ಇಲ್ಲಿ ನಾವು ತಿಳಿಯಬೇಕಾದ್ದು ಏನೆಂದರೆ ನಾವು ದಿನ ನಿತ್ಯ ಏನೇ ಸೇವಿಸಿದರೂ ಅದನ್ನು ಪರಮಾತ್ಮ ತೆಗೆದುಕೊಂಡು ಹೋಗುತ್ತಾನೆ, ನಾವು ಪರಮಾತ್ಮನಿಗೆ ನೈವೇದ್ಯ ಮಾಡಿ ತಿನ್ನಬೇಕು ಎಂದು ತಿಳಿಯಬೇಕು. ನಾವು ಪುಣ್ಯ ಪಡೆಯಲು ಅರ್ಪಿಸಬೇಕು. ದೇವರು ಎಲ್ಲರ ಮನೆಯಲ್ಲಿ ಸ್ವೀಕಾರ ಮಾಡಿರುತ್ತಾನೆ. ನಮ್ಮ ಪುಣ್ಯ ಸಂಪಾದನೆಗೆ ನಾವು ನೈವೇದ್ಯ ಸಮರ್ಪಣೆ ಮಾಡಬೇಕು ಎಂದು ಹೇಳಿದ್ದಾರೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top