ಪುತ್ತೂರು: ಹಾರ್ದಿಕ್ ಹರ್ಬಲ್ಸ್ ನ ಸತ್ವಮ್ ಕೊಕೋರೇಕಾ ಹರ್ಬಲ್ ಸೋಪ್‌ಗೆ ಭಾರತ ಸರ್ಕಾರದಿಂದ ಹಕ್ಕುಸ್ವಾಮ್ಯದ (ಪೇಟೆಂಟ್) ಮಾನ್ಯತೆ ದೊರೆತ ಈ ಸುಸಂದರ್ಭದಲ್ಲಿ ಹಿರಿಯರು ಹಾಗೂ ಹಿತೈಷಿಗಳಾದ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಉಪಾಧ್ಯಕ್ಷ ಸತೀಶ್ ರಾವ್, ಕಾರ್ಯದರ್ಶಿ ಡಾ. ಕೊಂಕೋಡಿ ಕೃಷ್ಣ ಭಟ್, ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಲೇಖಾ, ಹಿರಿಯ ನಿರ್ದೇಶಕ ಶಿವಪ್ರಸಾದ್ ಇ ಹಾಗೂ ಕೋಶಾಧಿಕಾರಿ ಅಚ್ಯುತ ನಾಯಕ್ ಇವರುಗಳು ಇಂದು (18-09-2024) ಕಂಪೆನಿಗೆ ಆಗಮಿಸಿ, ಹಕ್ಕು ಸ್ವಾಮ್ಯದ ಸಾಧನೆಗಾಗಿ ಅಭಿನಂದಿಸಿದರು.
ಸತ್ವಮ್ ತನ್ನ ಇನ್ನಷ್ಟು ಹೊಸ ಉತ್ಪನ್ನಗಳಿಂದ ಗ್ರಾಹಕರ ಆರೋಗ್ಯವನ್ನು ವರ್ಧಿಸಿ, ಸರ್ವತೋಮುಖ ಅಭಿವೃದ್ಧಿಯ ಜೊತೆಗೆ, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ, ಸದೃಢ ದೇಶದ ನಿರ್ಮಾಣದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡುವಂತಾಗಲಿ ಎಂದು ಮಾರ್ಗದರ್ಶನ ಮಾಡಿ, ಶುಭಾಶೀರ್ವಾದಗಳನ್ನು ಮಾಡಿದರು.
ಸತ್ವಮ್ ಹಿನ್ನೆಲೆ:
ಹಾರ್ದಿಕ್ ಹರ್ಬಲ್ಸ್ ನ ಸತ್ವಂ ಕೋಕೋ ರೇಖಾ ಹರ್ಬಲ್ ಸೋಪ್ ಗೆ ಪೇಟೆಂಟ್ ಮಾನ್ಯತೆ ಪುತ್ತೂರು ಸಮೀಪದ ಕೆದಿಲದಲ್ಲಿರುವ ಹಾರ್ದಿಕ್ ಹರ್ಬಲ್ಸ್, Satvam (ಸತ್ವಮ್) ಬ್ರಾಂಡ್ ನ ಮೂಲಕ ಅನೇಕ ಆರೋಗ್ಯಕರ ಗಿಡಮೂಲಿಕಾ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ಇದೀಗ ಇವರ ಪ್ರಮುಖ ಉತ್ಪನ್ನವಾದ "ಸತ್ಯಮ್ ಕೊಕೋರೇಕಾ"- ಹರ್ಬಲ್ ಬಾಥಿಂಗ್ ಸೋಪ್ ಗೆ ಭಾರತ ಸರ್ಕಾರದಿಂದ ಪೇಟೆಂಟ್ ಲಭಿಸಿದೆ.
ನವೆಂಬರ್ 2021ರಲ್ಲಿ ಪ್ರಾರಂಭವಾದ ಈ ಸುದೀರ್ಘ ಪ್ರಕ್ರಿಯೆಯು ಅನೇಕ ಹಂತಗಳನ್ನು ಯಶಸ್ವಿಯಾಗಿ ಕ್ರಮಿಸಿ, ಬಳಿಕ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ (NBA) ಅನುಮೋದನೆಯನ್ನೂ ಪಡೆದು, ಭಾರತ ಸರ್ಕಾರದ ಹಕ್ಕುಸ್ವಾಮ್ಯ ಕಾರ್ಯಾಲಯ (The Patent Office, GOI) ದಿಂದ 13 ಸೆಪ್ಟೆಂಬರ್ 2024ರಂದು ಅಧಿಕೃತವಾಗಿ ಹಕ್ಕುಸ್ವಾಮ್ಯ ಪಡೆದುಕೊಂಡಿದೆ. ಇದರೊಂದಿಗೆ ಈ ವಿಶೇಷ ಉತ್ಪನ್ನದ ಹಕ್ಕು ಸ್ವಾಮ್ಯವನ್ನು ಮುಂದಿನ 20 ವರ್ಷಗಳಿಗೆ ಹಾರ್ದಿಕ್ ಹರ್ಬಲ್ಸ್ ಕಾಯ್ದಿರಿಸಿಕೊಂಡಿದೆ.
ಸತ್ಯಮ್ ಕೊಕೋರೇಕಾ (Satvam CocoReca) ಕೇವಲ ಒಂದು ಸಾಮಾನ್ಯ ಸಾಬೂನಿನಂತಲ್ಲ. ಅಡಿಕೆ ಹಣ್ಣಿನ ಸಿಪ್ಪೆಯ ರಸ, ತೆಂಗಿನ ಎಣ್ಣೆ, ಅಲೋವೆರಾ, ಸಾಗುವಾನಿ ಎಲೆ, ಅರಿಶಿನ ಎಣ್ಣೆ, ಕೊತ್ತಂಬರಿ ಮತ್ತು ಲಾವಂಚದಂತಹ ಪ್ರಬಲ ಗಿಡಮೂಲಿಕೆಗಳ ಸಮೃದ್ಧ ಮಿಶ್ರಣದಿಂದ ತಯಾರಿಸಲ್ಪಟ್ಟ ಈ ಸಾಬೂನು ತ್ವಚೆಯ ರಕ್ಷಣೆಗಾಗಿ ಪ್ರಕೃತಿಯ ಸತ್ಯವನ್ನು ಬಳಸಿ, ನೈಸರ್ಗಿಕ ಮತ್ತು ಪ್ರಯೋಜನಕಾರಿ ಸ್ನಾನದ ಅನುಭವವನ್ನು ಒದಗಿಸುತ್ತದೆ. ಸತ್ಯಮ್ ಕೊಕೋರೇಕಾ ಗಿಡಮೂಲಿಕಾ ಸಾಬೂನು ತ್ವಚೆಯನ್ನು ಬಲಪಡಿಸುವ, ಸುಕ್ಕುಗಳನ್ನು ಕಡಿಮೆ ಮಾಡುವ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದು ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆಯಂತಹ (ಸಿಬ್ಬ) ಪರಿಸ್ಥಿತಿಗಳಲ್ಲಿ ಸಹಾಯ ಮಾಡುತ್ತದೆ. ತುರಿಕೆಯನ್ನು ನಿವಾರಿಸುತ್ತದೆ ಮತ್ತು ಗಾಯಗಳ ಗುಣಪಡಿಸುವಿಕೆಯನ್ನು ವೇಗಗೊಳಿಸುತ್ತದೆ. ಈ ಉತ್ಪನ್ನವು ಚರ್ಮದ ಆರೋಗ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸುಸ್ಥಿರತೆಯನ್ನು ಕಾಯ್ದುಕೊಳ್ಳುಲು ನೆರವಾಗುತ್ತದೆ. ಇದರೊಂದಿಗೆ ಸ್ಥಳೀಯ ಮೂಲದ ನೈಸರ್ಗಿಕ ಕೃಷಿ, ಔಷಧೀಯ ಪದಾರ್ಥಗಳ ಉತ್ಪಾದನೆ ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವ ಜೊತೆಗೆ ಪೇಟೆಂಟ್ ನಿಂದ ವೈಜ್ಞಾನಿಕವಾಗಿ ಔಷಧೀಯ ಗುಣಗಳು ಸಾಬೀತಾಗಿರುವುದರಿಂದ ಅಡಿಕೆ ಕೃಷಿಯ ಮೌಲ್ಯ ವರ್ಧನೆ ಹಾಗೂ ಅಡಿಕೆಯಲ್ಲಿರುವ ಔಷಧೀಯ ಗುಣಗಳನ್ನು ಪ್ರಚುರಪಡಿಸಿದಂತಾಗಿದೆ.
ಈ ಸಾಧನೆಯ ಸಂದರ್ಭದಲ್ಲಿ ಕಂಪೆನಿಯು ತನ್ನ ಪ್ರಕಟಣೆಯಲ್ಲಿ- “ಹಾರ್ದಿಕ್ ಹರ್ಬಲ್ಸ್ ಅನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ. ಗ್ರಾಹಕರ ತ್ವಚೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಪೋಷಿಸುವಂತಹ ಪ್ರಕೃತಿ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸಿ, ಗ್ರಾಹಕರಿಗೆ ತಲುಪಿಸುವ ನಮ್ಮ ಧೈಯವನ್ನು ಮುಂದುವರಿಸಲು ಈ ಪೇಟೆಂಟ್ ಮಹತ್ವದ ಸ್ಫೂರ್ತಿಯಾಗಿದೆ'' ಎಂದು ತಿಳಿಸಿದೆ.
ಈ ಪೇಟೆಂಟೊಂದಿಗೆ ಹಾರ್ದಿಕ್ ಹರ್ಬಲ್ಸ್, ತಮ್ಮ ಪೇಟೆಂಟೊಂದಿಗೆ ಹಾರ್ದಿಕ್ ಹರ್ಬಲ್ಸ್, ವ್ಯಾಪ್ತಿಯನ್ನು ವಿಸ್ತರಿಸಲು, ವ್ಯಾಪಕ ಗ್ರಾಹಕರಿಗೆ ಸತ್ವಮ್ ಕೊಕೊರೇಕಾ (Sátvam CocoReca) ಪರಿಚಯಿಸಲು ಉತ್ಪಾದಿಸಲು ಹಿಂದೆಂದಿಗಿಂತಲೂ ಉತ್ಸುಕವಾಗಿದೆ.
ಹಾರ್ದಿಕ್ ಹರ್ಬಲ್ಸ್ ಸಂಪರ್ಕ: +91 8792127459 /
info@hardikherbals.com / www.hardikherbals.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ