ಮೊಬೈಲನ್ನು ಮೊರದ ಬಾಗಿನದಲ್ಲಿ ಇಟ್ಟು ಕೊಟ್ಟಿದ್ದಾದರೆ ಮತ್ತೆ ವಾಪಾಸ್ ತಗೊಳೋಕೆ ಬರಲ್ಲ.
ಆದಿಶಕ್ತಿಯ ಸ್ವರೂಪ ಎಂದು ಹೇಳುವ ಮೊಬೈಲ್‌ನ್ನು ಬಾಗಿನ ಕೊಟ್ಟಿದ್ದರೆ ಇದರಿಂದ ಕುಲದೇವತೆ ತೃಪ್ತಿ ಹೊಂದಿ "ಮೊಬೈಲ್ ಸಿಗ್ನಲ್" ದಾರಿದ್ರ್ಯ ನಿವಾರಣಾ ಸಿದ್ದಿರಸ್ತು ಅಂತ ಆಶೀರ್ವಾದ ಮಾಡಿಯಾಗಿರುತ್ತೆ!!
ಮೊಬೈಲ್ ಬಾಗಿನ ದಾನ ಕೊಟ್ಟಾಗಿದ್ರೆ, ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹ ಪ್ರಾಪ್ತಿ, ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ.
ಮೊಬೈಲ್ ದಾನದಿಂದ ನಿತ್ಯ ಸಮಯ ದಾರಿದ್ರ್ಯ ನಿವಾರಣೆ ಆಗಿ, ಜೀವನದಲ್ಲಿ ಉತ್ತಮ ಅಭಿವೃದ್ಧಿ ಆಗುವುದು.
ಮೊಬೈಲ್ ದಾನದಿಂದ ಇಷ್ಟಾರ್ಥಸಿದ್ಧಿಯ ಜೊತೆಗೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಸರ್ವಕಾರ್ಯ ವಿಜಯ, ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ. ರಕ್ತದೊತ್ತಡ ಸಹಜಸ್ಥಿತಿಗೆ ಮರಳುತ್ತವೆ.
ಮೊಬೈಲ್ ಬಾಗಿನ ದಾನದಿಂದ ದೃಷ್ಟಿ ಆಗೋದು, ದೃಷ್ಟಿ ದೋಷ, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ.
ಮೊಬೈಲ್ ಬಾಗಿನ ದಾನದಿಂದ ಸತಿ ಪತಿ ಕಲಹ ನಿವಾರಣೆ, ರೋಗಬಾಧೆ, ಋಣಬಾಧೆ ನಿವಾರಣೆ, ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ.
ಇದಿಷ್ಟನ್ನು ಮೇಲುಕೊಪ್ಪ ಸಂಖ್ಯಾ ಜೋತಿಷ್ಯ ವಿದ್ವಾನ್ ಅನಾರ್ಯವರ್ದಿಯವರು ಹತ್ತು ಅಂಕೆಗಳಿರುವ ಸಿಮ್ ಸಮೇತ ಬಾಗಿನ ದಾನ ಮಾಡಿದರೆ ಲಭಿಸುವ ಫಲಗಳನ್ನು ಸ್ಪಷ್ಟವಾಗಿ ಅರುಹಿದ್ದಾರೆ.
ಆಕಸ್ಮಿಕವಾಗಿ ಬಾಗಿನದಲ್ಲಿ ಮೊಬೈಲ್ ಹೋಗಿದ್ದರೂ, ಅದನ್ನು ಹಿಂತಿರುಗಿ ಪಡೆಯುವ ಪಾಪವನ್ನು, ಅದರ ಮೌಲ್ಯವನ್ನು ಹಿಂತಿರುಗಿಸುವಂತೆ ಕೋರುವುದನ್ನೂ ಮಾಡಬಾರದು ಎಂದು ಅಕ್ಷರಗಳ ಮಂತ್ರಾಕ್ಷತೆ ನೀಡಿ ಶುಭಾಶಯ ಕೋರಿದ್ದಾರೆ.
ಎಲ್ಲರ ಮಾಹಿತಿಗಾಗಿ, ಈ ಮಾಹಿತಿಯನ್ನು, ಮಾಹಿತಿ ರೂಪವಾಗಿಯೇ ಪಡೆದು, ಆದಿ ಶಕ್ತಿ ಸ್ವರೂಪಿ ಮೊಬೈಲ್ ಮೂಲಕ, ಅನಾರ್ಯವರ್ದಿಯವರ ಸೂಚನೆಯಂತೆ ಹಂಚಿಕೊಳ್ಳಲಾಗುತ್ತಿದೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ