ಮಂಗಳೂರು: ಮನೋಜ್ ಕುಮಾರ್ ಯುವ ನಾಯಕರಾಗಿದ್ದು ಧಾರ್ಮಿಕ- ಸಾಮಾಜಿಕ- ಸಾಂಸ್ಕೃತಿಕ ರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ. ಊರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿ, ಇದೀಗ ಮೇಯರ್ ಆಗಿ ಆಯ್ಕೆಯಾಗಿ ಮಹಾನಗರದ ಹೊಣೆ ಹೊತ್ತಿದ್ದಾರೆ. ಇವರಿಂದ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ನಗರದ ಉದ್ಯಮಿ ಪಿ ಮಹಾಬಲ ಚೌಟರು ನುಡಿದರು.
ಅವರು ಸರಯೂ ಸಭಾಭವನದಲ್ಲಿ ನಡೆದ ಮನೋಜ್ ಕುಮಾರ್ ರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷರಾಗಿ ಮಾತನಾಡಿದರು. 16ನೇ ವಾರ್ಡಿನ ಮನಪಾ ಸದಸ್ಯ ಕಿರಣ್ ಕುಮಾರ್ ರವರು, ಸರಯೂ ಇಂತಹ ಶುಭ ಕಾರ್ಯಗಳನ್ನು ನಡೆಸುತ್ತಾ ಸಮಾಜಮುಖೀ ಚಿಂತನೆಯ ಚಿಣ್ಣರನ್ನು ಸಮಾಜಕ್ಕೆ ನೀಡುತ್ತಾ ಅವರಲ್ಲೂ ಸಂಸ್ಕೃತಿ -ಸಂಸ್ಕಾರಗಳನ್ನು ಬಿತ್ತುವ ಕಾರ್ಯ ಮಾಡುತ್ತಿದೆ. ಅವುಗಳಲ್ಲಿ ಇಂದು ಮೇಯರ್ ರಿಗೆ ನೀಡಿದ ಸನ್ಮಾನವೂ ಒಂದು. ಇಬ್ಬರಿಗೂ ಶುಭವಾಗಲಿ ಎಂದು ಹಾರೈಸಿದರು.
ಸರಯೂ ಸಂಸ್ಥೆಯು ತನಗೆ ಹತ್ತಿರವಾಗಿದ್ದು ಅದರ ಎಲ್ಲಾ ಕಾರ್ಯಕ್ರಮಗಳಲ್ಲೂ ತಾನು ಭಾಗವಹಿಸುತ್ತಾ ಬರುತ್ತಿದ್ದೇನೆ. ನನ್ನನ್ನು ಗೌರವಿಸಿ-ಸನ್ಮಾನಿಸಿದ್ದಕ್ಕಾಗಿ ನಾನು ಸಂಸ್ಥೆಗೆ ಋಣಿ ಎಂದು ನೂತನ ಮೇಯರ್ ಮನೋಜ್ ಕುಮಾರ್ ಸನ್ಮಾನಕ್ಕೆ ಉತ್ತರಿಸಿದರು.
ವಳಚ್ಚಿಲ್‌ನ ಎಕ್ಸ್‌ಪರ್ಟ್ ಕಾಲೇಜಿನ ಉಪನ್ಯಾಸಕ ಭಾಲಕೃಷ್ಣ ಶೆಟ್ಟಿ, ರಾಘವ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ, ಯಕ್ಷ ಗುರು ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿದರು. ಮಾ. ಪ್ರತೀಕ್ ರಾವ್ ಪ್ರಾರ್ಥಿಸಿದರು. ಶ್ರೀಮತಿ ರಮ್ಯಾ ರಾಜ್ ಸನ್ಮಾನ ಪತ್ರ ವಾಚಿಸಿದರು. ವಿಜಯ ಲಕ್ಮೀ ಎಲ್. ನಿಡ್ದಣ್ಣಾಯ ವಂದಿಸಿದರು. ಸರಯೂ ಸಂಸ್ಥೆಯ ಶಿಕ್ಷಣಾರ್ಥಿಗಳು, ಅವರ ಪೋಷಕರು ಹಾಗೂ ಪರಿಸರವಾಸಿಗಳು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ