ಉಡುಪಿ: ಅಯೋಧ್ಯಾ ರಾಮಮಂದಿರದ ವಿಶ್ವಸ್ತರಾದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶುಕ್ರವಾರ ಅಯೋಧ್ಯೆ ತಲುಪಿದ್ದು ಒಂದು ವಾರ 26ರ ವರೆಗೆ ಅಲ್ಲೇ ಮೊಕ್ಕಾಂ ಇರುವರು.
ಈ ಸಂದರ್ಭದಲ್ಲಿ ರಾಮಮಂದಿರದ ಯಾಗಶಾಲೆಯಲ್ಲಿ ವಿದ್ವಾನ್ ಶಶಾಂಕ್ ಭಟ್ ನೇತೃತ್ವದ ವೈದಿಕರ ನೇತೃತ್ವದಲ್ಲಿ ಪ್ರತಿನಿತ್ಯ ರಾಮತಾರಕ ಯಜ್ಞವನ್ನು ಶ್ರೀಗಳು ಸಂಕಲ್ಪಿಸಿದ್ದು ಶನಿವಾರ ಆರಂಭಗೊಂಡಿದೆ. ಶ್ರೀಗಳು ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ಶ್ರೀ ಮಠದ ಅಯೋಧ್ಯೆಯ ಶಾಖೆಯಲ್ಲಿ ಪಟ್ಟದ ದೇವರ ಪೂಜೆ, ಭಜನೆ, ರಾಮಾಯಣ ಚಿಂತನೆಗಳು ನಡೆಯಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ