ಮಣಿಪಾಲ: ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಪಂಚಾಯತ್ ರಾಜ್ ಸಚಿವಾಲಯ ಭಾರತ ಸರ್ಕಾರ ಮತ್ತು ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್, ನವದೆಹಲಿ ಸಹಯೋಗದಲ್ಲಿ ಜನರೆಡೆಗೆ ಜ್ಞಾನವಾಹಿನಿ ಸರಣಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದು ಈ ಸರಣಿಯ 3ನೇ ಸಂಚಿಕೆಯಲ್ಲಿ ಆರೋಗ್ಯಕರ ಗ್ರಾಮ ಎನ್ನುವ ವಿಷಯದ ಕುರಿತು ಪ್ರಹಸನ ಮತ್ತು ಸಂದರ್ಶನ ಪ್ರಸಾರವಾಗಲಿದೆ.
ಇದು ಸೆಪ್ಟೆಂಬರ್ 12 ರಂದು ಗುರುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಪ್ತಿಯಾ, ಶೆಟ್ಟಿ, ದೇವಿಪ್ರಸಾದ್ ಕೆಮ್ಮಣ್ಣು, ಸತೀಶ್ ಕೊಡವೂರು, ಪುಟಾಣಿ ಧನುಶ್ರೀ ಉದಯ್ ಕುಮಾರ್, ಸುನೀತಾ ಅಂಡಾರು, ಅಲೆವೂರು ಗ್ರಾಮಪಂಚಾಯತ್ ನ ಆಶಾ ಕಾರ್ಯಕರ್ತೆ ನವ್ಯಾ ಪ್ರಭು ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್13 ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು.
ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ನ ಆಪ್ ಗಳ ಮೂಲಕವೂ ಕೇಳಬಹುದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ