ಕಾರಡ್ಕದಲ್ಲಿ ಸ್ಪೋರ್ಟ್ಸ್ ಶಾಲೆ ಬೇಕು: ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಒತ್ತಾಯ

Upayuktha
0


ಮುಳ್ಳೇರಿಯಾ: ಗ್ರಾಮೀಣ ಪ್ರದೇಶವಾದ ಕಾರಡ್ಕದಲ್ಲಿ ಅನೇಕ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಸಾಕಷ್ಟು ಸ್ಥಳಾವಕಾಶ ಇದೆ. ಇಲ್ಲಿ ಒಂದು ಸ್ಪೋರ್ಟ್ಸ್ ಶಾಲೆ ಸ್ಥಾಪನೆಯಾಗಬೇಕು ಎಂದು ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಒಕ್ಕೊರಲಿನಿಂದ ಒತ್ತಾಯಿಸಿದೆ. ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಕಾಸರಗೋಡಿನ ಮಂದಿಗೆ ಇದೊಂದು ಅಗತ್ಯವೂ ಹೌದು ಎಂದು ಸಭೆಯು ಅಭಿಪ್ರಾಯಪಟ್ಟಿತು.


ಶತಮಾನದ ಹಿರಿಮೆಯುಳ್ಳ ಕಾರಡ್ಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಕುಮಾರ್ ಕೆ, ಉಪಾಧ್ಯಕ್ಷರಾಗಿ ಬಶೀರ್ ಬಿ, ಮಾತೃ ಸಮಿತಿ ಅಧ್ಯಕ್ಷರಾಗಿ ರಂಜಿನಿ, ಎಸ್ ಎಂ ಸಿ  ಅಧ್ಯಕ್ಷರಾಗಿ ಸುರೇಶ್ ಮೂಡಾಂಕುಳ ಆಯ್ಕೆಯಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top