ಶಕ್ತ ರಾಷ್ಟ್ರದ ಜೊತೆ ಮೈತ್ರಿ ಸಾಧಿಸಲು
ನಮ್ಮ ಅರಸನಿಗೆ ಏನೋ ತವಕ |
ಶತ್ರು ರಾಷ್ಟ್ರದ ಹೆಡೆಮುರಿ ಕಟ್ಟಲು
ಪಣ ತೊಟ್ಟಿರುವರು ನಮ್ಮೀ ನಾಯಕ ||
ಧರ್ಮಮಾರ್ಗದಿ ನಡೆವ ಚೌಕೀದಾರನು
ಚೋರರ ಎದೆಯಲಿ ತಂದಿಹನು ನಡುಕ
ಹೆತ್ತ ತಾಯಿಯನು ಹೊತ್ತ ಮಡಿಲನು
ರಕ್ಷಣೆ ಮಾಡುವ ಪರಿಣಿತ ಪಾಲಕ |
ಆತ್ಮನಿರ್ಭರತೆಯ ಮತ್ತೆ ನೆನಪಿಸಿ
ಪ್ರಗತಿಪಥ ಹಿಡಿದ ಕ್ಷಾತ್ರ ಚೇತನ |
ನಮ್ಮೀ ನಾಯಕನಿಗೆ ಬೆಂಬಲ ಸೂಚಿಸಿ
ದೇಶಸೇವೆಗೆ ಕೈ ಜೋಡಿಸೋಣ ||
-ಸುಲಕ್ಷಣಾ ಶರ್ಮಾ
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ