ಗೌರಿಗಣೇಶರ ಹಬ್ಬವು ಬಂದಿದೆ
ಭಕ್ತಿಯ ಭಾವದಿ ನಮಿಸೋಣ|
ಗೌರವದಿಂದಲಿ ತಲೆಯನು ಬಾಗುತ
ಇಚ್ಛಿತ ಫಲವನು ಕೇಳೋಣ||
ಈಶನ ವಲ್ಲಭೆ ಪಾರ್ವತಿ ಮಾತೆಯು
ಪುತ್ರಗಣೇಶನ ಜೊತೆಯಿಹಳು|
ಕಾಶಿಸಿ ನಗುತಾ ಬರುವಳು ಭೂಮಿಗೆ
ಭಕ್ತರ ಪ್ರೇಮದಿ ಪೊರೆಯುವಳು||
ಲಂಬೋದರ ಗಣನಾಯಕ ಬೆನಕನು
ರಕ್ಷಿಸುತಿರುವನು ಅನವರತ|
ಅಂಬಾಸುತ ವರ ಸಿದ್ಧಿವಿನಾಯಕ
ವರವನು ಕೊಡುವನು ನಗುನಗುತ||
ಮೂಷಕವಾಹನ ಈಶ್ವರ ಪುತ್ರನು
ಭಕ್ತಿಯ ಪೂಜೆಗೆ ಒಲಿಯುವನು|
ಪೋಷಿಸಿ ಶರಣರ ಒಳಿತನು ಮಾಡುವ
ಪ್ರೀತಿಯ ತೋರಿಸಿ ಹರಸುವನು||
ಮಾತೆಯು ಗೌರಿಯು ಪುತ್ರನು ಬೆನಕನು
ನಮ್ಮನು ಆಶೀರ್ವದಿಸುವರು|
ಭೀತಿ ನಿವಾರಿಸಿ ಮಮತೆಯ ತೋರಿಸಿ
ಕರುಣಾ ದೃಷ್ಟಿಯ ಬೀರುವರು||
- ಅಶ್ವತ್ಥನಾರಾಯಣ, ಮೈಸೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ