ಪುತ್ತೂರು:ಫಿಲೋಮಿನಾ ಕಾಲೇಜಿಗೆ 'CHEMERGENCE -2024'ಸ್ಪರ್ಧಯಲ್ಲಿ ಹಲವು ಪ್ರಶಸ್ತಿಗಳು

Chandrashekhara Kulamarva
0


ಪುತ್ತೂರು:
ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು, ರಸಾಯನಶಾಸ್ತ್ರ ವಿಭಾಗ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆದ  'CHEMERGENCE -2024'   ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ಟರ್ನ್ ಕೋಟ್ ಹಾಗೂ ವಿಡಿಯೋ ಜಗ್ಲಿಂಗ್  ಸ್ಪರ್ಧೆಯಲ್ಲಿ  ದ್ವಿತೀಯ ವಿಜ್ಞಾನ ವಿಭಾಗದ  ಲಿಸ್ಹಾನ್ ಮಿರಾಂಡಾ ದ್ವಿತೀಯ ಹಾಗೂ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಜೀವನ್ ಮ್ಯಾಥ್ಯೂ ಮತ್ತು ಪ್ರಜ್ವಲ್ ಜಾಯ್ಸನ್ ಡಿ'ಸೋಜ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್, ಭರತ್.ಜಿ.ಪೈ  ರಶ್ಮಿ.ಪಿ.ಎಸ್ ಉಪಸ್ಥಿತರಿದ್ದರು.



إرسال تعليق

0 تعليقات
إرسال تعليق (0)
To Top