ನಮ್ಮ ಊರು ನಮ್ಮ ರಸ್ತೆ: ಹೊಂಡ ಮುಚ್ಚುವ ಅಭಿಯಾನದ 2ನೇ ಕಾರ್ಯಕ್ರಮ

Upayuktha
0


ಮಂಗಳೂರು: ಹಬ್ಬದ ದಿನಗಳು ಸಾಲು ಸಾಲು ಇರುವುದರಿಂದ ಲ್ಯಾಂಡ್ ಲಿಂಕ್ಸ್ ದೇರೇಬೈಲು ಕೊಂಚಾಡಿ ಇಲ್ಲಿನ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ಅದೇ ವೇಳೆಗೆ ರಸ್ತೆಯ ಹೊಂಡಗಳೂ ಹೆಚ್ಚುತ್ತಿವೆ. ವಾಹನ ಸವಾರರು ಮತ್ತು ಪಾದಾಚಾರಿಗಳ ಬಗ್ಗೆ ಸಾಮಾಜಿಕ ಕಳಕಳಿಯ ಚಿಂತನೆ ಮಾಡಿ ಲ್ಯಾಂಡ್ ಲಿಂಕ್ಸ್ ಸಮಾನ ಮನಸ್ಕರು ಇಂದು (ಸೆ.8) ಭಾನುವಾರ ಎಂದಿನಂತೆ ಬೆಳಗ್ಗೆ 6.30ಕ್ಕೆ ನಮ್ಮ ಊರು ನಮ್ಮ ರಸ್ತೆ ಅಭಿಯಾನ ಎರಡನೇಯ ಕಾರ್ಯಕ್ರಮದಲ್ಲಿ ರಸ್ತೆ ಹೊಂಡ ಮುಚ್ಚುವ ಕಾಮಗಾರಿ ಕೈಗೊಂಡರು.


ಲ್ಯಾಂಡ್ ಲಿಂಕ್ಸ್ ದೇರೇಬೈಲು ಕೊಂಚಾಡಿ ಇಲ್ಲಿನ ಮುಖ್ಯ ರಸ್ತೆಯ ಐ.ಓ.ಬಿ ಬಳಿ ಮತ್ತು ಕೆ.ಆರ್.ಕೆ ಅಂಗಡಿಯ ಎದುರು ಇರುವ ರಸ್ತೆ ಹೊಂಡಗಳು, 2ನೇ ಮುಖ್ಯ ರಸ್ತೆಯಲ್ಲಿರುವ ದುರ್ಗಾ ಸ್ಟೋರ್ ಬಳಿಯ ತಿರುವಿನಲ್ಲಿ ಇರುವ ಹಲವಾರು ರಸ್ತೆ ಹೊಂಡವನ್ನು ಜಲ್ಲಿಕಲ್ಲು, ಮಣ್ಣು ಇತ್ಯಾದಿಗಳನ್ನು ಬಳಸಿ ಮುಚ್ಚಲಾಯಿತು.


ಮುಂದಿನ ದಿನಗಳಲ್ಲೂ ನಮ್ಮ ಊರು ನಮ್ಮ ರಸ್ತೆ ಅಭಿಯಾನ ನಡೆಯಲಿದ್ದು, ಸಮಾಜಮುಖಿ ಸ್ವಯಂಸೇವಕರು ತಮ್ಮ ಜತೆ ಸೇರಿಕೊಳ್ಳಬಹುದಾಗಿದೆ ಎಂದು ಅಭಿಯಾನದ ಸಂಚಾಲಕರು ತಿಳಿಸಿದ್ದಾರೆ.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top