ನಿಟ್ಟೆ: ಆತ್ಮಹತ್ಯೆ ತಡೆಗಟ್ಟಲು ಮತ್ತು ಜಾಗೃತಿ ಮೂಡಿಸಲು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ಮಹಾವಿದ್ಯಾಲಯದ 'ತಾಲೀಮ್' ನಾಟಕ ಕ್ಲಬ್ ಮತ್ತು 'ಕೋಪ್' ಮಾನಸಿಕ ಆರೋಗ್ಯ ಕ್ಲಬ್ ಒಟ್ಟಾಗಿ ಸೆ.5 ರಂದು “ಚಕ್ರವ್ಯೂಹ” ಎಂಬ ಬೀದಿನಾಟಕವನ್ನು ಪ್ರಸ್ತುತಪಡಿಸಿತು.
ನಾಟಕವು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಟ ನಡೆಸುತ್ತಿರುವ ವ್ಯಕ್ತಿಗಳ ನೈಜ ಬದುಕಿನ ಕಷ್ಟಗಳನ್ನು ಅಭಿನಯದ ಮೂಲಕ ತೋರಿಸಿತು. ಆತ್ಮಹತ್ಯೆ ತಡೆಯುವುದು ಎಷ್ಟು ಅಗತ್ಯ ಎಂಬ ಸಂದೇಶವನ್ನು ತಲುಪಿಸುವ ಜೊತೆಗೆ ಅವರ ಸಹಾಯಕ್ಕಾಗಿ ಹೇಗೆ ಹೆಗಲು ನೀಡಬೇಕು ಎಂಬ ಆಶಯ ಮತ್ತು ಬೆಂಬಲವನ್ನು ಒದಗಿಸಿತು.
'ತಾಲೀಮ್' ಕ್ಲಬ್ ನಿರ್ದೇಶಿಸಿದ ಈ ನಾಟಕವು ಮೂರು ಪಾತ್ರಗಳ ಕಥೆಯನ್ನು ಪ್ರತಿಪಾದಿಸುತ್ತದೆ. ಈ ಕಥೆಯಲ್ಲಿ ಬೆಟ್ಟಿಂಗ್, ಪ್ರೇಮ ಸಂಬಂಧ ಮತ್ತು ಹೆಣ್ಣಿನ ರಕ್ಷಣೆಯನ್ನು ಮುಖ್ಯವಾಗಿ ಪ್ರಸ್ತುತಪಡಿಸಲಾಗಿದೆ. ತಕ್ಷಣದ ಸಂಪತ್ತಿಗಾಗಿ ಬೆಟ್ಟಿಂಗ್‌ನಲ್ಲಿ ತೊಡಗಿದವರು ಹೇಗೆ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ ಎಂಬುದು ನಾಟಕದ ಒಂದು ಪ್ರಮುಖ ವಿಚಾರ. ಪ್ರೇಮ ಸಂಬಂಧವು ಚಂಚಲವಾಗುತ್ತಾ, ಡ್ರಗ್ಸ್ ಮುಂತಾದ ಚಟಗಳಿಗೆ ತೊಡಗಿಸಿಕೊಳ್ಳುವುದು ಹಾಗೂ ಹೆಣ್ಣಿನ ಮಾನ ರಕ್ಷಣೆಗೆ ಅಗತ್ಯವಿರುವ ಕ್ರಮವನ್ನು ಕಂಡುಕೊಳ್ಳಬೇಕು ಎಂಬ ಪ್ರಸಂಗಗಳ ಆಡಿತೋರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ