ಸುರತ್ಕಲ್: ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಸದೃಢತೆ, ಮಾನಸಿಕ ಆರೋಗ್ಯ, ಸ್ವಯಂ ನಿಯಂತ್ರಣ, ಶಿಸ್ತು ಮತ್ತು ನಾಯಕತ್ವದ ಗುಣಗಳ ಬೆಳವಣಿಗೆಗೆ ಅಡಿಪಾಯವಾಗಿದೆ. ಕ್ರೀಡಾ ಕ್ಷೇತ್ರದ ವಿಫುಲ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡರೆ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ನುಡಿದರು.
ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ. ಕ್ರೀಡಾ ದಿನದ ಮಹತ್ವ ಮತ್ತು ಭಾರತೀಯ ಕ್ರೀಡಾ ತಾರೆ ಧ್ಯಾನ್‌ಚಂದ್‌ರ ಸಾಧನೆಗಳನ್ನು ವಿವರಿಸಿದರು.
ವಾಣಿಜ್ಯ ವಿಭಾಗದ ಡೀನ್ ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಗಣೇಶ್ ಆಚಾರ್ಯ ಬಿ. ಕ್ರೀಡಾ ಜಗತ್ತಿನ ಅನುಭವಗಳು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಸ್ಪೂರ್ತಿಯನ್ನು ನೀಡುತ್ತದೆ ಎಂದರು.
ಗ್ರಂಥ ಪಾಲಕಿ ಡಾ, ಸುಜಾತ ಬಿ., ಉಪನ್ಯಾಸಕರಾದ ಧನ್ಯ ಕುಮಾರ್ ವೆಂಕಣ್ಣವರ್, ಕುಮಾರ್ ಮಾದರ್, ಕ್ರೀಡಾ ಕಾರ್ಯದರ್ಶಿಗಳಾದ ಪೃಥ್ವಿರಾಜ್ ಎಸ್ ಅಮೀನ್, ಸ್ವಾತಿ ಶೆಟ್ಟಿ ಉಪಸ್ಥಿತರಿದ್ದರು.
ಸ್ವಾತಿ ಶೆಟ್ಟಿ ಸ್ವಾಗತಿಸಿ ಶರೋನ್ ನೆಲ್ಸನ್ ಡಿ’ಸೋಜಾ ವಂದಿಸಿದರು. ಹಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ