Motivational: ನಿಮ್ಮ ಸಂಪನ್ಮೂಲಗಳನ್ನು ವೃದ್ಧಿಸಿಕೊಳ್ಳಿ

Upayuktha
0



ಪ್ರತಿಯೊಬ್ಬರಿಗೆ ಅವರದೇ ಆದ ಸಂಪನ್ಮೂಲ ಇರುತ್ತದೆ. ಕೆಲವಾರು ಉತ್ತಮ ಕೌಟುಂಬಿಕ ಹಿನ್ನಲೆಯನ್ನು, ಕೆಲವರು. ಉತ್ತಮ ಶಿಕ್ಷಣ, ಆರ್ಥಿಕ ಸಬಲತೆ ಮುಂತಾದ ಅವರದೇ ಆದ ಸಂಪನ್ಮೂಲಗಳನ್ನು ಹೊಂದಿರುತ್ತಾರೆ.


ಆದರೆ "ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕ ಹುಡುಕಾಡಿದರಂತೆ" ಎನ್ನುವ ಹಾಗೆ ನಮ್ಮ ಸಂಪನ್ಮೂಲಗಳನ್ನು ಬಿಟ್ಟು ಏನೋ ಮಾಡಲು ಹೋಗಿ ಏನೋ ಮಾಡುತ್ತೇವೆ.


ಎಲ್ಲರ ಭೂಮಿಯಲ್ಲಿ ಎಲ್ಲವೂ ಬೆಳೆಯುವುದಿಲ್ಲ. ಹಾಗೆಯೇ ನಮ್ಮ ಭೂಮಿಯಲ್ಲಿ ಏನು ಬೆಳೆಯುತ್ತದೆ ಅದನ್ನು ಅರ್ಥ ಮಾಡಿಕೊಂಡು ನಮ್ಮ ಪ್ರತಿಭೆ ಎಂಬ ಗಿಡಕ್ಕೆ ನಮ್ಮ ಪರಿಶ್ರಮವೆಂಬ ಗೊಬ್ಬರ ಹಾಕಿದರೆ ನಮ್ಮ ಯಶಸ್ಸು ಎಂಬ ಬೆಳೆಯನ್ನು ಬೆಳೆಯಬಹುದು.


ನಮ್ಮ ಸಂಪನ್ಮೂಲಗಳನ್ನು ಸಹ  ಆಂತರಿಕ ಮತ್ತು ಬಾಹ್ಯ ಸಂಪನ್ಮೂಲಗಳು ಎಂದು ವಿಂಗಡಿಸಬಹುದು. ನಮ್ಮ ಜನ್ಮಜಾತ ಪ್ರತಿಭೆ, ಪರಿಶ್ರಮಗಳನ್ನು ಆಂತರಿಕ ಸಂಪನ್ಮೂಲಗಳು ಕರೆದರೆ, ಇನ್ನೊಬ್ಬರ ಮೇಲಿನ ನಮ್ಮ ಪ್ರಭಾವ, ಅವಕಾಶಗಳನ್ನು ಬಳಸಿಕೊಳ್ಳುವ ಜಾಣತನವನ್ನು ಬಾಹ್ಯ ಸಂಪನ್ಮೂಲಗಳು ಎಂದು ಪರಿಗಣಿಸಬಹುದು. ಈ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಬಹುದು. ಈ ದಿಕ್ಕಿನಲ್ಲಿ ಪ್ರಯತ್ನ ಇರಲಿ.


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top