ಮೂಡುಬಿದಿರೆ: ಆಳ್ವಾಸ್ ನಿಂದ ನೂತನ ಕಾನೂನು ಮಹಾವಿದ್ಯಾಲಯ ಅರಂಭ

Upayuktha
0


ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು  ತನ್ನಲ್ಲಿರುವ 19  ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ  ನೂತನ ಕಾನೂನು ಮಹಾವಿದ್ಯಾಲಯವನ್ನು ಆರಂಭಿಸುತ್ತಿದೆ. ಕಾನೂನು ಶಿಕ್ಷಣ ಎಲ್ಲಾ ಸ್ತರಗಳ ಹಾಗೂ ವಿವಿಧ ಜ್ಞಾನ ಶಾಖೆಗಳಿಗೆ ಪೂರಕವಾದ ವೃತ್ತಿ ಆಧಾರಿತ ಕೋರ್ಸ ಆಗಿದೆ.  ಮೂಡುಬಿದಿರೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಇರುವ ಶೈಕ್ಷಣಿಕ ಕರ‍್ಯಕ್ರಮವನ್ನು ಪರಿಚಯಿಸಿ, ಮಧ್ಯಮ  ಮತ್ತು ಕೆಳವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ಕೀರ್ತಿ ಆಳ್ವಾಸ್‌ಗೆ ಸಲ್ಲುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು.


ಅವರು ಮೂಡುಬಿದಿರೆಯಲ್ಲಿ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡಿ, ಹೊಸ ಕಾನೂನು ಮಹಾವಿದ್ಯಾಲಯವು  ಕರ್ನಾಟಕ  ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಸಂಯೋಜನೆಗೊಂಡಿದ್ದು, ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆ ಪಡೆದಿದೆ ಎಂದರು.


ಕರಾವಳಿ  ಕರ್ನಾಟಕದಲ್ಲಿ  ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಉದ್ಯೋಗ ಸಾಧ್ಯತೆ ಇರುವ 5 ವರ್ಷಗಳ ಬಿಕಾಂ ಎಲ್‌ಎಲ್‌ಬಿ  ಪದವಿಯನ್ನು 60 ವಿದ್ಯಾರ್ಥಿ ಪರಿಮಿತಿಯೊಂದಿಗೆ    ಹಾಗೂ 3 ವರ್ಷಗಳ ಎಲ್‌ಎಲ್‌ಬಿ ಪದವಿಯನ್ನು  60 ವಿದ್ಯಾರ್ಥಿ ಮಿತಿಯೊಂದಿಗೆ ಈ ವರ್ಷದಿಂದಲೇ ಆರಂಭಿಸುವ ಅನುಮತಿ ದೊರೆತಿದೆ.  ಕಾನೂನು ಶಿಕ್ಷಣದಲ್ಲಿ ಉತ್ತಮ ಅನುಭವ ಹೊಂದಿರುವ ಶಿಕ್ಷಕರನ್ನು ಈಗಾಗಲೇ ನೇಮಿಸಿದ್ದು,  ಗುಣಾತ್ಮಕವಾದ ಕಾನೂನು ಶಿಕ್ಷಣಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಟಿಬದ್ಧವಾಗಿದೆ.


ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿ  ಹಾಗೂ ವಿದ್ಯಾರ್ಥಿನಿಯರು 3 ವರ್ಷಗಳ ಎಲ್‌ಎಲ್‌ಬಿ ಪದವಿಗೆ ದಾಖಲಾತಿಗೊಳ್ಳಲು ಅರ್ಹತೆ ಪಡೆಯುತ್ತಾರೆ.  ಹಾಗೂ ದ್ವಿತೀಯ ಪಿಯುಸಿಯಲ್ಲಿ  ವಾಣಿಜ್ಯ ಅಥವಾ ವಿಜ್ಞಾನ ಶಾಖೆಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಬಿಕಾಮ್ ಎಲ್‌ಎಲ್‌ಬಿ ಪ್ರವೇಶಾತಿಗೆ ಅರ್ಹರು.


 ವಿಪುಲ ಅವಕಾಶಗಳು


ಹೊಸ  ಕಾನೂನು  ಮಹಾವಿದ್ಯಾಲಯದ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು  ಮೂಡುಬಿದಿರೆ  ಹಾಗೂ ರಾಜ್ಯಕ್ಕೆ  ಮತ್ತೊಂದು ಕೊಡುಗೆಯನ್ನು ನೀಡಲು ಸನ್ನದ್ಧವಾಗಿದೆ.   ವಿಶಾಲವಾದ ಸುಸಜ್ಜಿತ ಕಾನೂನು ಗ್ರಂಥಾಲಯ,  ಮೂಟ್ ಕೋರ್ಟ್ ಮತ್ತು ಇತರೆ ಎಲ್ಲಾ  ಮೂಲಭೂತ ಸೌರ‍್ಯಗಳೊಂದಿಗೆ  ವಿದ್ಯಾಗಿರಿಯಲ್ಲಿ  ಕಾಲೇಜು ಈಗಾಗಲೇ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿದೆ. ಶಿಕ್ಷಣ ಪೂರೈಸಿದ ಪದವೀಧರರು ನ್ಯಾಯವಾದಿಗಳಾಗಿ ಸ್ವಂತ ವೃತ್ತಿ ಆರಂಭಿಸಬಹುದಾಗಿದೆ. ವಿವಿಧ ಕಂಪೆನಿಗಳಲ್ಲಿ ಸಲಹೆಗಾರರಾಗಿ, ವ್ಯವಹಾರ ಆಡಳಿತಾಧಿಕಾರಿಗಳಾಗಿ, ನ್ಯಾಯಾಂಗದ ವಿವಿಧ ಹುದ್ದೆಗಳಲ್ಲಿ, ಶಾಸನ ರೂಪಿಸುವ ಪ್ರತಿನಿಧಿಗಳಾಗಿ ವೃತ್ತಿ ಕೈಗೊಳ್ಳುವ ಅಪಾರ ಅವಕಾಶಗಳಿವೆ.  ಸಮಾಜಕಾರ‍್ಯ, ಪ್ರತಿಕೋದ್ಯಮ, ಎಂಬಿಎ, ಹಾಸ್ಪಿಟಲ್ ಅಡ್ಮೀನಿಸ್ಟ್ರೇಶನ್, ಸಿಎ, ಸಿಎಸ್ ಪದವೀಧರರು ಕಾನೂನು ಶಿಕ್ಷಣ ಪಡೆದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ನೈಪುಣ್ಯತೆ ಪಡೆಯುವುದರೊಂದಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ.  


ದಾಖಲಾತಿ ಆರಂಭಗೊಂಡಿದೆ


2024-25 ಶೈಕ್ಷಣಿಕ ವರ್ಷದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ  9379525826 ಹಾಗೂ 8147760394  ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.  


ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಿಎ, ಸಿಎಸ್, ಎಸಿಸಿಎ, ಸಿಎಮ್‌ಎಸ್ ಹಾಗೂ ಯುಪಿಎಸ್ಸಿ ಕೋರ್ಸ್‌ಗಳಿಗೆ ತರಬೇತಿಯ ಜೊತೆಗೆ ದೇಶದ ವಿವಿಧ ಕಾನೂನು ವಿವಿಗಳಿಗೆ  ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳಿಗಿರುವ ಅರ್ಹತಾ ಪರೀಕ್ಷೆ  ತರಬೇತಿ ನೀಡಲಾಗುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top