ಮಂಗಳೂರು: ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ಜಾಗತಿಕ ಸಂಸ್ಥೆಯಾಗಿರುವ ಆಮ್ವೇ, ವೈಜ್ಞಾನಿಕ ಸಾಮರ್ಥ್ಯವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಿದ್ದು, ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರದಲ್ಲಿ ಅತ್ಯಂತ ನಿಖರ ಮತ್ತು ಮುಂದಿನ ಪೀಳಿಗೆಯ ಬೆಂಬಲ ವ್ಯವಸ್ಥೆಯನ್ನು ಒದಗಿಸಲು ಸುಮಾರು 40 ಲಕ್ಷ ಡಾಲರ್ ವೆಚ್ಚದಲ್ಲಿ ಬೆಂಗಳೂರು ಸೇರಿದಂತೆ ನಾಲ್ಕು ಕಡೆಗಳಲ್ಲಿ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಪ್ರಯೋಗಾಲಯಗಳನ್ನು ಆರಂಭಿಸುವ ಯೋಜನೆ ಘೋಷಿಸಿದೆ.
ಭಾರತ ಮತ್ತು ಜಗತ್ತಿನಾದ್ಯಂತದ ಜನರ ಆರೋಗ್ಯ ಮತ್ತು ಕ್ಷೇಮವನ್ನು ಬೆಂಬಲಿಸುವ ಉದ್ದೇಶದೊಂದಿಗೆ ಸುಧಾರಿತ ತಂತ್ರಜ್ಞಾನ, ಸಮಕಾಲೀನ ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆಯ ನಾಯಕತ್ವವನ್ನು ಬಳಸುವ ಮೂಲಕ ಈ ಪ್ರಯೋಗಾಲಯಗಳು ಸುರಕ್ಷಿತ, ಪರಿಣಾಮಕಾರಿ, ವಿಭಿನ್ನ ಮತ್ತು ಅಧಿಕ ಗುಣಮಟ್ಟದ ಆರೋಗ್ಯ ಮತ್ತು ಯೋಗಕ್ಷೇಮದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉದ್ಯಮದ ಮಾನದಂಡಗಳನ್ನು ಮರುವ್ಯಾಖ್ಯಾನಿಸುತ್ತದೆ ಎಂದು ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಜನೀಶ್ ಚೋಪ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಆಮ್ವೇಯ ನಾಲ್ಕು ಅತ್ಯಾಧುನಿಕ ಆರ್&ಡಿ ಪ್ರಯೋಗಾಲಯಗಳು ಗುರುಗ್ರಾಮ, ಚೆನ್ನೈ, ಬೆಂಗಳೂರು ಮತ್ತು ದಿಂಡಿಗಲ್‍ನಲ್ಲಿದ್ದು, ಇದರ ಒಟ್ಟು ವಿಸ್ತೀರ್ಣ 24,700 ಚದರ ಅಡಿ ಇದ್ದು, ಇದು ವೈಜ್ಞಾನಿಕ ಆವಿಷ್ಕಾರ ಮತ್ತು ಪ್ರಗತಿಯ ಉತ್ಪನ್ನ ಅಭಿವೃದ್ಧಿಯ ಶಕ್ತಿಕೇಂದ್ರವನ್ನು ಸೃಷ್ಟಿಸುತ್ತವೆ. ಈ ಹೂಡಿಕೆಯು ಸ್ಥಳೀಯ ಮಾರುಕಟ್ಟೆಯ ಜೊತೆಗೆ ಜಾಗತಿಕ ಮಾರುಕಟ್ಟೆಗಳ ಅಗತ್ಯತೆಗಳನ್ನು ಪೂರೈಸುವ ಜೊತೆಯಲ್ಲಿ ನವೀನ ಆಲೋಚನೆಗಳು, ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಸುತ್ತ ಸಂಶೋಧನೆ, ಪರೀಕ್ಷೆ ಮತ್ತು ಮಾನ್ಯತೆಗೊಳಿಸುವ ಸಂಸ್ಥೆಯ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಲ್ಯಾಬ್ ಗಳು ತ್ವಚೆಯ ಉತ್ಪನ್ನಗಳು ಮತ್ತು ಪ್ರೀಮಿಯಂ ಸಸ್ಯಾಧಾರಿತ ಸಾಮಗ್ರಿಗಳೊಂದಿಗೆ ಆಹಾರಗಳು, ಓರಲ್ ಸಾಲಿಡ್ಸ್, ಸೌಂದರ್ಯ ಮತ್ತು ಪರ್ಸನಲ್ ಕೇರ್ ವರ್ಗಗಳಲ್ಲಿ ಉತ್ಪನ್ನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ