ಶ್ರೀ ಮಹಾಮಾರಿಯಮ್ಮ ಯುವಕ ವೃಂದ- ಸಾರ್ವಜನಿಕ ಗಣೇಶೋತ್ಸವ

Upayuktha
0


ಮಂಗಳೂರು: ಶ್ರೀ ಮಹಾಮಾರಿಯಮ್ಮ ದೇವಸ್ಥಾನ ಗೌರಿ ಮಠ ರಸ್ತೆ, ಮಂಗಳೂರು ಆಶ್ರಯದಲ್ಲಿ ಶ್ರೀ ಮಹಾಮಾರಿಯಮ್ಮ ಯುವಕ ವೃಂದದ ವತಿಯಿಂದ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜೃಂಭಣೆಯಿಂದ ಜರುಗಿತು.


ಪ್ರತಿಷ್ಠೆಯಿಂದ ಮೊದಲ್ಗೊಂಡು ಗಣಹೋಮ, ಮಹಾಪೂಜೆ ಇತರ ಕಾರ್ಯಕ್ರಮಗಳು ವೇ. ಮೂ. ಗಣೇಶ ಬಾರಿತಾಯ ಅವರ ನೇತೃತ್ವದಲ್ಲಿ ಸಂಪನ್ನಗೊಂಡು, ಊರ ಪರವೂರ ಭಕ್ತ ಬಾಂಧವರ ಸಕ್ರಿಯ ಭಾಗವಹಿಸುವಿಕೆಯಿಂದ ವೈಭವದ ಶೋಭಾಯಾತ್ರೆಯೊಂದಿಗೆ ಮುಕ್ತಾಯಗೊಂಡಿತು.


ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀನಿಧಿ ಕಂಪ್ಯೂಟರ್ಸ್ ಪ್ರೈ ಲಿ. ಆಡಳಿತ ನಿರ್ದೇಶಕ ರಾಜೇಶ್ ಎಸ್. ರಾವ್ ಮುಖ್ಯ ಅತಿಥಿಯಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಅಧ್ಯಕ್ಷರಾಗಿ ಭಾಗವಹಿಸಿದ್ದರು.


ಯುವಕ ಮಂಡಲದ ಗೌರವಾಧ್ಯಕ್ಷ ರಾಜೇಶ್ ಜಿ, ಅಧ್ಯಕ್ಷ ನಟರಾಜ್ ಹಾಗೂ ಪದಾಧಿಕಾರಿಗಳಾಗಿರುವ ರಾಜೇಶ್ ಎನ್. ಶೆಟ್ಟಿ, ರಾಜೇಶ್ ಉಳ್ಳಾಲ, ಗುರು ಎಂ, ರೋಹಿತ್, ಸುದೇಶ್ ಆರ್. ಉಪಸ್ಥಿತರಿದ್ದರು. ಗಣೇಶ್ ಆರ್. ಹಾಗೂ ಸರ್ವ ಸದಸ್ಯರು ಅನ್ನ ಪ್ರಸಾದ ಹಾಗೂ ಸಕಲ ವ್ಯವಸ್ಥೆಗೆ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top